ಮಹಾಲಿಂಗಪುರ 31: ನಗರದ ಪುರಸಭೆ ಕಾರ್ಯಾಲಯ, ಮಹಾಲಿಂಗಪುರದ 2025-26 ನೇ ಸಾಲಿನ ಬಜೆಟ್ ತಯಾರಿಸುವ ಸಲುವಾಗಿ ಮೊದಲ ಸುತ್ತಿನ ಪೂರ್ವಭಾವಿ ಪುರಸಭೆಯನ್ನು ಅಧ್ಯಕ್ಷರ,ಅಧ್ಯಕ್ಷತೆಯಲ್ಲಿ ಜನೇವರಿ 1 ರಂದು ಬೆಳಗ್ಗೆ 11.30 ಘಂಟೆಗೆ ಪುರಸಭೆ ಸಭಾ ಭವನದಲ್ಲಿ ಆಯೋಜಿಸಲಾಗಿದೆ.
ಪುರಸಭೆ ಸದಸ್ಯರು,ಪಟ್ಟಣದ ಗಣ್ಯರು,ಹಿರಿಯರು, ಎಲ್ಲ ಪಕ್ಷಗಳ ನಾಯಕರು, ಸಾರ್ವಜನಿಕರು, ನೋಂದಾಯಿತ ಸಂಘ ಸಂಸ್ಥೆಗಳು, ವಾಣಿಜ್ಯ ಸಂಘಗಳು, ಮಹಿಳಾ ಸಂಘ ಸಂಸ್ಥೆಗಳು ಹಾಗೂ ಇತರೆ ಸಂಘ ಸಂಸ್ಥೆಗಳ ಪ್ರತಿನಿಧಿಗಳು ಸಭೆಯಲ್ಲಿ ಭಾಗವಹಿಸಿ ತಮ್ಮ ಅಮೂಲ್ಯವಾದ ಸಲಹೆಗಳನ್ನು ನೀಡಲು ಪುರಸಭೆ ಅಧ್ಯಕ್ಷರಾದ ಶ್ರೀ ಯಲ್ಲನಗೌಡ ಬಿ ಪಾಟೀಲ ಹಾಗೂ ಮುಖ್ಯಾಧಿಕಾರಿ ಈರಣ್ಣ ಎಸ್ ದಡ್ಡಿ ಅವರು ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದ್ದಾರೆ.