ಮುಂಬೈ, ಆಗಸ್ಟ್ 31: ಮಹಾರಾಷ್ಟ್ರದ ಶಿರಪುರ ಬಳಿಯ ರಾಸಾಯನಿಕ ಕಾಖರ್ಾನೆಯಲ್ಲಿ ಶನಿವಾರ ಮುಂಜಾನೆ ಸಂಭವಿಸಿದ ಸ್ಫೋಟದಲ್ಲಿ ಸಾವ್ನಪ್ಪಿದವರ ಸಂಖ್ಯೆ ಹತ್ತಕ್ಕೇರಿದ್ದು, ಸುಮಾರು 40 ಮಂದಿ ಗಾಯಗೊಂಡಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಶಿರಪುರ ಹೊರವಲಯದಲ್ಲಿರುವ ವಾಘಡಿ ಪ್ರದೇಶದ ಮುಂಬೈ ಮೂಲದ ರುಮಿತ್ ಇಂಟರ್ನ್ಯಾಷನಲ್ ಕೆಮಿಸಿಂತ್ ಕಾಖರ್ಾನೆಯ ಬಾಯ್ಲರ್ನಲ್ಲಿ ಈ ಸ್ಫೋಟ ಸಂಭವಿಸಿದೆ ಎಂದು ವರದಿಯಾಗಿದೆ.
ಸುತ್ತಮುತ್ತಲಿನ ಹಲವಾರು ಹಳ್ಳಿಗಳಲ್ಲಿನ ಮನೆಗಳು ಮತ್ತು ಕಟ್ಟಡಗಳು ಸ್ಫೋಟದ ಶಬ್ಧದಿಂದಾಗಿ ಬಿರುಕು ಬಿಟ್ಟಿದ್ದು, ಬೆಂಕಿಯಿಂದಾಗಿ ಕಪ್ಪು ಹೊಗೆಯ ಮೋಡವೇ ನಿರ್ಮಾಣಗೊಂಡಿತ್ತು ಎಂದು ಶಿರಪುರದ ಪೊಲೀಸ್ ಠಾಣೆಯ ಅಧಿಕಾರಿ ಸಂಜಯ್ ಅಹಿರೆ ತಿಳಿಸಿದ್ದಾರೆ.
ಸ್ಫೋಟದ ತೀವ್ರತೆ ಮತ್ತು ಅದರ ನಂತರ ಸಂಭವಿಸಿದ ಬೆಂಕಿಯನ್ನು ಗಮನಿಸಿದರೆ, ಸಾವುನೋವುಗಳ ಸಂಖ್ಯೆ ಮತ್ತಷ್ಟು ಹೆಚ್ಚುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅಗ್ನಿಶಾಮಕ ದಳದವರು ಬಾಯ್ಲರ್ ಸಂಕೀರ್ಣ ಮತ್ತು ಕಾರ್ಖಾನೆಯಲ್ಲಿನ ಬೆಂಕಿಯ ಜ್ವಾಲೆಯನ್ನು ನಂದಿಸುವಲ್ಲಿ ನಿರತರಾಗಿದ್ದರೆ, ರಕ್ಷಣಾ ತಂಡಗಳು ಗಾಯಾಳುಗಳನ್ನು ಹತ್ತಿರದ ಆಸ್ಪತ್ರೆಗಳಿಗೆ ಕರೆದೊಯ್ಯುತ್ತಿದ್ದರು.