ಪುರಸಭೆ ಸಾಮಾನ್ಯ ಸಭೆ
Municipal General Meeting
ಮಹಾಲಿಂಗಪುರ 31: ಪಟ್ಟಣದ ಪುರಸಭೆ ಸಭಾಭವನದಲ್ಲಿ ಶುಕ್ರವಾರ ಯಲ್ಲನ್ನಗೌಡ ಪಾಟೀಲ್ ಅಧ್ಯಕ್ಷತೆಯಲ್ಲಿ ಚುನಾಯಿತ ಸದಸ್ಯರ ಸಾಮಾನ್ಯ ಸಭೆ ನಡೆಯಿತು.
2021-22 ರಲ್ಲಿ ರಾಜೀವ್ ಗಾಂಧಿ ಗ್ರಾಮೀಣ ವಸತಿ ನಿಗಮ ನೇಕಾರ ಫಲಾನುಭವಿಗಳಿಗೆ 203 ಮನೆಗಳಲ್ಲಿ 93 ಮನೆಗಳಿಗೆ ಕಾಮಗಾರಿ ಆದೇಶವಾಗಿ, ಉಳಿದವುಗಳಿಗೆ ಫಲಾನುಭವಿಗಳಿಂದ ಅರ್ಜಿಗಳು ಬಾರದ ಹಿನ್ನೆಲೆಯಲ್ಲಿ ರದ್ದಾಗಿವೆ ಎಂದು ಅಧಿಕಾರಿ ಸಿ. ಎಸ್. ಮಠಪತಿ ಸಭೆಗೆ ತಿಳಿಸಿದಾಗ ಪುರಸಭೆ ಸದಸ್ಯ ಬಸವರಾಜ ಚಮಕೇರಿ ಆಕ್ಷೇಪ ವ್ಯಕ್ತಪಡಿಸಿ, ಇದರಲ್ಲಿ ಅಧಿಕಾರಿಗಳ ನಿರ್ಲಕ್ಷ್ಯ ಎದ್ದು ಕಾಣುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರಸ್ತುತ ರಾಜೀವ್ ಗಾಂಧಿ ಗ್ರಾಮೀಣ ವಸತಿ ನಿಗಮದಿಂದ 100 ಮನೆಗಳ ಪೈಕಿ 73 ಮನೆಗಳಿಗೆ ಫಲಾನುಭವಿಗಳ ಆಯ್ಕೆ ನಡೆದಿದೆ. ಉಳಿದ 27 ಹೊಸ ನೇಕಾರ ಫಲಾನುಭವಿಗಳಿಗೆ ವಿತರಿಸಿ ಎಂದು ಅಧ್ಯಕ್ಷ ಯಲ್ಲನ್ನಗೌಡ ಪಾಟೀಲ್ ಸಭೆಗೆ ತಿಳಿಸಿದಾಗ, ಈ ವಿಷಯಕ್ಕೂ ಸಭೆಯಲ್ಲಿ ಉಪಸ್ಥಿತರಿದ್ದ ಚುನಾಯಿತ 17 ಸದಸ್ಯರ ಪೈಕಿ ವಿರೋಧ ಪಾಳಯದ ಸದಸ್ಯರಾದ ರವಿ ಜವಳಗಿ ಮತ್ತು ಬಸವರಾಜ ಚಮಕೇರಿ ಕೇವಲ ಇಬ್ಬರು ಮಾತ್ರ ಆಕ್ಷೇಪ ವ್ಯಕ್ತಪಡಿಸಿದರು. ಸದಸ್ಯರಾದ ಬಸವರಾಜ ಹಿಟ್ಟಿನಮಠ, ಶೇಖರ ಅಂಗಡಿ, ಚನಬಸು ಯರಗಟ್ಟಿ ಇನ್ನೂಳಿದಂತೆ ಆಡಳಿತ ಹಾಗೂ ವಿರೋಧ ಪಕ್ಷದ ಸದಸ್ಯರು ಸಹಮತಿ ಇದೆ ಎನ್ನುವಂತೆ ಜಾಣ ಮೌನ ವಹಿಸಿದರು.
