2026- 27 ನೇ ಸಾಲಿನ ಬೃಹತ್ ಗಾತ್ರದ 26ಕೋಟಿ 24 ಲಕ್ಷ 51ಸಾವಿರ ಬಜೆಟ್ ಮಂಡಿಸಿದ ಪುರಸಭೆಯ ಮುಖ್ಯಾಧಿಕಾರಿ- ಮಹಾಂತೇಶ್ ಬೀಳಗಿ
Municipal Chief Officer Mahantesh Bilagi presented a massive budget of Rs. 26 crore 24 lakh 51 thous
ಲಕ್ಷ್ಮೇಶ್ವರ" 02: ಪಟ್ಟಣದ ಪುರಸಭೆಯಲ್ಲಿ ಪುರಸಭೆಯ ಮುಖ್ಯಾಧಿಕಾರಿ ಮಹಾಂತೇಶ್ ಬೀಳಗಿ ಅವರು ಗುರುವಾರ ಸನ್ 2026-27 ನೇ ಸಾಲಿನ ಆದಾಯ ಪುರಸಭೆ ನಿಧಿ ಅಂದರೆ ಮನೆಕರ, ಮಳಿಗೆ ಭಾಡಿಗೆ, ನೀರಿನ ಕರ ಸೇರಿದಂತೆ ಇತರೆ ಫೀಗಳ ಮೂಲದಿಂದ 3 ಕೋಟಿ 93 ಲಕ್ಷ 70 ಸಾವಿರ ರೂಗಳನ್ನು ಅಂದಾಜಿಸಲಾದ ಅನುದಾನದ ಮೂಲ ಅಂದರೆ ಎಸ್.ಎಫ್.ಸಿ ಮುಕ್ತ ನಿಧಿ 16ನೇ ಹಣಕಾಸು ಇತರೆ ಅನುದಾನದ ಮೂಲದಿಂದ 10 ಕೋಟಿ 55 ಲಕ್ಷ 30 ಸಾವಿರಗಳನ್ನು ನೀರೀಕ್ಷಿಸಲಾಗಿದು ಇತರೆ ಅಸಾಮಾನ್ಯ ಖಾತೆಯಿಂದ 1 ಕೋಟಿ 61 ಲಕ್ಷ 4 ಸಾವಿರ ನೀರೀಕ್ಷಿಸಲಾಗಿದೆ.
ಹೀಗೆ ಒಟ್ಟು ಆದಾಯ 18 ಕೋಟಿ 10 ಲಕ್ಷ 7 ಸಾವಿರಕ್ಕೆ ಆರಂಭಿಕ ಶಿಲ್ಲು 10 ಕೋಟಿ 14 ಲಕ್ಷ 44 ಸಾವಿರ ಕೂಡಿಸಿಕೊಂಡು ಒಟ್ಟು ನಮ್ಮ ಬಜೆಟ್ಟಿನ ಗಾತ್ರ 26 ಕೋಟಿ 24 ಲಕ್ಷ 51 ಸಾವಿರ ಬೃಹತ್ ಗಾತ್ರದ . ಬಜೆಟ್ ಅನ್ನು ಮಂಡಿಸಿದರು ಸನ್ 2026-27 ನೇ ಸಾಲಿಗೆ ಪುರಸಭೆ ನಿಧಿಯಿಂದ ಅಡಳಿತ ಕಚೇರಿ ವೆಚ್ಚ, ನೀರು ಸರಬರಾಜು, ಬೀದಿ ದೀಪ ಸಾರ್ವಜನಿಕರ ಆರೋಗ್ಯ ಇತ್ಯಾದಿಗಳಿಗಾಗಿ 4 ಕೋಟಿ 21 ಲಕ್ಷ 47 ಸಾವಿರ ಮೀಸಲಿಡಲಾಗಿದೆ. ಅನುದಾನದಿಂದ ಬಂದಂತಹ ಮೊತ್ತವನ್ನು ಪುರಸಭೆ ನೌಕರರ ವೇತನ, ನೀರು ಸರಬರಾಜು ಬೀದಿ ದೀಪ ವಿದ್ಯುತ ಬಿಲ್ ಪಾವತಿ, ರಸ್ತೆ ಚರಂಡಿ ಇತ್ಯಾದಿಗಳಿಗಾಗಿ ಒಟ್ಟು 17 ಕೋಟಿ 85 ಲಕ್ಷ 22 ಸಾವಿರ ಮೀಸಕಡಲಾಗಿದೆ.
