ಬೆಳಗಾವಿ : ಪ್ರತಿ ವರ್ಷದಂತೆ ಮಕರ ಸಂಕ್ರಾಂತಿಯ ದಿನದಂದು ಇಲ್ಲಿನ ಸುಕ್ಷೇತ್ರ ಮುಕ್ತಿ ಮಠದ ಜಾತ್ರಾಮಹೋತ್ಸವವು ಇದೇ ಜ. 14ರಿಂದ 18ರವರೆಗೆ ನಡೆಯಲಿದ್ದು, ಈ ಜಾತ್ರಾಮಹೋತ್ಸವದಲ್ಲಿ ಧಾಮರ್ಿಕ ಕಾಯಕ್ರಮಗಳನ್ನು ಆಯೋಜಿಲಾಗಿದೆ ಎಂದು ಮುಕ್ತಿಮಠದ ಶಿವಸಿದ್ದ ಸೋಮೇಶ್ವರ ಶಿವಾಚಾರ್ಯ ಶ್ರೀಗಳು ಇಂದಿಲ್ಲಿ ತಿಳಿಸಿದರು.
ಶನಿವಾರ ದಿನದಂದು ನಗರದ ಕನ್ನಡ ಸಾಹಿತ್ಯ ಭವನದಲ್ಲಿ ಕರೆಯಲಾಗಿದ್ದ ಪತ್ರಿಕಾ ಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ದಿ.14ರಂದು 10 ಗಂಟೆಗೆ ಭೂತರಾಮನಹಟ್ಟಿ ಗ್ರಾಮದಿಂದ ಮುಕ್ತಿಮಠದವರೆಗೆ ಮುಕ್ತಾಂಬಿಕಾ ದೇವಿಯ ಉತ್ಸವ ಮೂತರ್ಿ ಬರಮಾಡಿಕೊಳ್ಳಲಾಗುವದು. ಬಳಿಕ ಮುಕ್ತಾಂಬಿಕಾ ದೇವಿಗೆ ಕೆ.ಕೆ.ಕೊಪ್ಪ ಗ್ರಾಮದ ಹಂಬನ್ನವರ ಕುಟುಂಬದಿಂದ ಉಡಿ ತುಂಬುವ ಕಾರ್ಯಕ್ರಮ, ಸಂಜೆ 4 ಗಂಟೆಗೆ ಧರ್ಮಸಭೆ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಹಲವು ಮಠಾಧೀಶರು ಉದ್ಯಮಿ ಲಖನ ಜಾರಕಿಹೊಳಿ, ನಾಗಪ್ಪ ಕರಜಗಿ, ಕೋಟಿವಾಲೆ, ಜಗದೀಶ ತಾರೇಕರ್ ಸೇರಿದಂತೆ ಅನೇಕರು ಭಾಗ ವಹಿಸಲಿದ್ದಾರೆ ತಿಳಿಸಿದರು.
ಅದರಂತೆ 14ರಿಂದ 18ರವರೆಗೆ ಜರುಗುವ ಈ ಜಾತ್ರಾ ಮಹೋತ್ಸವದಲ್ಲಿ ಹಲವು ಧಾಮರ್ಿಕ ಕಾಯಕ್ರಮ ಜರುಗಲಿದ್ದು ಪ್ರತಿ ದಿನ 4 ಗಂಟೆಗೆ ಧರ್ಮಸಭೆ ನಡೆಲಿದೆ. ಮಹೋತ್ಸವದ ಕಾರ್ಯಕ್ರಮದಲ್ಲಿ ರಾಜ್ಯದ ಹಲವಾರು ಮಠಾಧೀಶರು, ರಾಜಕೀಯ ಮುಖಂಡರು, ಸಾಹಿತ್ಯಿಗಳು ಮುಖಂಡರು, ಧಾನಿಗಳು ಭಾಗವಹಿಸುವವರು. ಇದೇ ವೇಳೆಯಲ್ಲಿ ಸಂಗೀತ ಸೇವೆ, ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ ಎಂದು ಶ್ರೀಗಳು ತಿಳಿಸಿದರು.