2025-26 ಎಸ್. ಎಫ್. ಸಿ ಮುಕ್ತ ನಿಧಿಯಲ್ಲಿ ಶೈಕ್ಷಣಿಕ ನೆರವಿಗಾಗಿ ಒಟ್ಟು 42 ರಲ್ಲಿ 24 ವಿಧ್ಯಾರ್ಥಿಗಳು ಅರ್ಜಿ ಸಲ್ಲಿಸಿದ್ದಾರೆ.
ಪುರಸಭೆ ವ್ಯಾಪ್ತಿಯಲ್ಲಿ ಮೃತರ ಅಂತ್ಯಕ್ರಿಯೆಗೆ ಜೆಸಿಬಿ ಬಾಡಿಗೆ ನಿಗದಿಪಡಿಸುವ ಕುರಿತು ಚರ್ಚೆಸಿದರು.ಪುರಸಭೆ ವ್ಯಾಪ್ತಿಯ ವ್ಯವಸಾಯ ಭೂಮಿ ವಸತಿ ವಲಯಕ್ಕೆ ಪರಿವರ್ತನೆ ಕುರಿತು ಚರ್ಚೆ ನಡೆದು ಸಭೆ ಸಹಮತಿ ವ್ಯಕ್ತಪಡಿಸಿತು.ಹೀಗೆ ಇನ್ನು ಹತ್ತು ಹಲವಾರು ವಿಷಯಗಳ ಕುರಿತು ಚರ್ಚೆ ನಡೆಯಿತು.
ಪುರಸಭೆ ಕೌಜಲಗಿ ನಿಂಗಮ್ಮ ಸಮುದಾಯ ಭವನದ ಬಾಡಿಗೆ ದರ ಪುನಃ ಪರಿಷ್ಕರಣೆಯಾಗಿ ಶೈಕ್ಷಣಿಕ 2 ಸಾವಿರ, ಸಾರ್ವಜನಿಕ 5 ಸಾವಿರ, ಟಿಕೇಟ್ ನಿಗದಿ ಮಾಡುವ ಕಾರ್ಯಕ್ರಮಗಳಿಗೆ 6 ಸಾವಿರ, ಸಂಘ ಸಂಸ್ಥೆ 5 ರಿಂದ 10 ಸಾವಿರ, ವಾಣಿಜ್ಯಕ 10 ಸಾವಿರ ಮತ್ತು ಸರ್ಕಾರಿ ಸಭೆಗಳಿಗೆ ಸಭೆಯಲ್ಲಿ ಸದಸ್ಯರ ಅನುಮತಿ ದೊರೆಯಿತು.
ಈ ಸಂದರ್ಭದಲ್ಲಿ ಉಪಾಧ್ಯಕ್ಷೆ ಶೀಲಾ ಬಾವಿಕಟ್ಟಿ, ಅಬ್ದುಲ ಭಾಗವಾನ, ಮುಸ್ತಾಕ ಚಿಕ್ಕೋಡಿ, ಸಜನಸಾಬ ಪೆಂಡಾರಿ, ಚಾಂದನಿ ನಾಯಕ, ಸವಿತಾ ಹುರಕಡ್ಲಿ, ಸುಜಾತಾ ಮಾಂಗ, ಬಸಪ್ಪ ಬುರುಡ, ಸರಸ್ವತಿ ರಾಮೋಜಿ, ರಾಜು ಗೌಡಪ್ಪಗೋಳ, ಡಾ.ಸವಿತಾ ಕೋಳಿಗುಡ್ಡ, ಸ್ನೇಹಲ್ ಅಂಗಡಿ,ನಾಮ ನಿರ್ದೇಶಿತ ಸದಸ್ಯರಾದ ಬಸವರಾಜ ಕರೇಹೊನ್ನ, ಲಕ್ಕಪ್ಪ ಬಜಂತ್ರಿ,ಆನಂದ ಬಂಡಿ, ವಿನೋದ ಸಿಂಪಿ ಸೇರಿದಂತೆ ಪುರಸಭೆ ಸಿಬ್ಬಂದಿ ಹಾಜರಿದ್ದರು.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 