ಕೆರೆ ಅಭಿವೃದ್ಧಿಗಾಗಿ 15 ಲಕ್ಷ ಮಳಿಗೆ ನಿರ್ಯಾಣಕ್ಕಾಗಿ 1 ಕೋಟಿ ಮೀಸಲಿಡಿಲಾಗಿದೆ. ಅಸಾಮಾನ್ಯ ಖಾತೆ ಅಂದರೆ ಸರ್ಕಾರಕ್ಕೆ ಕಟ್ಟಬೇಕಾದ ಉಪಕರ ತೆರಿಗೆ ಇತ್ಯಾದಿಗಳಿಗಾಗಿ 1 ಕೋಟಿ 69 ಲಕ್ಷ 38 ಸಾವಿರಗಳನ್ನು ಮೀಸಲಿಡಲಾಗಿದೆ. ಹೀಗೆ ಒಟ್ಟು ಬಜೆಟ ಮೊತ್ತ 26 ಕೋಟಿ 24 ಲಕ್ಷ 51 ಸಾವಿರಗಳಲ್ಲಿ ಒಟ್ಟು ಅಂದಾಜು ಪಾವತಿ ಮೊತ್ತ 20 ಕೋಟಿ 24 ಲಕ್ಷ 51 ಸಾವಿರ ಕಳೆದು 93 ಲಕ್ಷ 14 ಸಾವಿರ ಉಳಿತಾಯವನ್ನು ಅಂದಾಜಿಸಲಾಗಿದೆ.ಬಡಜನರ ಕಲ್ಯಾಣ ಕಲ್ಯಾಣ ಕಾರ್ಯಕ್ರಮ ಪರಿಶಿಷ್ಟ ಪಂಗಡದ ಕಲ್ಯಾಣ ಕಾರ್ಯಕ್ರಮ ಪುರಸಭೆ ನಿಧಿ: 3 ಲಕ್ಷ 21 ಸಾವಿರ ರಾಜ್ಯ ಹಣಕಾಸು ನಿಧಿ 3ಲಕ್ಷ ಇತರೆ ಬಡಜನಾಂಗದವರ ಕಲ್ಯಾಣ ಕಾರ್ಯಕ್ರಮ ಪುರಸಭೆ ನಿಧಿ: 1 ಲಕ್ಷರಾಜ್ಯ ಹಣಕಾಸು ನಿಧಿ 66 ಸಾವಿರ ಅಂಗವಿಕಲರ ಕಲ್ಯಾಣ ಕಾರ್ಯಕ್ರಮ ಪುರಸಭೆ ನಿಧಿ: 66 ಸಾವಿರ ರಾಜ್ಯ ಹಣಕಾಸು ನಿಧಿ 45 ಸಾವಿರ ಹಾಗೂ ಲಕ್ಷೇಶ್ವರವು ಗದಗ ಜಿಲ್ಲೆಯಲ್ಲಿ ದೊಡ್ಡ ನಗರವಾಗಿದ್ದು ದಿನದಿಂದ ದಿನಕ್ಕೆ ಬೆಳೆಯುತ್ತಿದೆ.
ಶೈಕ್ಷಣಿಕವಾಗಿ ವಾನಣಿಜ್ಯಕವಾಗಿ ಸಾಕಷ್ಟು ಪ್ರಗತಿ ಹೊಂದಿದ್ದು ನಗರಕ್ಕೆ ವಿವಿಧ ಉದ್ದೇಶಕ್ಕಾಗಿ ಗ್ರಾಮೀಣ ಪ್ರದೇಶದ ಜನರು ಬರುತ್ತಿದ್ದು ಜನರ ಅನುಕೂಲಕ್ಕಾಗಿ ಮೂಲಭೂತ ಸೌಕಯ್ಯ(ಶೌಚಾಲಯ) ಒದಗಿಸಲು ಯೋಜನೆ ರೂಪಿಸಲಾಗಿದೆ,ಸದರಿ ಆಯವ್ಯಯವು ಯಶಸ್ವಿಯಾಗಬೇಕೆಂದರೆ, ಸರ್ವ ಸದಸ್ಯರು ನೀರೀಕ್ಷಿತ ಮಟ್ಟದಲ್ಲಿ ಸರ್ಕಾರದಿಂದ ಅನುದಾನ ತರುವಲ್ಲಿ ಪ್ರಯತ್ನಿಸೋಣ ನೀರೀಕ್ಷಿತ ಮಟ್ಟದಲ್ಲಿ ಕಂದಾಯ ಕ್ರೂಢೀಕರಿಸುವಲ್ಲಿ ಪುರಸಭೆಯ ಸಿಬ್ಬಂದಿಯೊಂದಿಗೆ ಸಹಕರಿಸೋಣವೆಂದು ಹೇಳುತ್ತಾ ಬಜೆಟ ಮಂಡಿಸಿದರು. ಈ ಸಮಯದಲ್ಲಿ ಪುರಸಭೆಯ ವ್ಯವಸ್ಥಾಪಕಿ ಮಂಜುಳಾ ಹೂಗಾರ ಸುರೇಶ್ ಪೂಜಾರ ವೆಂಕಟೇಶ್ ರಾಮಗಿರಿ ಮಹೇಶ ಹೊಸಮನಿ ಹನುಮಂತಪ್ಪ ನಂದೆಣ್ಣವರ ನೇತ್ರಾ ಹೂಸಮನಿ ಸೇರಿದಂತೆ ಪುರಸಭೆಯ ಸಿಬ್ಬಂದಿ ವರ್ಗದವರು ಇದ್ದರು "
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 