ಪುರಸಭೆ ನೂತನ ಕಟ್ಟಡದ ಕಳಪೆ ಕಾಮಗಾರಿ: ಆರೋಪ

ಲೋಕದರ್ಶನವರದಿ

ಶಿಗ್ಗಾವಿ : ಪಟ್ಟಣದ ಸವರ್ಾಂಗೀಣ ಅಭಿವೃದ್ಧಿಗೆ ಶ್ರಮಿಸುತ್ತಿರುವ ಪುರಸಭೆ ನೂತನ ಕಟ್ಟಡದ ಕನಸು ನನಸ್ಸಾಗುತ್ತಿರುವ ಬೆನ್ನಲ್ಲಿಯೇ ನೂತನ ಕಟ್ಟಡದ ಕಾಮಗಾರಿ ಪ್ರಾರಂಭವಾಗಿದ್ದು ಆ ನೂತನ ಕಟ್ಟಡಕ್ಕೆ ಬಳಸುವ ಕಡಿ, ಮರಳು ಯೋಗ್ಯವಾದುದ್ದಲ್ಲ ಎಂಬ ಆರೋಪಗಳು ಸಾರ್ವಜನಿಕ ವಲಯದಿಂದ, ಕನ್ನಡಪರ ಹೋರಾಟಗಾರರಿಂದ ಮತ್ತು ಅನುಭವಿ ಗುತ್ತಿಗೆದಾರರಿಂದಲೇ ಕೇಳಿ ಬಂದಿವೆ.

ಎಸ್.ಎಫ್.ಸಿ ವಿಶೇಷ ಅನುಧಾನ, ನಗರೋಥ್ಥಾನ 3 ನೇ ಹಂತದ ಅನುಧಾನ, 14 ನೇ ಹಣಕಾಸು ಯೋಜನೆ ಹಾಗೂ ಎಸ್.ಎಫ್ಸಿ ಯೋಜನೆಗಳ ಅನುಧಾನಗಳಲ್ಲಿ ಪ್ರಾರಂಭವಾಗಿರುವ ಕಟ್ಟಡ ಹಲವು ಅನುಮಾನಗಳಿಗೆ ಕಾರಣವಾಗಿದೆ, ಕಟ್ಟಡ ಕಾಮಗಾರಿ ಆರಂಭಕ್ಕೂ ಮೊದಲು ಹಲವಾರು ಕನಸ್ಸುಗಳನ್ನು ಹೊತ್ತು ಗುಣಮಟ್ಟದ ಕಟ್ಟಡವಾಗಲಿ ಎಂಬುದು ಪುರಸಭೆಯ ಸಿಬ್ಬಂದಿ ಮತ್ತು ಸರ್ವ ಸದಸ್ಯರ ಆಶಯ ಆದರೆ ಕಟ್ಟಡ ನಿಮರ್ಾಣವಾಗುವ ಮೊದಲೇ ಕಾಮಗಾರಿಗೆ ಬಳಸುವ ಕಡಿಯು ಎಂಸ್ಯಾಂಡ್ಗೆ ಬಳಸುವ ಕಲ್ಲಿನ ಕಡಿಯನ್ನು ಬಳಸಬಾರದು ಆದರೂ ಕಟ್ಟಡಕ್ಕೆ ಬಳಿಸಿದ್ದಾರೆ ಮತ್ತು ಗುಣಮಟ್ಟ ಪರೀಕ್ಷಿಸುವ ನೆಪದಲ್ಲಿ ಮೇಲಾಧಿಕಾರಿಗಳು ಇಂಜೀನಿಯರ್ ಹಾಗೂ ಗುತ್ತಿಗೆದಾರರ ಕೈಗೊಂಬೆಯಾಗಿದ್ದಾರೆ ಎಂಬ ಆರೋಪವಿದೆ ಜೊತೆಗೆ ಕಟ್ಟಡದ ಸ್ಲ್ಯಾಬ್ಗೆ ಬಳಸಿದ ಮರಳೂ ಸಹಿತ ಸರಿಯಾಗಿ ಸೋಸದೇ ಬಳಸಿದ್ದಾರೆ ಎಂಬ ಆರೋಪವನ್ನೂ ಸಹಿತ ಅನುಭವಿ ಗುತ್ತಿಗೆದಾರರು ಮಾಡುತ್ತಿದ್ದಾರೆ.

