ಬಹು ಉಪಯೋಗಿ ಅರಣ್ಯ ಸುಂದರಿ ಮುತ್ತುಗ(ಬೃಹ್ಮವೃಕ್ಷ)

ಹಾವೇರಿ03:  ಬೇಸಿಗೆಯಲ್ಲಿ ಕಾಡೆಲ್ಲ ತಮ್ಮ ಸ್ವಾಭಾವಿಕವಾಗಿ ಎಲೆಗಳನ್ನು ಉದುರಿಸುತ್ತವೆ ಹಾಗಾಗಿ ಕಾಡು ಸಂಪೂರ್ಣವಾಗಿ ಒಣಮಯವಾಗಿ ಗಿಡದ ರೆಂಬೆ ಕಾಂಡಗಳು ಮಾತ್ರ ಎದ್ದು ಕಾಣುತ್ತವೆ, ಅಂತಹ ಬೋಳಾದ ಕಾಡಿನ ಮಧ್ಯೆ ಅಲ್ಲೊಂದು ಇಲ್ಲೊಂದು ಮುತ್ತುಗದ ಮರವು ಎಲೆಯನ್ನು ಉದುರಿಸಿಕೊಂಡು ಗಿಡವೆಲ್ಲ ಹೂವಿನಿಂದ ತುಂಬಿ ಪಕ್ಷಿಗಳಿಂದ ತುಂಬಿಕೊಂಡುತ್ತದೆ.

       ಮುತ್ತುಗದ ಹೂವಿಗೆ ಕಾಡಿನ ಜ್ವಾಲೆ, ಬ್ರಹ್ಮ ವೃಕ್ಷ ಎಂತಲೂ ಕರೆಯತ್ತಾರೆ. ಮುತ್ತಲ ಭಾರತದಲ್ಲಿ ಹಳೆಯ ಮರ, ಹೆಚ್ಚಾಗಿ ಇದನ್ನು ಗೃಹ ಪ್ರವೇಶ, ಹೋಮ-ಹವನಗಳಿಗೆ, ಉಟದ ತಟ್ಟೆಗೆ, ಪೂಜೆಗೆ ಇದರ ಎಲೆಗಳನ್ನು ಬಳಸಲಾಗಿದ್ದು ವೇದ ಪೂರಾಣ ಧರ್ಮದಲ್ಲಿ ಉನ್ನತ ಸ್ಥಾನವನ್ನು ಪಡೆದಿದೆ. 

     ಮುತ್ತಗದ ಮರವನ್ನು ಸಸ್ಯ ಜಾತಿಯ ಪಾಪಿಲಿಯೋನೇಸಿ ಕುಟುಂಬ, ಶಾಸ್ತ್ರೀಯವಾಗಿ ಬ್ಯೂಟಿಯಾ ಪ್ರಂಡೊಸಾ ಎಂಬ ಹೆಸರಿನಿಂದ ಕರೆಯುತ್ತಾರೆ. ಸ್ವಾತಂತ್ರ್ಯ ಪೂರ್ವದಲ್ಲಿ ಬ್ರಿಟಿಷರು ಈ ಮರದ ವಿಶೇಷತೆಯನ್ನು ಕಂಡು ಪ್ಲೇಮ್ ಆಪ್ ಫಾರೆಸ್ಟ ಎಂದು ಕರೆದಿದ್ದಾರೆ ಎಂದು ಜೀವಶಾಸ್ತ್ರ ಉಪನ್ಯಾಸಕ ಪ್ರಮೋದ ನಲವಾಗಲ ಹೇಳುತ್ತಾರೆ. ಭಾರತದಲ್ಲಿ ಅನೇಕ ಪ್ರದೇಶಗಳಲ್ಲಿಯೂ ಈ ಮರಕ್ಕೆ ನಾನಾರ್ಥಗಳಿಂದ ಕರೆಯುತ್ತಾರೆ.

         ಜನೇವರಿ ತಿಂಗಳಿನಲ್ಲಿ ಮೊಗ್ಗುಗಳು ಮೂಡಿ ಬೇಸಿಗೆಯಲ್ಲಿ ಉಜ್ವಲ ಕೆಂಪು ಬಣ್ಣದ ಹೂಗಳು ಎಲೆ ರಹಿತ ಮರದಲ್ಲಿ ಎದ್ದು ಕಾಣುತ್ತದೆ. ಹಚ್ಚಹಸಿರಿನ ಅಗಲವಾದ ಎಲೆಗಳು ದಪ್ಪವಾದ ನಾರಿನಿಂದ ಕೂಡಿದ್ದು ಬೇಗ ಹರಿದು ಹೋಗುವುದಿಲ್ಲ, ಹಾಗೂ ಬಾಡುವುದಿಲ್ಲ, ಈ ಎಲೆಗಳನ್ನು ಸಣ್ಣ ಕಡ್ಡಿಗಳಿಂದ ಹೊಲಿದು ಬಟ್ಟಲಿನ ಆಕೃತಿಯನ್ನು ಮಾಡಿ ಊಟ ಬಡಿಸಲು, ವಿಶೇಷ ಪೂಜೆ, ಪ್ರಸಾದ ಕೊಡಲು ಉಪಯೋಗಿಸುತ್ತಾರೆ. ಹಳ್ಳಿಗಳಲ್ಲಿ ಇದನ್ನೇ ಸ್ಥಳೀಯವಾಗಿ ಪತ್ರೋಳಿ ಮಾಡಿ ಸಂತೆಯಲ್ಲಿ ಮಾರುತ್ತಾರೆ.

