ನಗರಸಭೆ ಅಧ್ಯಕ್ಷ ಅಮ್ಜದ್ ಪಟೇಲ್ ಶಾಲೆಗೆ ಭೇಟಿ ಪರಿಸರ ವೀಕ್ಷಣೆ

Municipal Council President Amjad Patel visits school and observes environment

ನಗರಸಭೆ ಅಧ್ಯಕ್ಷ ಅಮ್ಜದ್ ಪಟೇಲ್ ಶಾಲೆಗೆ ಭೇಟಿ ಪರಿಸರ ವೀಕ್ಷಣೆ

ಕೊಪ್ಪಳ 19: ನಗರದ ಕುವೆಂಪು ನಗರದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಶಿಕ್ಷಣ ಪ್ರೇಮಿಗಳು ಪಾಲಕ ಪೋಷಕರು ಮತ್ತು ಶಿಕ್ಷಕರ ಸಹಕಾರದೊಂದಿಗೆ ಶಾಲಾ ತರಗತಿ ಕೋಣೆಗಳು ಹೊರ ಭಾಗ ಸುಣ್ಣ ಬಣ್ಣದಿಂದ ಕಂಗೊಳಿಸುತ್ತಿದೆ ಪ್ರತಿ ತರಗತಿ ಫ್ಯಾನ್, ಎಲ್ ಈ ಡಿ ಟ್ಯೂಬಲೈಟ್ ಅಳವಡಿಸಿದೆ ಸದರಿ ಶಾಲೆಗೆ ಕೊಪ್ಪಳ ನಗರಸಭೆಯ ಅಧ್ಯಕ್ಷರಾದ ಅಮ್ಜದ್ ಪಟೇಲ್ ಭೇಟಿ ಮಾಡಿ ಶಾಲೆಯ ಪರಿಸರವನ್ನು ವೀಕ್ಷಿಸಿ ಅಪಾರ ಮೆಚ್ಚುಗೆ ವ್ಯರ್ಥ ಪಡಿಸಿದರು.  

ಸ್ಮಾರ್ಟ್‌ ಕ್ಲಾಸ್ ್ಘ ಸಹೃದಯ ಶಿಕ್ಷಣ ಪ್ರೇಮಿಗಳ ಸಹಕಾರದಿಂದ ಶಾಲೆಗೆ ಬೇಕಾದ ಚೆರ್ಸ್‌ ಟೇಬಲ್‌. ಊಟದ ತಟ್ಟೆ ಲೋಟ ಇನ್ನು ಹಲವಾರು ವಸ್ತುಗಳನ್ನು ಕೊಡುಗೆ ನೀಡುವದರ ಮುಲಕ ಸರಕಾರಿ ಶಾಲೆಯನ್ನು ಸಬಲೀಕರಣ ಗೊಳಿಸಲು ಮುಂದಾಗಿದ್ದಾರೆ.  ಶಾಲಾ ಪರಿಸರ ಮತ್ತು ಸ್ಮಾರ್ಟ್‌ ಕ್ಲಾಸ್‌.  ಅಡುಗೆ ಮನೆ.ಮಕ್ಕಳ ಕಲಿಕೆಯ ಬಗ್ಗೆ ಸಂತಸ ವ್ಯಕ್ತಪಡಿಸಿದರು. ಶಾಲೆಗೆ ಬೇಕಾದ ಅಗತ್ಯ ಸೌಲಭ್ಯ ಕಲ್ಪಿಸುವದಾಗಿ ಕೊಪ್ಪಳ ನಗರಸಭೆಯ ಅಧ್ಯಕ್ಷ ಪಟೇಲ್ ತಿಳಿಸಿದರು. ಶಾಲೆಯ ಅಭಿರ್ವದ್ಧಿಗಾಗಿ ಕೊಡುಗೆ ನೀಡಿದ ವರೆಲ್ಲರ ಬಗ್ಗೆ ಮೆಚ್ಚುಗೆ ಯನ್ನು ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಕುವೆಂಪು ನಗರದ ಸಾರ್ವಜನಿಕರು ಪಾಲಕರು ಕಾರ್ಯಕರ್ತರು ಮತ್ತು ಅಭಿಮಾನಿಗಳು ಪಾಲ್ಗೊಂಡಿದ್ದರು.