ನಗರಸಭೆ ಅಧಿಕಾರಿಗಳ ದಾಳಿ: ನಿಷೇಧಿತ 85 ಕೆ.ಜಿ. ಪ್ಲಾಸ್ಟಿಕ್ ವಶ


ಕೊಪ್ಪಳ: ಕೊಪ್ಪಳ ನಗರಸಭೆ ವತಿಯಿಂದ ನಗರದ ಜೆ.ಪಿ. ಮಾಕರ್ೆಟ್ ಬಳಿಯ ವಾಣಿಜ್ಯ ಮಳಿಗೆಗಳಿಗೆ ಮಂಗಳವಾರದಂದು ದಾಳಿ ನಡೆಸಿದ್ದು, ಸುಮರು 85 ಕೆ.ಜಿ. ಯಷ್ಟು ನಿಷೇಧಿತ ಪ್ಲಾಸ್ಟಿಕ್ ವಶಕ್ಕೆ ಪಡೆಯಲಾಗಿದೆ.

  ಈಗಾಗಲೆ ಕೊಪ್ಪಳ ನಗರಸಭೆ ವ್ಯಾಪ್ತಿಯಲ್ಲಿ ಪ್ಲಾಸ್ಟಿಕ್ ಬಳಕೆ ಮತ್ತು ಮಾರಾಟವನ್ನು ನಿಷೇಧಿಸಲಾಗಿದೆ.  ನಗರಸಭೆ ವತಿಯಿಂದ ನಿಷೇಧಿತ ಪ್ಲಾಸ್ಟಿಕ್ ಅನ್ನು ಬಳಸದಂತೆ ಹಾಗೂ ಮಾರಾಟ ಮಾಡದಂತೆ ಸಾಕಷ್ಟು ಜನ ಜಾಗೃತಿ ಮೂಡಿಸಲಾಗುತ್ತಿದೆ.  ಆದಾಗ್ಯೂ ಪ್ಲಾಸ್ಟಿಕ್ ಮಾರಾಟ ಮಾಡುತ್ತಿರುವುದು ಕಂಡುಬರುತ್ತಿದ್ದು, ಹೀಗಾಗಿ ನಗರಸಭೆ ವತಿಯಿಂದ ಮಂಗಳವಾರದಂದು ನಗರದ ಜೆಪಿ ಮಾಕರ್ೆಟ್ ಬಳಿಯ ವಾಣಿಜ್ಯ ಮಳಿಗೆಗಳಿಗೆ ದಾಳಿ ನಡೆಸಲಾಯಿತು.  ಇಲ್ಲಿನ ಆರ್.ಆರ್. ಜನರಲ್ ಸ್ಟೋಸರ್್ ನಿಂದ 85 ಕೆ.ಜಿ. ಯಷ್ಟು ನಿಷೇಧಿತ ಪ್ಲಾಸ್ಟಿಕ್ ವಶಕ್ಕೆ ಪಡೆಯಲಾಯಿತು.  ನಗರಸಭೆ ಪೌರಾಯುಕ್ತ ಸುನೀಲ್ ಪಾಟೀಲ್, ಪರಿಸರ ಅಭಿಯಂತರ ಅಶೋಕ್ಕುಮಾರ್, ನಗರಸಭೆ ವ್ಯವಸ್ಥಾಪಕ ಮಂಜುನಾಥ ಬೆಲ್ಲದ, ರಾಘವೇಂದ್ರ ಅವರು ದಾಳಿಯಲ್ಲಿ ಪಾಲ್ಗೊಂಡಿದ್ದರು.