ಮಹಾಲಿಂಗಪುರ 14: ಕ್ಷೇತ್ರಶಿಕ್ಷಣಾಧಿಕಾರಿ ಎಸ್.ಎಂ.ಮುಲ್ಲಾ ಅವರ ವಿನೂತನ ಯೋಜನೆಗಳಿಂದ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಮುಧೋಳ ತಾಲೂಕು ದೊಡ್ಡ ಕ್ರಾಂತಿಯನ್ನೇ ಮಾಡಿದ್ದು ಕಳೆದ ವರ್ಷ ಸರ್ಕಾರಿ ಶಾಲೆಯ ಅಂಕಿತಾ ರಾಜ್ಯಕ್ಕೆ ನಂ.ಒನ್ ಸ್ಥಾನ ಗಳಿಸಿರುವುದು ತಾಲೂಕಿನ ಪ್ರತಿ ವಿದ್ಯಾರ್ಥಿಗೆ ದೊಡ್ಡ ಬಲ ತಂದಿದೆ ಎಂದು ಪತ್ರಕರ್ತ ನಾರನಗೌಡ ಉತ್ತಂಗಿ ಹೇಳಿದರು.
ಸ್ಥಳೀಯ ಸರ್ಕಾರಿ ಪ್ರೌಢ ಶಾಲೆಯ 10ನೇ ತರಗಲಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಮತ್ತು ಸ್ನೇಹ ಸಮ್ಮೇಳನದಲ್ಲಿ ಉಪನ್ಯಾಸ ನೀಡಿ ಮಾತನಾಡಿದ ಅವರು, ಸರ್ಕಾರಿ ಶಾಲೆಗಳು ಧರ್ಮಸ್ಥಳಗಳಿದ್ದಂತೆ, ಅಲ್ಲಿನ ಶಿಕ್ಷಕರು ಕಾಮಧೇನು, ಕಲ್ಪವೃಕ್ಷವಿದ್ದಂತೆ. ಆತ್ಮ ವಿಶ್ವಾಸದಿಂದ ಪರೀಕ್ಷೆ ಎದುರಿಸಿ, ಫಲಿತಾಂಶದಿಂದ ಹೆತ್ತವರು, ಸಮಾಜ, ಶಾಲೆಯ ಋಣ ತೀರಿಸಿ ಎಂದರು.
ಶಿಕ್ಷಕಿ ಪದ್ಮಜಾ ಕಾನ್ವೇಕರ್ ಮಾತನಾಡಿ, ಹಗಲುಗನಸುಗಳಲ್ಲಿ ಕಳೆದು ಹೋಗಬೇಡಿ, ತಪಸ್ಸಿನಂತೆ ವಿದ್ಯಾಭ್ಯಾಸ ಮಾಡಿ ಸಾಧಿಸಿ ಎಂದರು.
ವಿದ್ಯಾರ್ಥಿಗಳಾದ ಸಾಕ್ಷಿ ಗೆದ್ದಪ್ಪನವರ, ಶಿವಲೀಲಾ ರಾವಳ, ಆದಿತ್ಯಾ ಭೋಸಲೆ, ಕೌಶಲ್ಯ ಮಮದಾಪುರ, ಆಸಿಯಾ ಐನಾಪುರ, ರಾಜಮಾಬಿ ಬುಡ್ಡೆಬಾಯಿ ಅನಿಸಿಕೆ ಹಂಚಿಕೊಂಡರು. ಕಳೆದ ಸಾಲಿನ ಎಸ್‌ಎಸ್‌ಎಲ್‌ಸಿ ಸಾಧಕರಾದ ಮಹಾಲಿಂಗ ಕಿಡದಾಳ, ಪ್ರೀತಿ ಮೇಟಿ, ಹನಮಂತ ದಂಡಿನ ಮತ್ತು ವಿವಿಧ ಚಟುವಟಿಕೆಗಳಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಪ್ರಶಸ್ತಿ, ನಗದು ವಿತರಿಸಲಾಯಿತು.
ಶಿವಲೀಲಾ ರಾವಳ ಮತ್ತು ಆದಿತ್ಯ ಭೋಸಲೆಗೆ ಆದರ್ಶ ವಿದ್ಯಾರ್ಥಿ ಪ್ರಶಸ್ತಿ ನೀಡಲಾಯಿತು.
ಎಸ್‌ಡಿಎಂಸಿ ಅಧ್ಯಕ್ಷ ಸಂಜಯ ರಾಠೋಡ ಉದ್ಘಾಟಿಸಿದರು. ಶಿಕ್ಷಕರಾದ ನೀಲಮ್ಮ ಬೆಟಗೇರಿ, ರಾಜೇಶ್ವರಿ ಬೀಳಗಿ, ರಾಜೇಶ್ವರಿ ಜಾಲಿಗಿಡದ, ಎಸ್.ಎಲ್.ಕಂಬಾರ, ಪಿ.ಸಿ.ಪಕ್ಕೀರನ್ನವರ, ಎಂ.ಎಸ್.ಮಲಾಬದಿ, ಜಿ.ಎಂ.ಅಂಗಡಿ, ರೇಣುಕಾ ಕರಿಗಾರ, ಶಾಂಭವಿ ಬಡಿಗೇರ, ಜ್ಯೋತಿ ಕಾಪಸೆ, ವಿದ್ಯಾಧರ ಗುಡ್ಲಮನಿ, ರಮೇಶ ಕಂಬಾರ ಇತರರಿದ್ದರು.
ಶಿಕ್ಷಕ ಗುರು ಅಂಗಡಿ ಸ್ವಾಗತಿಸಿ, ಶಿಕ್ಷಕಿ ಎಂ.ಜಿ.ಅಲ್ಲಾಖಾನ್ ನಿರೂಪಿಸಿದರು.