ಮುಧೋಳ : ಸಾರ್ವಜನಿಕರಿಗೆ ನಗರಸಭೆಯಲ್ಲಿ ವಿವಿಧ ಕಾರ್ಯಗಳಿಗೆ ತೊಂದರೆಯಾಗುತ್ತಿರುವ ಕುರಿತು ಅನೇಕ ಸಾರ್ವಜನಿಕರು ಮೌಖಿಕವಾಗಿ ತಿಳಿಸಿದ್ದರಿಂದ ಈ ಕುರಿತು ಮಾಹಿತಿ ಪಡೆಯಲು ಹೋದ ಪತ್ರಕರ್ತರಿಗೇ ನಗರಸಭೆ ಪೌರಾಯುಕ್ತರು ಆವಾಜ್ ಹಾಕಿ ಧಮಕಿ ನೀಡಿದ ಪ್ರಸಂಗ ಮುಧೋಳದಲ್ಲಿ ಸೋಮವಾರ ಜರುಗಿತು.
ಸೋಮವಾರ ತಹಶೀಲದಾರರ ಸಂಗಮೇಶ ಬಾಡಗಿಯವರ ಮುಖಾಂತರ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ ಮತ್ತು ಜಿಲ್ಲಾ ಉಸ್ತುವಾರಿ ಮಂತ್ರಿಗಳಿಗೆ ಮನವಿ ಸಲ್ಲಿಸಿದ ನಂತರ ಹಿರಿಯ ಪತ್ರಕರ್ತ ಅಶೋಕ ಕುಲಕಣರ್ಿ ಮಾತನಾಡಿ, ಮುಧೋಳ ನಗರಸಭೆಯಲ್ಲಿ ಅನೇಕ ಅವ್ಯವಹಾರಗಳು ನಡೆಯುತ್ತಿರುವುದು ಹಾಗೂ ಪೌರಾಯುಕ್ತರು ಸಾರ್ವಜನಿಕರೊಂದಿಗೆ ದುರ್ವತನೆ ತೋರುವುದಲ್ಲದೇ ಒಂದು ರೀತಿ ಸವರ್ಾಧಿಕಾರಿ ಮನೋಭಾವ ತಾಳಿ ಲಂಚ ಪಡೆದರೂ ಸಹ ಕೆಲಸ ಮಾಡಿಕೊಡುವುದಿಲ್ಲ ಎಂಬ ಸಾರ್ವಜನಿಕರ ಆರೋಪಗಳು ಹಾಗೂ ಪಟ್ಟಣದಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳು ನಡೆಯದಿರುವ ಬಗ್ಗೆ ಮುಧೋಳ ಕಾರ್ಯನಿರತ ಪತ್ರಕರ್ತರ ಸಂಘಕ್ಕೆ ಅನೇಕ ದೂರುಗಳು ಬಂದ ಹಿನ್ನೆಲೆಯಲ್ಲಿ ತಾಲೂಕಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಿ.ರತ್ನಾಕರಶೆಟ್ಟಿ ಪೌರಾಯುಕ್ತರನ್ನು ಭೇಟಿಯಾಗಿ ಈ ವಿಷಯಗಳ ಕುರಿತು ಮಾಹಿತಿ ಪಡೆಯಲು ಹೋದಾಗ, ಸಾರ್ವಜನಿಕರ ಕುಂದು-ಕೊರತೆಗಳ ಬಗ್ಗೆ ನಡೆದ ಚಚರ್ೆಯ ಸಂದರ್ಭದಲ್ಲಿ ಪೌರಾಯುಕ್ತರು ಆವೇಶಗೊಂಡು ಪತ್ರಕರ್ತರಿಗೆ ಮನಬಂದಂತೆ ಮಾತನಾಡಿದ್ದಲ್ಲದೇ, ಬೇಕಾದರೆ ನೀವು ಉಪಮುಖ್ಯಮಂತ್ರಿ ಗೋವಿಂದ ಕಾರಜೋಳರನ್ನು ಸೇರಿಸಿ ಯಾರಿಗೆ ಬೇಕಾದರೂ ನನ್ನ ವಿರುದ್ಧ ಹೇಳಿ ಅಥವಾ ನೀವು ಪತ್ರಿಕೆಗಳಲ್ಲಿ ಬರೆದರೂ ಸಹಿತ ನಾನು ಯಾರಿಗೂ ಹೆದರೋದಿಲ್ಲ ಎಂದು ಆವಾಜ್ ಹಾಕಿ ಅವಾಚ್ಯ ಶಬ್ದಗಳನ್ನು ಬಳಸಿ ನಿಂದಿಸಿದ್ದಾರೆ.