ಈ ಜಾತ್ರಾ ಮಹೋತ್ಸವದಲ್ಲಿ ಸಾಮಾಜಿಕ ಹಾಗೂ ಧಾಮರ್ಿಕ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿರುವ ಸದ್ಭಕ್ತರಿಗೆ ಸನ್ಮಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದರು. ಇದೇ ಸಂದರ್ಭದಲ್ಲಿ ಶ್ರೀಗಳ ತುಲಾಭಾರ ಸೇವೆ ಸೇರಿದಂತೆ ಹಲವು ಕಾರ್ಯಕ್ರಮಗಳು ನಡೆಯಲಿವೆ ಎಂದು ಹೇಳಿದರು. ಬ್ರಹ್ಮಾಂಡ ಗುರೂಜಿ ನರೇಂದ್ರ ಬಾಬು ಶಮರ್ಾ, ಮೈಸೂರು ಶ್ರೀ ರಂಗ ಪಟ್ಟಣದ ಡಾ, ತ್ರಿನೇತ್ರ ಶಿವಯೋಗಿ ಮಹಾಸ್ವಾಮಿಗಳು ಸೇರಿದಂತೆ ಕನರ್ಾಟಕ, ಮಹಾರಾಷ್ಟ್ರದ ಹಲವಾರು ಮಠಾಧೀಶರು, ಕೇಂದ್ರ ಸಚಿವರು, ರಾಜ್ಯ ಸಕರ್ಾರದ ಸಚಿವರು, ಲೋಕಸಭಾ ಸದಸ್ಯರು, ಶಾಸಕರು, ಅಧಿಕಾರಿಗಳು, ಸಂಘ, ಸಂಸ್ಥೆಯ ಮುಖ್ಯಸ್ಥರು ಭಾಗವಹಿಸುವರು ಎಂದು ಶಿವಸಿದ್ದ ಸೋಮೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ಹೇಳಿದರು. 2021ರಲ್ಲಿ ಕೋಟಿ ದೀಪೋತ್ಸವ ಮಹಾಸಂಕಲ್ಪ ಮಾಡಲಾಗಿದೆ ಆ ನಿಟ್ಟಿನಲ್ಲಿ ಕಾರ್ಯ ಪ್ರಾರಂಭವಾಗಿದೆ ಎಂದು ಶ್ರೀಗಳು ಹೇಳಿದರು.
ಈ ಜಾತ್ರಾಮಹೋತ್ಸವ ಅಂಗ ವಾಗಿ ದಿ. 18ರಂದು ಬೆಳಿಗ್ಗೆ 10 ಗಂಟೆಗೆ ಮುಗದ ಗ್ರಾಮದ ಪದ್ಮಪ್ಪ ಕೊಂಪಣ್ಣವರ ಕುಟುಂಬದವರಿಂದ ಶಿವಪಾರ್ವತಿಯರ ಕಲ್ಯಾಣೋತ್ಸವ ನಡೆಯಲಿದೆ.
ಬಳಿಕ ಗೋಡಿಹಾಳ ಗ್ರಾಮದಿಂದ ಮುಕ್ತಿಮಠದ ವರೆಗೆ ಶಿವಸಿದ್ದ ಸೋಮೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳ ಅಡ್ಡಪಲ್ಲಕ್ಕಿ ಉತ್ಸವ ಸೇವೆ ನಡೆಯಲಿದೆ ಎಂದು ವಿವರಿಸಿದರು. ಬಳಿಕ ಡಾ. ಬಿ.ಎ.ಹಿರೇಮಠ ಅವರ ಜೀವನ ಚರಿತ್ರೆ ಕುರಿತು ರಸಲಿಂಗ ದರ್ಶಕ ಗ್ರಂಥ ಲೋಕಾರ್ಪಣೆಯಾಗಲಿದೆ. ಬಳಿಕ ಸಂಜೆ 6 ಗಂಟೆಗೆ ಧರ್ಮ ಸಭೆ ನಡೆಯಲಿದೆ ಎಂದು ತಿಳಿಸಿದರು.
ಇಂದಿನ ಈ ಪತ್ರಿಕಾಗೋಷ್ಠಿಯಲ್ಲಿ ಆಯ್.ಜಿ. ಹಿರೇಮಠ, ಹಾಲಪ್ಪ ನಾಯಕ, ಲಗಮಣ್ಣಾ ಚೌಗಲಾ, ಬಸವರಾಜ ಸುಣಗಾರ, ಶಿವಣ್ಣ ಕಮತೆ, ರಾಮಾ ಜುಂಟ, ಬಾಳಪ್ಪ ಚೌಗಲಾ, ಬಿ.ಬಿ.ಪಾಟೀಲ್, ಬಿ.ಎಸ್.ಪಾಟೀಲ, ರವಿ ಹಿರೇಮಠ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.