ತಳಿರು ತೋರಣಗಳಿಂದ ಅಲಂಕಾರಗೊಂಡ ಆನೆಗೊಂದಿ ಪ್ರದರ್ಶನಕ್ಕೆ ಶಾಸಕ ಮುನವಳ್ಳಿ ಚಾಲನೆ

ಕೊಪ್ಪಳ 07: ಆನೆಗೊಂದಿ ಉತ್ಸವ-2020ರ ಅಂಗವಾಗಿ ತಳಿರು ತೋರಣಗಳಿಂದ ಅಲಂಕಾರಗೊಂಡಿರುವ ಆನೆಗೊಂದಿ ಗ್ರಾಮದ ಪ್ರದರ್ಶನಕ್ಕೆ ದ್ವಾರ ಬಾಗಿಲಿನಲ್ಲಿ ರಿಬ್ಬನ್ ಕತ್ತರಿಸುವುದರ ಮೂಲಕ ಗಂಗಾವತಿ ಶಾಸಕ ಪರಣ್ಣ ಈಶ್ವರಪ್ಪ ಮುನವಳ್ಳಿ ಅವರು ಇಂದು (ಜ.7) ಚಾಲನೆ ನೀಡಿದರು. ಕೊಪ್ಪಳ ಜಿಲ್ಲೆಯ ಐತಿಹಾಸಿಕ ಕ್ಷೇತ್ರವಾದ ಗಂಗಾವತಿ ತಾಲ್ಲೂಕಿನ ಆನೆಗೊಂದಿ ಉತ್ಸವವು ಇದೇ ಜನವರಿ. 09 ಮತ್ತು 10 ರಂದು ನಡೆಯಲಿದ್ದು, ಈ ಪ್ರಯುಕ್ತ ಆನೆಗೊಂದಿ ಗ್ರಾಮ ಪಂಚಾಯತ್ ಕಾಯರ್ಾಲಯ, ಗ್ರಾಮದ ಮನೆ-ಮನೆಗಳು, ಅಂಗಡಿಗಳ ಅಂಗಳ ಬಣ್ಣ-ಬಣ್ಣದ ರಂಗೋಲಿಯಿಂದ ಕೂಡಿದ್ದು, ತಳಿರು ತೋರಣಗಳಿಂದ ಶೃಂಗಾರಗೊಂಡಿವೆ. ಉತ್ಸವದ ಅಂಗವಾಗಿ ಆನೆಗೊಂದಿ ಗ್ರಾಮದಲ್ಲಿ ಉತ್ತಮ ರೀತಿಯಲ್ಲಿ ಅಲಂಕಾರಗೊಂಡಿರುವ ಮನೆಗೆ ಬಹುಮಾನ ದೊರೆಯಲಿದ್ದು, ಈ ನಿಟ್ಟಿನಲ್ಲಿ ಆನೆಗೊಂದಿ ಗ್ರಾಮವು ಆಕರ್ಷಣೀಯವಾಗಿ ಶೃಂಗಾರಗೊಂಡಿದ್ದವು. ಉತ್ಸವಕ್ಕೆ ಆಗಮಿಸುವ ಗಣ್ಯರ ಹಾಗೂ ಸಾರ್ವಜನಿಕರ ಮತ್ತು ಪ್ರವಾಸಿಗರ ಕಣ್ಮನ ಸೆಳೆದವು. ಆನೆಗೊಂದಿ ಉತ್ಸವ ಸಮಿತಿ ಅಧ್ಯಕ್ಷರು ಹಾಗೂ ಜಿಲ್ಲಾಧಿಕಾರಿ ಪಿ.ಸುನೀಲ್ ಕುಮಾರ್, ತಹಶೀಲ್ದಾರ ಎಲ್.ಡಿ ಚಂದ್ರಕಾಂತ, ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ಚಂದ್ರಮೋಹನ್, ಆನೆಗೊಂದಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಅಂಜನಾದೇವಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ತಾ.ಪಂ., ಗ್ರಾ.ಪಂ. ಸದಸ್ಯರು ಉಪಸ್ಥಿತರಿದ್ದರು. ಆಕರ್ಷಕ ಸ್ಥಿರ, ಹಗ್ಗದ ಮಲ್ಲಕಂಬ ಪ್ರದರ್ಶನ