ಲೋಕದರ್ಶನವರದಿ
ಗುಳೇದಗುಡ್ಡ: ಪಟ್ಟಣದ ಸಾರ್ವಜನಿಕ ಮುಕ್ತಿಧಾಮದ ಅಭಿವೃದ್ಧಿ ಮಾಡುವುದು ಅಗತ್ಯವಾಗಿದ್ದೂ, ಶಾಸಕರ ಹಾಗೂ ಪುರಸಭೆ ಅನುದಾನದಲ್ಲಿ ಎಲ್ಲ ಮೂಲಭೂತ ಸೌಕರ್ಯಗಳನ್ನು ಒದಗಿಸಿ ಅದನ್ನು ಸಮಗ್ರ ಅಭಿವೃದ್ಧಿಪಡಿಸುವದಾಗಿ ಪುರಸಭೆ ಮಾಜಿ ಅಧ್ಯಕ್ಷ ವೈ.ಆರ್.ಹೆಬ್ಬಳ್ಳಿ ಭರವಸೆ ನೀಡಿದರು.
ಪಟ್ಟಣದ ಬಸವೇಶ್ವರ ನಗರದಲ್ಲಿರುವ ಸಾರ್ವಜನಿಕ ಮುಕ್ತಿಧಾಮದ ಅಭಿವೃದ್ಧಿ ಸಮಿತಿ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಸಭೆಯಲ್ಲಿ ಅವರು ಮಾತನಾಡಿ, ಮುಕ್ತಿಧಾಮದ ವಿಶಾಲವಾದ ಚಿತಾಗಾರದ ಕಟ್ಟೆ ನಿಮರ್ಿಸಲು ಸಹಾಯ ಮಾಡಿದ ದಾನಿಗಳಾದ ಪರಶುರಾಮ ಪವಾರ ಅವರ ಸೇವೆ ಎಲ್ಲರಿಗೂ ಮಾದರಿಯಾಗಿದೆ. ಅದರಂತೆ ಪಟ್ಟಣದ ಎಲ್ಲ ಸಮಾಜದ ಹಿರಿಯರು ದೇಣಿಗೆ ಸಂಗ್ರಹಿಸಿ ಉಳಿದ ಅಭಿವೃದ್ಧಿಗೆ ಮುಂದಾಗಿರುವುದು ಶ್ಲಾಘನೀಯ. ಅದರ ಜೊತೆಗೆ ಪುರಸಭೆ ಹಾಗೂ ಶಾಸಕರ, ಸಂಸದರ ಅನುದಾನವನ್ನೂ ಬಳಸಿ ಅಭಿವೃದ್ಧಿಗೆ ಮುಂದಾಗಬೇಕಿದೆ. ಎಲ್ಲ ಮುಖಂಡರ ಪ್ರಯತ್ನದಿಂದ ಅಭಿವೃದ್ಧಿ ಪಡಿಸೋಣ ಎಂದರು.
ಮುಕ್ತಿಧಾಮ ಸಮಿತಿ ಅಧ್ಯಕ್ಷ ವಿಷ್ಣು ಬಳಿಗೇರ ಮಾತನಾಡಿ, ಶವ ಸುಡಲು ಕಟ್ಟಿಗೆ ಬದಲು ಹೊಟ್ಟು ಮಿಶ್ರಿತ ಬ್ರಿಕೇಟ್ಸ್ ಬಳಸುವ, ಶಿವನ ಮೂತರ್ಿ ಸ್ಥಾಪಿಸುವ, ಸ್ನಾನಗೃಹ, ಮೂತ್ರಾಲಯ, ಶೌಚಾಲಯ ನಿಮರ್ಿಸುವ, ಗಿಡಮರಗಳನ್ನು ಬೆಳೆಸಿ ಸುಂದರ ವನವನ್ನಾಗಿಸುವ, ಎಲ್ಲ ಸೌಲಭ್ಯವಿರುವ ಮುಕ್ತಿಧಾಮವನ್ನು ಉದ್ಯಾನವನ ಮಾದರಿಯಲ್ಲಿ ಅಭಿವೃದ್ಧಿ ಪಡಿಸುವ ಕನಸುಗಳಿದ್ದೂ ಎಲ್ಲರ ಸಹಕಾರಕ್ಕಾಗಿ ವಿನಂತಿಸಿಕೊಂಡರು.
ಪರಶುರಾಮ ಪವಾರ, ಪುರಸಭೆ ಸದಸ್ಯ ಎಲ್ಲಪ್ಪ ಮನ್ನಿಕಟ್ಟಿ, ಸುರೇಶ ಭಾಟ್, ವಿಠ್ಠಲ ಕಳಸಾ, ಹೇಮಾದ್ರಿ, ರಾಮಣ್ಣ ಬಿಜಪೂರ, ನಾಗರಾಜ ಧಾರವಾಡ, ಉಮೇಶ ಶಿವನಗೌಡರ, ರಘು ಕಾಟವಾ, ಸಿ.ಎಂ. ಹಳಪೇಟೆ, ಮುತ್ತು ಚಿಕ್ಕನರಗುಂದ, ಹಾನಾಪೂರ, ಮಾಗುಂಡಪ್ಪ ದಂಡಿನ, ಮೇಡಿ, ಮಂಟಾ, ಯಲಗುರ್ದಪ್ಪ ಮನ್ನಿಕಟ್ಟಿ, ಜೇವರಗಿ, ಪಾರ್ವತಿ ಕಳಸಾ, ಕಲಾವತಿ ಕಳಸಾ, ಅಕ್ಕಮ್ಮ ಸಕ್ರಿ, ಸೇರಿದಂತೆ ಪಟ್ಟಣದ ವಿವಿಧ ಸಮಾಜಗಳ ಗುರು, ಹಿರಿಯರು, ಮಹಿಳೆಯರು, ಸಮಿತಿ ಸರ್ವ ಸದಸ್ಯರು ಹಾಜರಿದ್ದರು.