ಬಿರುಗಾಳಿಗೆ ನಲುಗಿದ ಮುಂಡಗೋಡು!

Mundagodu shaken by the storm!

ಭಾರೀ ಮಳೆ ಬಿರುಗಾಳಿಗೆ ಧರೆಗುರುಳಿದ ಮರಗಳು ಹಾಗೂ ವಿದ್ಯುತ ಕಂಬಗಳು ನೆಟ್ವರ್ಕ್‌ ಕಂಬ!    

ಮುಂಡಗೋಡ 10:  ತಾಲೂಕಿನಲ್ಲಿ ಭಾರೀ ಗುಡುಗು-ಸಿಡಿಲು ಹಾಗೆಯೇ ಮಿಂಚು-ಬಿರುಗಾಳಿ ಸಹಿತ ಮಳೆಯಾಗಿದೆ. ಸುಂಟರಗಾಳಿ ಮಾದರಿಯ ಗಾಳಿ ಮಳೆಗೆ ಹಲವಡೆಯಲ್ಲಿ ಮರಗಳು ಹಾಗೂ ವಿದ್ಯುತ್ ಕಂಬಗಳು ಮನೆಯ ಮೇಲ್ಛಾವಣಿಗಳು  ಚೆಲ್ಲಾಪಿಲ್ಲಿಯಾಗಿ ಹೋಗಿವೆ.    

ಇಲ್ಲಿಯ ಶಿರಸಿ-ಹುಬ್ಬಳ್ಳಿ ರಸ್ತೆಯಲ್ಲಿ ಉರುಳಿದ ಬೃಹತ್ ಗಾತ್ರದ ಮರದಿಂದ ರಸ್ತೆ ಸಂಚಾರ ಬಂದಾಗಿದ್ದು ಪಟ್ಟಣ ಹಾಗೂ ಗ್ರಾಮೀಣ ಭಾಗಗಳಲ್ಲಿ ಹಲವು ಮನೆಗಳ ಮೇಲ್ಛಾವಣಿ ಹಾರಿ ಹೋಗಿ ಹಾನಿಯಾಗಿದೆ ಘಟನೆ ಮಂಗಳವಾರ ಸಾಯಂಕಾಲ ಸಂಭವಿಸಿದೆ. ಸುಂಟರಗಾಳಿಗೆ ಹಲವು ವಿದ್ಯುತ್ ಕಂಬಗಳು ಮರಗಳು ಧರೆಗುರುಳ ವಿವಿಧ ಗ್ರಾಮಗಳಲ್ಲಿ ಮನೆಯ ಮೇಲ್ಛಾವಣಿಗಳು  ಚೆಲ್ಲಾಪಿಲ್ಲಿಯಾಗಿ ಹಾರಿಹೋಗಿದೆ. ಶಿವಾಜಿಯ ಸರ್ಕಲ್ ನಲ್ಲಿ ರಸ್ತೆ ಬದಿ ಹಾಕಲಾದ ಪ್ಲೆಕ್ಸ್‌ ಗಳು ಧಾರ್ಮಿಕ ಕಾರ್ಯಕ್ರಮಗಳಿಗೆ  ಹಾಕಲಾದ ಪ್ಲೆಕ್ಸ್‌ ಗಳು ಧರೆಗುರುಳಿವೆ. ಅಯ್ಯಪ್ಪ ಸ್ವಾಮಿಯ ಹಿಂಬದಿ ಇದ್ದ ನೆಟ್ವರ್ಕ್‌ ಕಂಬ  ಪಲ್ಟಿಯಾಗಿದೆ ಹಾಗೂ ಹಲವು ಕಡೆಗೆ ಅಪಾರ ಹಾನಿಯಾಗಿವೆ.