ಮೂಡಲಗಿ: ಎನ್ಎಸ್ಎಸ್. ಶಿಬಿರ
ಮೂಡಲಗಿ 27: ಎನ್.ಎಸ್.ಎಸ್. ಶಿಬಿರಗಳಲ್ಲಿ ವಿದ್ಯಾಥರ್ಿಗಳು ಭಾಗವಹಿಸುವದ ರಿಂದ ಸಮಾಜಸೇವಾ ಮನೋಭಾವನೆಗಳು ಬೆಳೆಯುತ್ತೆವೆ ಅಲ್ಲದೇ ಗ್ರಾಮೀಣ ಜನರು ನಿರ್ವಹಿಸುವ ಶ್ರಮದ ಜೀವನ, ಅವರ ಸಂಸ್ಕೃತಿ ಆಚಾರ ವಿಚಾರಗಳು ಸಾಂಪ್ರದಾಯಿಕ ಪದ್ದತಿಗಳು ಅರಿವಿಗೆ ಬರಲು ಸಾಧ್ಯವಿದೆ. ಎನ್.ಎಸ್.ಎಸ್. ಚಟುವಟಿಕೆಯಲ್ಲಿ ವಿದ್ಯಾಥರ್ಿಗಳು ಭಾಗವಹಿಸುವದ ರಿಂದ ನಿಜವಾದ ತಮ್ಮ ವ್ಯಕ್ತಿತ್ವದ ಮೌಲ್ಯಗಳನ್ನು ರೂಪಿಸಿಕೊಳ್ಳಬಹುದು & ವಿದ್ಯಾಥರ್ಿಗಳಲ್ಲಿ ನಾಯಕತ್ವ, ಸಹಕಾರ, ಸಹಾಯ ಸಭಲತೆಯ ಗುಣಗಳು ಬೆಳೆದು ಬರುತ್ತೇವೆಂದು ಮೂಡಲಗಿ ಆರ್.ಡಿ.ಎಸ್. ಪದವಿ ಮಹಾವಿದ್ಯಾಲಯದ ಉಪನ್ಯಾಸಕ ವಿಷ್ಣು ಭಾಗಡಿ ಅಭಿಪ್ರಾಯಪಟ್ಟರು.
ಇಲ್ಲಿಯ ಸಮೀಪದ ಪಟಗುಂದಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮೂಡಲಗಿಯ ಆರ್. ಡಿ. ಸೊಸೈಟಿಯ ಸ್ವತಂತ್ರ ಪದವಿ ಪೂರ್ವ ಮಹಾವಿದ್ಯಾಲಯದ ವಿದ್ಯಾಥರ್ಿಗಳ ವಾಷರ್ಿಕ ಎನ್. ಎಸ್. ಎಸ್. ಶಿಬಿರದ ಉದ್ಘಾಟನಾ ಸಮಾರಂಭದಲ್ಲಿ ಅತಿಥಿಗಳಾಗಿ ಆಗಮಿಸಿ ಮಾತನಾಡಿ ಇಂತಹ ಶಿಬಿರಗಳು ವಿದ್ಯಾಥರ್ಿಯಲ್ಲಿ ಪಾಠದ ಜೊತೆ ಸಾಮಾಜಿಕ ಜೀವನದ ಮೌಲ್ಯಗಳನ್ನು ಬೆಳಸಿಕೊಳ್ಳವಲ್ಲಿ ಸಹಕಾರಿಯಾಗಿವೆ ಎಂದರು
ಉಪನ್ಯಾಸಕ ಸಂಗಪ್ಪಾ ಕುಂಬಾರ ಮಾತನಾಡಿ ದೇಶ ಸೇವೆ & ಸಾಮಾಜಿಕ ಸೇವೆ ವಿಚಾರವಂತಿಕೆಗಳನ್ನು ವಿದ್ಯಾಥರ್ಿಗಳಲ್ಲಿ ಬೆಳಸುವ ಉದ್ದೇಶದೊಂದಿಗೆ ಇಂತಹ ಎನ್.ಎಸ್.ಎಸ್. ಕೋಶಗಳನ್ನು ಆರಂಭಿಸಲಾಗಿದ್ದು ಅದರಲ್ಲಿ ಭಾಗವಹಿಸಿದ ವಿದ್ಯಾಥರ್ಿಗಳು ಶಿಬಿರದಲ್ಲಿ ಭಾಗವಹಿಸಿದರೆ ಮಾತ್ರ ಸಮಾಜದ ನೈಜ ಸ್ಥಿತಿಗತಿಗಳ ಅರಿವು ಆಗುತ್ತದೆ ಎಂದರು.
ಶಾಲೆಯ ಪ್ರಧಾನ ಗುರುಗಳಾದ ಎಸ್. ಕೆ. ಭಜಂತ್ರಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಂಡು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಸಮಾಜದಲ್ಲಿನ ಸ್ಥಿತಿಗತಿಗಳನ್ನು ನಾವೂ ತಿಳಿವಳಿಕೆ ಹೊಂದಲು ಶಿಬಿರಗಳು ಮಹತ್ವದ ಪಾತ್ರ ವಹಿಸುತ್ತೇವೆ. ವಿದ್ಯಾಥರ್ಿ ಕೇವಲ ಪಠ್ಯವಿಷಯದಿಂದ ಮಾತ್ರ ಕಲಿಯಿಲು ಸಾಧ್ಯವಿಲ್ಲ ಇಂತಹ ಶಿಬಿರಗಳು ಪಠ್ಯೇವಿಷಯದ ಜೊತೆಗೆ ಪ್ರಾಯೋಗಿಕ ಜ್ಞಾನ ನೀಡುತ್ತೇವೆ ಎಂದರು.
ರಾಷ್ಟ್ರೀಯ ಸೇವಾ ಯೋಜನೆಯ ಘಟಕಾಧಿಕಾರಿಗಳಾದ ಸಂಜೀವ ವಾಲಿ ಪ್ರಾಸ್ತಾವಿಕವಾಗಿ ಮಾತನಾಡಿದರು ಕಾರ್ಯಕ್ರಮದಲ್ಲಿ ಉಮೇಶ ಪುಟ್ಟಿ, ಗಾಯತ್ರಿ ಖಾಸನೀಸ್ ಬಿ.ಎಂ.ತುಬಾಕಿ ಭಾರತಿ ಪರಕನಟ್ಟಿ, ಎಲ್.ಬಿ.ಕೆಳಗೇರಿ, ಎಂ.ಎನ್. ಪಂಡಾರಿ., ಎ.ಎ.ಪಾಟವೇಗಾರ ಎಂ.ಕೆ.ಭಜಂತ್ರಿ ಮತ್ತಿತರರು ಹಾಜರಿದ್ದರು. ಕೀತರ್ಿ ದಾನನ್ನವರ ನಿರೂಪಿಸಿದರು ಕಾವ್ಯಾ ದಾನನ್ನವರ ಸ್ವಾಗತಿಸಿದರು ಅಬೂಬಕರ ಡಾಂಗೆ ವಂದಿಸಿದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 