ಲೋಕದರ್ಶನ ವರದಿ
ಪ್ರಸಕ್ತ ಸಾಲಿನ ಪುರಸಭೆ ಉಳಿತಾಯ ಬಜೆಟ್ ಮಂಡನೆ; ಅಧ್ಯಕ್ಷೆ ವೀಣಾ ಕವಟಗಿಮಠ
ಚಿಕ್ಕೋಡಿ, 28 : ಇಲ್ಲಿನ ಸ್ಥಳೀಯ ಸಂಸ್ಥೆಯ ಪುರಸಭೆಯ 2025-26 ನೆಯ ಸಾಲಿನ ಬಜೆಟ್‌ನ್ನು ಪುರಸಭೆ ಅಧ್ಯಕ್ಷೆ ಶ್ರೀಮತಿ ವೀಣಾ ಜಗದೀಶ ಕವಟಗಿಮಠ ಮಂಡಿಸಿದರು.
ನಗರದ ಎಂಕೆ ಕವಟಗಿಮಠ ನಗರದಲ್ಲಿ ಇರುವ ನೂತನ ಪುರಸಭೆ ಸಭಾ ಭವನದಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಅಧ್ಯಕ್ಷೆ ಶ್ರೀಮತಿ ವೀಣಾ ಕವಟಗಿಮಠ ಅವರು ಪ್ರಸಕ್ತ ವರ್ಷದ 4.15 ಲಕ್ಷ ರೂ ಉಳಿತಾಯ ಬಜೆಟ್ ಮಂಡಿಸಿದರು.
ಪುರಸಭೆ ಆದಾಯ 7.52.96.900, ಸಕಾರದಿಂದ ಬಂದ ಅನುದಾನ 17.59.44.368, ವಿಶೇಷ ವಸೂಲಾತಿಗಳು 1.91.07.138 ಒಟ್ಟು 27.03.48.406. ಪುರಸಭೆ ವೆಚ್ಚಗಳು 7.48.81.050. ಬಂಡವಾಳ ವೆಚ್ಚಗಳು 17.59.44.368. ವಿಶೇಷ ವೆಚ್ಚಗಳು 1.91.07.138 ಒಟ್ಟು 26.99.32.556. ಒಟ್ಟು ಜಮೆಗಖು 27.03.48.406, ಒಟ್ಟು ವೆಚ್ಚಗಳು 26.99.32.556 ಒಟ್ಟು ಉಳಿತಾಯ 4.15.850ವಾಗಿದೆ ಎಂದರು.
ಪುರಸಭೆ ಸಾಮಾನ್ಯ ಸಭೆಯಲ್ಲಿ ಪಾಲ್ಗೊಂಡಿದ್ದ ಶಾಸಕ ಗಣೇಶ ಹುಕ್ಕೇರಿ ಮಾತನಾಡಿ ಜಿಲ್ಲಾ ಸ್ಥಾನಮಾನ ಹೊಂದಿರುವ ಚಿಕ್ಕೋಡಿ ನಗರಕ್ಕೆ ಅಗತ್ಯ ಸೌಲಭ್ಯ ಒದಗಿಸಲು ನಾನು ನಿರಂತರ ಪ್ರಯತ್ನ ಮಾಡುತ್ತಿದ್ದೇನೆ. ಪಟ್ಟಣಕ್ಕೆ ಬೇಕಾಗಿರುವ ಸಮರ್ಕ ಕುಡಿಯುವ ನೀರು, ರಸ್ತೆ, ಚರಂಡಿ ಮತ್ತು ಸ್ವಚ್ಚತೆಗೆ ಮೊದಲ ಆಧ್ಯತೆ ಕೊಡಬೇಕು. ಚಿಕ್ಕೋಡಿ ಪಟ್ಟಣದ ಅಭಿವೃದ್ಧಿಗೆ ಶೀಘ್ರದಲ್ಲಿ 10 ಕೋಟಿ ರೂ ಅನುದಾನ ಮಂಜೂರು ಮಾಡಿಸಲಾಗುತ್ತದೆ. ಪ್ರತಿಯೊಂದು ವಾರ್ಡದಲ್ಲಿ 50 ಲಕ್ಷ ರೂ ಖರ್ಚು ಮಾಡಲಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಉಪಾಧ್ಯಕ್ಷ ಇರ್ಾನ ಭೇಪಾರಿ, ಪುರಸಭೆ ಸದಸ್ಯರಾದ ಜಗದೀಶ ಕವಟಗಿಮಠ, ರಾಮಾ ಮಾನೆ, ಶ್ಯಾಮ ರೇವಡೆ, ಸಾಬೀರ ಜಮಾದಾರ, ಗುಲಾಬ ಬಾಗವಾನ, ಸಂಜಯ ಕವಟಗಿಮಠ, ಪ್ರವೀಣ ಕಾಂಬಳೆ, ನಾಗರಾಜ ಮೇಧಾರ ಮುಂತಾದವರು ಇದ್ದರು.
ಮುಖ್ಯಾಧಿಕಾರಿ ವೇಂಕಟೇಶ ನಾಗನೂರ ಸ್ವಾಗತಿಸಿದರು.