ಪತ್ರಕರ್ತರ ಬಳಗದಿಂದ ಮುಜಾವರರಿಗೆ ಸನ್ಮಾನ


ಲೋಕದರ್ಶನ ವರದಿ

ಮುದ್ದೇಬಿಹಾಳ 01:  ಇಲ್ಲಿನ ಲೋಕೋಪಯೋಗಿ, ಒಳನಾಡು, ಬಂದರು ಮತ್ತು ಜಲ ಸಾರಿಗೆ ಇಲಾಖೆ ಅಧೀನದಲ್ಲಿರುವ ಪ್ರವಾಸಿ ಮಂದಿರದ ಕಿಚನ್ ವಿಭಾಗದಲ್ಲಿ 30 ವರ್ಷಗಳ ಕಾಲ ಹೆಡ್ ಕುಕ್ ಆಗಿ ಉತ್ತಮ ಸೇವೆ ಸಲ್ಲಿಸಿ ದಿ.31ರಂದು ಸೇವಾ ನಿವೃತ್ತಿ ಹೊಂದಿದ ಮೈಬುಬಸಾಬ ಅಲ್ಲಾಭಕ್ಷ ಮುಜಾವರ (ಖಾಜಿ) ಇವರನ್ನು ಇಲ್ಲಿನ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಶಾಲು ಹೊದೆಸಿ, ಫಲಪುಷ್ಪ ನೀಡಿ ಸನ್ಮಾನಿಸಲಾಯಿತು.

ಸನ್ಮಾನ ಸ್ವೀಕರಿಸಿ ಭಾವುಕರಾಗಿಯೇ ಮಾತನಾಡಿದ ಖಾಜಿ ಅವರು 30 ವರ್ಷದ ತನ್ನ ಸಾರ್ವಜನಿಕ ಸೇವೆಯಲ್ಲಿ ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ ಕಟ್ಟೆಚ್ಚರ ವಹಿಸಿ ಬಂದವರಿಗೆಲ್ಲ ಶುಚಿ, ರುಚಿಯಾದ ಅಡುಗೆ ಮಾಡಿ ಬಡಿಸಿದ ಸಂತೃಪ್ತಿ ಇದೆ. ನನ್ನ ಕೈ ಅಡುಗೆ ಉಂಡಿರುವ ಸಚಿವರು, ಶಾಸಕರು, ಹಿರಿಯ ಅಧಿಕಾರಿಗಳು, ಗಣ್ಯರು ಮೆಚ್ಚುಗೆ ಸೂಚಿಸಿದ್ದೇ ನನಗೆ ಸಿಗುವ ಪ್ರಶಸ್ತಿ ಇದ್ದಂತೆ. ನನ್ನ ಸೇವೆ ಉತ್ತಮವಾಗಿ ನಿರ್ವಹಿಸುವುದಕ್ಕೆ ಸಹಕಾರ ನೀಡಿದ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ನಾನು ಸದಾ ಋಣಿಯಾಗಿದ್ದೇನೆ ಎಂದರು.

ಐಬಿಯ ನಿವೃತ್ತ ಮೇಟಿ ತಿಮ್ಮಣ್ಣ ನಾಯಕಮಕ್ಕಳ, ನಿವೃತ್ತ ಮೇಲ್ವಿಚಾರಕ ಕೆ.ಎ.ಹಿರೇಮಠ, ಪಿಡಬ್ಲೂಡಿ ಸಿಬ್ಬಂದಿ ಜಿ.ಎಸ್.ಕಂಠಿ, ಶೆಟ್ಟೆಪ್ಪ ಚಲವಾದಿ,  ವಿಷ್ಣು ಉಪನಾಳ, ಎಸ್.ಬಿ.ಪ್ಯಾಟಿ, ಎಚ್.ಜೆ.ಕೆಸಾಪುರ, ಪತ್ರಕರ್ತರಾದ ನಿಂಗಪ್ಪ ನಾವಿ, ಅಜೀಜ್ ಬಳಬಟ್ಟಿ, ಪ್ರಕಾಶ ಬೆಣ್ಣೂರ, ಅಮೀನಸಾ ಮುಲ್ಲಾ, ಸಿದ್ದು ಚಲವಾದಿ, ಗುರುನಾಥ ಕತ್ತಿ, ಲಾಡ್ಲೇಮಶ್ಯಾಕ ನದಾಫ, ಚೇತನ್ ಕೆಂಧೂಳಿ, ಸಾಗರ ಉಕ್ಕಲಿ, ಪರಶುರಾಮ ಕೊಣ್ಣೂರ, ಶಿವಕುಮಾರ ಶಾರದಳ್ಳಿ, ಬಂದೇನವಾಜ್ ಕುಮಸಿ, ಮಹೆಬೂಬ ಹಳ್ಳೂರ, ಕಾಶಿನಾಥ ಬಿರಾದಾರ ಸೇರಿದಂತೆ ವಿಜಯಪುರ, ಬಸವನ ಬಾಗೇವಾಡಿ, ಹೂವಿನ ಹಿಪ್ಪರಗಿ, ಮುದ್ದೇಬಿಹಾಳ, ನಾಲತವಾಡ ಭಾಗದ ಪತ್ರಕರ್ತರು ಉಪಸ್ಥಿತರಿದ್ದರು.