     ಮುತ್ತುಗದ ಮರದಲ್ಲಿ ಅನೇಕ ಔಷಧೀಯ ಗುಣಗಳು ಇರುವುದನ್ನು ಪತ್ತೆ ಹಚ್ಚಿದ ಆಯುವರ್ೇದ ಪಂಡಿತರು ಜನಸಾಮಾನ್ಯರಿಗೆ ಔಷಧೀಯ ಪ್ರಯೋಜನವನ್ನು ನೀಡುತ್ತಿದ್ದಾರೆ. ಬೇಸಿಗೆಯಲ್ಲಿ ಬಿದ್ದ ಬೀಜಗಳು ಮಳೆಗಾಲದಲ್ಲಿ ಕೊಚ್ಚಿ ಹೋಗಿ ಅರಣ್ಯವೆಲ್ಲ ಸಸಿಗಳಾಗಿ ಹುಟ್ಟಿ ದೊಡ್ಡ ಮರವಾಗಿ ಬೆಳೆಯುತ್ತಿವೆ. ಮುತ್ತಗ ಹೂ ಬಿಟ್ಟಾಗ ಹೆಚ್ಚಾಗಿ ಪರ್ಪಲ್ ರ್ಯಾಂಪ್ ಸನ್ ಬಡರ್್, ಬಿಳಿ ಕೋಗಿಲೆ(ಮಟಪಕ್ಷಿ), ಜೇನುನೋಣಗಳು ಹೆಚ್ಚಾಗಿ ಕಾಣುತ್ತವೆ. 

    ಒಟ್ಟಾರೆಯಾಗಿ ಬಹುಪಯೋಗಿ ಮರವಾದ ಮುತ್ತಲ ಹೂ ಬಿಟ್ಟಾಗ ಒಬ್ಬೊಬ್ಬರಿಗೆ ಒಂದೊಂದು ರೀತಿಯ ಭಾವನೆಗಳು ಮೂಡಿ ಬರುತ್ತವೆ. ಕವಿಗಳನ್ನು ಕಾಡಿರುವ ಮುತ್ತುಗ ಹಲವು ಕವನಗಳು ಹುಟ್ಟಲೂ ಕಾರಣವಾಗಿದೆ. 

   ಮುತ್ತುಗ ಮರದ ರಕ್ಷಣೆಯಿಂದ ಪ್ರಕೃತಿಯ ಸೌಂದರ್ಯದ ಜೊತೆಗೆ ಸ್ಥಳೀಯವಾಗಿ ಉದ್ಯೋಗವನ್ನು ಕಲ್ಪಿಸುವ ಕಾಮಧೇನುವಾಗಬಲ್ಲದು. ಪ್ಲಾಸ್ಟಿಕ್ ಹಾಳೆ, ತಟ್ಟೆಗಳ ಬದಲಿಗೆ ಬಾಳೆ ಎಲೆ, ಮುತ್ತುಗದ ಎಲೆಯ ಹಾಳೆಗಳು ಎಲ್ಲ ಸಮಾರಂಭಗಳಲ್ಲಿ  ಬಳಸಿದರೆ ಈ ಮರದ ಎಲೆಯಿಂದ ತಯಾರಿಸಿದ ಪತ್ರೊಳಿಗಳು ಸ್ವ ಉದ್ಯೋಗ ಕಲ್ಪಿಸಲು ನೆರವಾಗಬಲ್ಲದು.  ಪ್ರಕೃತಿಗೆ ರಂಗುತುಂಬುವ  ಈ ಮರವನ್ನು ನಾಶ ಮಾಡದೆ ಅದರ ಸಹಜ ಸೌಂದರ್ಯವನ್ನು ಕಾಪಾಡಿಕೊಂಡು ಹೋಗಬೇಕಾಗಿದೆ.

ಪ್ರಕೃತಿ ಚೆಲುವಿನ ಮುತ್ತುಗದ ಸಂತತಿಯನ್ನು ವೃದ್ಧಿಸುವ ನಿಟ್ಟಿನಲ್ಲಿ ಅರಣ್ಯ ಇಲಾಖೆ ಮುಂದಾಗಿದೆ. ಜಿಲ್ಲೆಯ ಎಲ್ಲ ನರ್ಸರಿಗಳಲ್ಲಿ ಮುತ್ತುಗದ ಸಸಿಬೆಳೆಸಿ ವಿತರಣೆ ಮಾಡುವ ಯೋಜನೆಯನ್ನು ಅರಣ್ಯ ಇಲಾಖೆ ಹಾಕಿಕೊಂಡಿದೆ. 

    ಇಲಾಖೆಯ ಮಾಹಿತಿಯಂತೆ ಜಿಲ್ಲೆಯಲ್ಲಿ ನಾಲ್ಕರಿಂದ ಐದುಸಾವಿರ ಮುತ್ತುಗದ ಮರಗಳಿವೆ.  ಹಾನಗಲ್ ಭಾಗದಲ್ಲಿ ಮುತ್ತುಗ ಮರಗಳ ಸಂಖ್ಯೆ ಹೇರಳವಾಗಿವೆ ಎಂದು ಜಿಲ್ಲಾ ಪ್ರಾದೇಶಿಕ ಅರಣ್ಯ ಸಂರಕ್ಷಣಾಧಿಕಾರಿ ಎ.ಎನ್.ಕ್ರಾಂತಿ  ಅವರು ತಿಳಿಸಿದ್ದಾರೆ.