‘ಜನತಾ ಬಜಾರ್’ಗೆ ಮುಹೂರ್ತ

ಬೆಂಗಳೂರು, ಫೆ 08, ಎಂವಿ ಸಿನಿ ಕ್ರಿಯೇಷನ್ಸ್  ಸಂಸ್ಥೆ ನಿರ್ಮಿಸುತ್ತಿರುವ ‘ಜನತಾ ಬಜಾರ್’ ಇತ್ತೀಚೆಗೆ ಮುಹೂರ್ತ ಆಚರಿಸಿಕೊಂಡಿದೆ. ನೂತನ ಚಿತ್ರಕ್ಕೆ ಕೆ ಎಂ ಮುರಳಿ ಬಂಡವಾಳ ಹೂಡಿದ್ದು, ಪ್ರದೀಪ್ ಆರ್ ಜೆ ಕಥೆ ಹಾಗೂ ನಿರ್ದೇಶನದ ಜವಾಬ್ದಾರಿ ವಹಿಸಿಕೊಂಡಿದ್ದಾರೆ   ಕಿರಣ ಅಣ್ಣಿಗೇರಿ ಸಂಭಾಷಣೆ, ರಾಜೇಶ್ ಗೌಡ ಛಾಯಾಗ್ರಹಣವಿದ್ದು, ವೈಭವ್ ಸಂಗೀತ ಸಂಯೋಜಿಸಿದ್ದಾರೆ   ಸುಪ್ರೀತಾ ಸಂತೋಷ್, ಅಂಜನ್ ಕುಮಾರ್, ಶಿವರಾಜ್‍ ಸಾಹಿತ್ಯವಿದೆ   

ಚಿತ್ರದ ಸಾರಾಂಶ:-  ತಾಯಿಯೊಬ್ಬಳಿಗೆ ಸದ್ಗುಣಿಗಳಾದ ಇಬ್ಬರು ಗಂಡುಮಕ್ಕಳಿದ್ದು,  ಎಲ್ಲರಿಗೂ ನೆರವು ನೀಡುತ್ತ, ಊರಿನಲ್ಲಿ ಒಳ್ಳೆಯ ಹೆಸರು ಗಳಿಸಿರುತ್ತಾರೆ   ಹೀಗಿರುವಾಗ ಅನಿರೀಕ್ಷಿತ ಘಟನೆಯೊಂದು ಅವರ ಜೀವನದಲ್ಲಿ ಸಂಕಷ್ಟಕ್ಕೆ ಕಾರಣವಾಗುತ್ತದೆ   ಅದರಿಂದ ಅವರು ಹೇಗೆ ಪಾರಾಗುತ್ತಾರೆ ಎಂಬುದು ಚಿತ್ರದ ತಿರುಳು ಎಂದು ನಿರ್ಮಾಪಕರು ತಿಳಿಸಿದ್ದಾರೆ ತಾರಾಗಣದಲ್ಲಿ ರಾಹುಲ್ ಅರ್ಜುನ್(ಹೊಸ ಪರಿಚಯ), ಕುಮಾರ್, ಅದಿತಿ, ಅಶ್ವಿತ, ಸಹ ಕಲಾವಿದರುಗಳಾಗಿ, ವಿನಯ್, ರಘು, ಪ್ರಜ್ವಲ್, ಕಿರಣ್, ಪವನ್ ಮೊದಲಾದವರಿದ್ದಾರೆ.