  ಒಟ್ಟಾರೆ ಗುಣಮಟ್ಟದ ಯಾವುದೇ ಕೆಲಸವಾಗಿಲ್ಲ ಎಂಬುದು ಸಾರ್ವಜನಿಕ ವಲಯದಿಂದ ಕೇಳಿ ಬಂದಿರುವದು ಕಟ್ಟಡ ಗುತ್ತಿಗೆದಾರರ ಮತ್ತು ಸಂಬಂಧಿಸಿದ ಅಧಿಕಾರಿಗಳ ಕಾರ್ಯವೈಕರಿಯ ಗುಣಮಟ್ಟವನ್ನು ಪರೀಶೀಲಿಸುವಂತಾಗಿದೆ.

   ಕಟ್ಟಡ ನಿಮರ್ಾಣಕ್ಕೆ ಬಳಸುವ ಕಬ್ಬಿಣ ಜಲ್ಲಿಕಲ್ಲು, ಮತ್ತು ಮರಳು ಸೇರಿದಂತೆ ಬಳಸುವ ಸಾಮಗ್ರಿಗಳು ಉತ್ತಮ ಗುಣಮಟ್ಟ ಮತ್ತು ಬಾಳಿಕೆಯಿಂದ ಕುಡಿರಬೇಕು ಇದರಲ್ಲಿ ತಪಾಸಣಾ ಗುಣಮಟ್ಟವು ಸಹಿತ ಸರಿಯಾಗಿ ಆಗಿಲ್ಲ ಜೊತೆಗೆ ಕಳಪೆ ಕಾಮಗಾರಿ ನಡೆದಿದೆ. ಈ ಕುರಿತು ಸಂಬಂದಿಸಿದವರಿಗೆ ಗಮನಕ್ಕಿದ್ದರು ಯಾವುದೇ ಪ್ರಯೋಜನವಾಗಿಲ್ಲ ಗುತ್ತಿಗೆದಾರರು ಈ ಕುರಿತು ನಿಯಮಾವಳಿ ಅನುಸರಿಸದೆ ಕಟ್ಟಡ ಕಾಮಗಾರಿ ಮಾಡುತ್ತಿದ್ದಾರೆ ಎಂಬ ಗಂಭೀರ ಆರೋಪವನ್ನ ತಾಲೂಕಿನ ಕನ್ನಡಪರ ಸಂಘಟನೆಗಳು ಸೇರಿದಂತೆ ವಿವಿಧ ಸ್ಥಳೀಯ ಸಂಘ ಸಂಸ್ಥೆಗಳೂ ಸಹಿತ ಆರೋಪಿಸಿವೆ.

ಒಟ್ಟಾರೆ ಪುರಸಭೆಯ ಬಹಳ ದಿನಗಳ ನೂತನ ಕಟ್ಟಡದ ಕನಸ್ಸು ನನಸ್ಸಾಗುತ್ತಿರುವದು ಒಂದೆಡೆಯಾದರೆ ಕಟ್ಟಡವು ಗುಣಮಟ್ಟದಾಗುತ್ತಿಲ್ಲ ಎಂಬುದು ಬೇಸರದ ಸಂಗತಿಯಾಗಿದೆ ಎಂದು ಕೇಳಿಬರುತ್ತಿದೆ. ಇನ್ನಾದರು ಅಧಿಕಾರಿಗಳು ಎಚ್ಚೆತ್ತು ನೆಪಕ್ಕೆ ಮಾತ್ರ ಕಾಗದದಲ್ಲಿ ಗುಣಮಟ್ಟದ ಪರೀಕ್ಷೆ  ಮಾಡದೇ ಬಾಳಿಕೆಯ ದೃಷ್ಟಿಯಿಂದ ಗುಣಮಟ್ಟದ ಪರೀಕ್ಷೆ ಮಾಡುವದು ಅವಶ್ಯವಿದೆ.