ಮುಂಬೈ-ಕನರ್ಾಟಕ ರಣಜಿ ಪಂದ್ಯ: ಕನರ್ಾಟಕಕ್ಕೆ ಇನ್ನಿಂಗ್ಸ್ ಮುನ್ನಡೆ

ಬೆಳಗಾವಿ, ತಂಡದ ಸ್ಥಳೀಯ ಪ್ರತಿಭೆ ರೋನಿತ ಮೋರೆ ಹಾಗೂ ಇತರ ಬೌಲರುಗಳ ದಾಳಿಯ ಸಹಾಯದಿಂದ ಕನರ್ಾಟಕ ತಂಡ ಮುಂಬಯಿ ವಿರುದ್ಧದ ರಣಜಿ ತಂಡದಲ್ಲಿ ಇನಿಂಗ್ಸ್ ಮುನ್ನಡೆ ಪಡೆದುಕೊಂಡಿದೆ.

ಆಟೋ ನಗರದ ಕೆಎಸ್ಸಿಎ ಕ್ರೀಡಾಂಗಣದಲ್ಲಿ ನಡೆದಿರುವ ನಾಲ್ಕು ದಿನಗಳ ರಣಜಿ ಪಂದ್ಯದಲ್ಲಿ ಮೊದಲು ಬ್ಯಾಟ ಮಾಡಿದ ಕನರ್ಾಟಕ ಮೊದಲ ಇನ್ನಿಂಗ್ಸನಲ್ಲಿ 400 ರನ್ ಗಳಿಸಿತ್ತು. ಆದರೆ, ಮುಂಬೈ ತಂಡ ನಿನ್ನೆ ಆರಂಬಿಸಿದ ತನ್ನ ಮೊದಲ ಇನ್ನಿಂಗ್ಸ್ನ್ನು ಮೂರನೆ ದಿನವಾದ ಇಂದು ಮಧ್ಯಾನ್ಹದ ವೇಳೆಗೆ 205 ರನ್ ಗಳಿಸಿ ಆಲ್ ಔಟ್ ಆಯಿತು. ಇದರ ಫಲ ಕನರ್ಾಟಕಕ್ಕೆ 195 ರನ್ಗಳ ಮುನ್ನಡೆ ಲಭ್ಯವಾಯಿತು.

ಬೆಳಗಾವಿಯಲ್ಲಿ ತನ್ನ ಪ್ರಥಮ ರಣಜಿ ಪಂದ್ಯ ಆಡುತ್ತಿರುವ ಬೆಳಗಾವಿಯ ರೋನಿತ್ ಮೋರೆ ನಾಲ್ಕು ವಿಕೆಟ್ ಪಡೆದು ಮುಂಬೈ ತಂಡವನ್ನು ನಿಯಂತ್ರಿಸುವಲ್ಲಿ ಮುಖ್ಯ ಪಾತ್ರ ವಹಿಸಿದರು. 21.5 ಓವರ್ ಬೌಲಿಂಗ್ ಮಾಡಿದ ರೋನಿತ್ ಒಟ್ಟು 5 ವಿಕೆಟ್ ಪಡೆದುಕೊಂಡರು.