ಸಪ್ತ ಬಾಲಿವುಡ್ ಚಿತ್ರದ ಚಿತ್ರೀಕರಣಕ್ಕೆ ಮುಹೂರ್ತ ಡಾ.ಶಿವಕುಮಾರ ಶ್ರೀಗಳು ಚಾಲನೆ
ಸಪ್ತ ಬಾಲಿವುಡ್ ಚಿತ್ರದ ಚಿತ್ರೀಕರಣಕ್ಕೆ ಮುಹೂರ್ತ ಡಾ.ಶಿವಕುಮಾರ ಶ್ರೀಗಳು ಚಾಲನೆMuhurta Dr. Shivakumara Shriels to shoot Saptha Bollywood
Lokadrshan Daily
1/8/25, 12:59 AM ಪ್ರಕಟಿಸಲಾಗಿದೆ
ಹುನಗುಂದ: ತಾಲೂಕಿನ ಸಮೀಪದ ಸುಕ್ಷೇತ್ರ ಸಿದ್ದನಕೊಳ್ಳದಲ್ಲಿ ಸಪ್ತ ಬಾಲಿವುಡ್ ಚಲನಚಿತ್ರದ ಚಿತ್ರೀಕರಣದ ಮುಹೂರ್ತ ಅದ್ಧೂರಿಯಾಗಿ ನೇರವೇರಿತು.
ತಾಲೂಕಿನ ಸಿದ್ದನಕೊಳ್ಳದ ಧರ್ಮಾಧಿಕಾರಿ ಡಾ.ಶಿವಕುಮಾರ ಶ್ರೀ ಸಪ್ತ ಬಾಲಿವುಡ್ ಚಲನಚಿತ್ರದ ಚಿತ್ರೀಕರಣದ ಮುಹೂರ್ತ ಹಾಗೂ ಕ್ಯಾಮರಾಗೆ ಚಾಲನೇ ನೀಡಿದರು.
ನಂತರ ಡಾ.ಶಿವಕುಮಾರ ಶ್ರೀ ಮಾತನಾಡಿ, ಸಪ್ತ ಚಲನಚಿತ್ರವೂ ಸಮಾಜದ ನೈಜ ಸ್ಥಿತಿಯನ್ನು ಆಧರಿಸಿಕೊಂಡ ಥ್ರೀಲರ್ ಚಲನಚಿತ್ರವಾಗಿದೆ. ಚಲನಚಿತ್ರದಲ್ಲಿ ಏಳು ಜನ ನಾಯಕ,ನಾಯಕಿಯಯರು ಪಾತ್ರವನ್ನು ನಿರ್ವಹಿಸಲಿದ್ದಾರೆ. ವಿಶೇಷವಾಗಿ ಚಲನಚಿತ್ರವೂ ಉತ್ತರ ಕರ್ನಾಟಕ ಪವಿತ್ರ ಧಾರ್ಮಿಕ ಕೇಂದ್ರ ಸಿದ್ದನಕೊಳ್ಳ, ಐತಿಹಾಸಿಕ ಪ್ರವಾಸಿ ಕೇಂದ್ರ ಐಹೊಳೆ ಸೇರಿದಂತೆ ಸುತ್ತಮುತ್ತಲಿನ ಪ್ರಮುಖ ಸ್ಥಳಗಳಲ್ಲಿ ಹಾಗೂ ಮುಂಬೈ, ಉತ್ತರ ಪ್ರದೇಶದ ಮಥುರಾ, ಕಾಶಿ, ಬನಾರಸನಲ್ಲಿ ಚಿತ್ರದ ಚಿತ್ರೀಕರಣ ನಡೆಯಲಿದೆ ಮತ್ತು ಕರ್ನಾಟಕದಿಂದ ಸೂಳೇಭಾವಿ ಗ್ರಾಮದ ಯುವನಟ ಪ್ರವೀಣ ಪತ್ರಿಯವರು ಚಲನಚಿತ್ರದಲ್ಲಿ ಪಾತ್ರ ನಿರ್ವಹಿಸಲಿದ್ದಾರೆ ಎಂದರು.
ಚಲನಚಿತ್ರ ಮೂಹೂರ್ತ ಸಮಾರಂಭದಲ್ಲಿ ಸಪ್ತ ಚಲನಚಿತ್ರದ ಬಾಲಿವುಡ್ ನಿರ್ದೇಶಕ ಮನೀಶ್ ತಿವಾರಿ, ಟಿಬೆಟಿಯನ ಧರ್ಮ ಗುರುಗಳಾದ ಓಜರ್, ಗುರುದತ್ ಮುಸರಿ, ಯುವನಾಯಕ ನಟ ಪ್ರವೀಣ ಪತ್ರಿ, ನಟಿಯರಾದ ಅನನ್ಯ, ತೇಜ್, ಯುವ ಮುಖಂಡರಾದ ನಬಿ ನದಾಫ, ಸಂಗಮೇಶ ಉದ್ದಾರ, ವಿರೇಶ ಲಿಂಗಸೂರು, ಸಿದ್ದು ಅಲ್ಲಿಬಾವಿ ಸೇರಿದಂತೆ ಇನ್ನಿತರರು ಇದ್ದರು.