ಪತ್ರಕರ್ತ ವಿಶ್ವನಾಥ ಮುನವಳ್ಳಿ ಮಾತನಾಡಿ, ನಗರಸಭೆಯ ಚುನಾಯಿತ ಸದಸ್ಯರು ತಮ್ಮ ವಾಡರ್ುಗಳ ಸಮಸ್ಯೆಗಳನ್ನು ಪೌರಾಯುಕ್ತರ ಸಮಕ್ಷಮ ತೆಗೆದುಕೊಂಡು ಹೋದರೂ ಸಹಿತ ಅವರನ್ನು ಕೂಡಾ ನಿರ್ಲಕ್ಷಿಸಲಾಗುತ್ತಿದೆ. ಕಟ್ಟಡ ಪರವಾನಿಗೆ ನೀಡಲು, ಕಟ್ಟಡ ಮುಅಕ್ತಾಯ ಪ್ರಮಾಣ ಪತ್ರ ನೀಡುವ ಸಮಯದಲ್ಲಿ ಅಭಿಯಂತರರು ಸ್ಥಳಕ್ಕೆ ಹೋಗದೇ ಪ್ರತಿಯೊಂದಕ್ಕೂ ತಾನೇ ಖುದ್ದಾಗಿ ಹೋಗಿ ಬೆಳಿಗ್ಗೆ 6 ಘಂಟೆಗೆ ಭೇಟಿ ನೀಡಿ ಪರಿಶೀಲನಾ ನೆಪದಲ್ಲಿ ಭ್ರಷ್ಟಾಚಾರಕ್ಕೆ ಪೌರಾಯುಕ್ತರು ಧುಮುಕಿರುವುದು ದುದರ್ೈವ ಎಚಿದು ನಗರದ ಅನೇಕ ನಗರಸಭೆಯ ಸದಸ್ಯರು ಹಾಗೂ ಅನೇಕ ಸಾರ್ವಜನಿಕರು ದೂರಿದ್ದಾರೆ ಎಂದು ತಿಳಿಸಿದರು. ಎಸ್ಡಬ್ಲುಎಮ್ ಘನತ್ಯಾಜ್ಯ ವಿಲೇವಾರಿ ಉಪಕರವನ್ನು ಸರಕಾರ ನಿಗದಿಪಡಿಸಿದಂತೆ ಗೃಹ ರೂ.120, ವಾಣಿಜ್ಯ ರೂ. 180, ಹೋಟೇಲುಗಳಿಗೆ ರೂ.300ಕ್ಕಿಂತ ಅಧಿಕ ಪಡೆಯುತ್ತಿದ್ದರೆ, ಪ್ರಸಕ್ತ ಸಾಲಿನಲ್ಲಿ ನಗರಸಭೆಯ ಪೌರಾಯುಕ್ತರು ತಮ್ಮ ಸವರ್ಾಧಿಕಾರಿ ಧೋರಣೆಗೆ ಅನುಗುಣವಾಗಿ ತಮ್ಮ ಮನಸೋ ಇಚ್ಛೆ ಅಂದಾಜು ರೂ. 2000 ವರೆಗೆ ವಿಧಿಸುತ್ತಿದ್ದಾರೆ ಎಂಬ ದೂರುಗಳು ಸಹ ಕೇಳಿಬರುತ್ತಿವೆ. ಈ ಕುರಿತು ಸರಕಾರವೇ ಈವರೆಗೆ ಅಧಿಕೃತವಾಗಿ ಯಾವುದೇ ಆದೇಶದ ಸುತ್ತೋಲೆ ನೀಡದೆ ಇದ್ದರೂ ಈ ರೀತಿ ಉಪಕರ ವಿಧಿಸುತ್ತಿರುವುದು ಸಾರ್ವಜನಿಕರಿಗೆ ತುಂಬಾ ಹೊರೆಯಾಗಿ ಇದರಿಂದ ತುಂಬಾ ಅನ್ಯಾಯವಾಗುತ್ತಿದೆ ಎಂದು ಹೇಳಿದರು. ಪತ್ರಕರ್ತ ಗಣೇಶ ಮೇತ್ರಿ ಮಾತನಾಡಿ, ಹೀಗೆ ಹತ್ತು ಹಲವಾರು ತೊಂದರೆಗಳ ಬಗ್ಗೆ ವಿಷಯ ಸಂಗ್ರಹಣೆಗೆ ಹೋದ ಪತ್ರಕರ್ತರಿಗೆ ಪೌರಾಯುಕ್ತರು ಈ ರೀತಿ ದುರ್ವತನೆ ತೋರಿರುವುದು ದುರಾಡಳಿತವೇ ಸರಿ. ಹಿರಿಯ ಆರೋಗ್ಯ ಅಧಿಕಾರಿ ಹುದ್ದೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಸುನೀಲ ಪಾಟೀಲ ಕೆಎಮ್ಎಸ್ ಮಾಡದೇ ಇದ್ದರೂ ಪೌರಾಯುಕ್ತರನ್ನಾಗಿ ತಾತ್ಕಾಲಿಕವಾಗಿ ನೇಮಿಸಿರುವುದು ಮುಧೋಳ ನಗರದ ದುದರ್ೈವ. ಈ ಪೌರಾಯುಕ್ತರ ಬಗ್ಗೆ ಅನೇಕ ಭ್ರಷ್ಟಾಚಾರಗಳ ಆರೋಪಗಳು ಕೇಳಿಬಂದಿದ್ದು, ಕೂಡಲೇ ಈ ಬಗ್ಗೆ ತನಿಖೆ ನಡೆಸಬೇಕು ಹಾಗೂ ಪೌರಾಯುಕ್ತರನ್ನು ಅಮಾನತು ಮಾಡಬೇಕೆಂದು ಸಕರ್ಾರಕ್ಕೆ ಆಗ್ರಹಿಸಿದರು.ಪತ್ರಕರ್ತರಾದ ಎಮ್.ಎಚ್.ನದಾಫ್, ವೆಂಕಟೇಶ ಗುಡೆಪ್ಪನವರ, ಬಿ.ಎಚ್.ಬೀಳಗಿ, ಎಲ್.ಬಿ.ಹಳ್ಳದ, ಎಸ್.ಎಮ್.ಹೊರಟ್ಟಿ, ಮಹಾಂತೇಶ ಕರೆಹೊನ್ನ, ಜಗದೀಶ ಜೀರಗಾಳ, ಸಾಮಾಜಿಕ ಕಾರ್ಯಕರ್ತ ಹನಮಂತ ಶಿಂಧೆ ಉಪಸ್ಥಿತರಿದ್ದರು.