ಮುಧೋಳ: ಮತದಾನ ಜಾಗೃತಿ: ಅಧಿಕಾರಿಗಳಿಂದ ಬೈಕ್ ರ್ಯಾಲಿ

ಲೋಕದರ್ಶನ ವರದಿ

ಮುಧೋಳ 05: ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ್ ಬಾಗಲಕೋಟ, ತಾಲೂಕ ಆಡಳಿತ, ತಾಲೂಕ ಪಂಚಾಯತ್, ನಗರಸಭೆ ಮುಧೋಳ ಹಾಗೂ ಕನರ್ಾಟಕ ರಾಜ್ಯ ಸರ್ಕಾರಿ  ನೌಕರರ ಸಂಘ ಬೆಂಗಳೂರ ಮುಧೋಳ ಘಟಕ ಇವರ ಸಹಯೋಗದಲ್ಲಿ ಮತದಾನ ಜಾಗೃತಿ ಕಾರ್ಯಕ್ರಮದಡಿಯಲ್ಲಿ ಬೈಕ್ ರ್ಯಾಲಿ ನಡೆಸಲಾಯಿತು.

     ಈ ಮತದಾನ ಜಾಗೃತಿ ಅಭಿಯಾನ ಜಾಥಾ ಕಾರ್ಯಕ್ರಮಕ್ಕೆ ತಹಸೀಲ್ದಾರ ಡಿ.ಜಿ.ಮಹಾತ್ ಚಾಲನೆ ನೀಡಿ ಬಳಿಕ ಮಾತನಾಡಿ ಯಾವುದೇ ಕಾರಣಕ್ಕೂ ಯಾರು ಮತದಾನದಿಂದ ಹೊರಗುಳಿಯದಂತೆ ಕಡ್ಡಾಯವಾಗಿ ಮತ ಚಲಾಯಿಸಿ ಪ್ರಜಾಪ್ರಭುತ್ವ ಗಟ್ಟಿ ಗೊಳಿಸಲು ಕರೆ ನೀಡಿದರು.ತಾ.ಪಂ.ಸಹಾಯಕ ನಿದರ್ೇಶಕ ಬಿ.ಡಿ.ತಳವಾರ ಮಾತನಾಡಿ, ಬೈಕ್ ರ್ಯಾಲಿ ಸಮಯದಲ್ಲಿ ಸುರಕ್ಷತೆ ದೃಷ್ಠಿಯಿಂದ ಕಡ್ಡಾಯವಾಗಿ ಹೆಲ್ಮೆಟ್ ಧರಿಸುವಂತೆ ಮತ್ತು ಪ್ರತಿಯೊಬ್ಬರು ಆಸೆ ಆಮೀಷಗಳಿಗೆ ಒಳಗಾಗದೇ ತಮ್ಮ ಮತವನ್ನು ಕಡ್ಡಾಯ ವಾಗಿ ಚಲಾವಣೆ ಮಾಡಲು ತಿಳಿಸಿದರು. 

ನಗರಸಭೆ ಪೌರಾ ಯುಕ್ತ ರಮೇಶ ಜಾಧವ ಮಾತನಾಡಿ, ನಾಗರಿಕರು ಗೂಗಲ್ ಪ್ಲೇ ಸ್ಟೋರ್ನಿಂದ ಸಿವಿಜಿಲ್ ಸಿಟಿಜನ್ ಆಪನ್ನು ತಮ್ಮ ಸ್ಮಾಟರ್್ಫೋನ್ನಲ್ಲಿ ಡೌನಲೋಡ್ ಮಾಡಿಕೊಂಡು ಚುನಾವಣಾ ನೀತಿ ಸಂಹಿತೆ ಮತ್ತು ವೆಚ್ಚದ ಉಲ್ಲಂಘನೆಗಳು ಕಂಡು ಬಂದಲ್ಲಿ ಫೋಟೋ ಅಥವಾ ಕಿರು ಚಿತ್ರ ಮಾಡಿ ಜಿಲ್ಲಾ ಸಂಪರ್ಕ ಕೇಂದ್ರಕ್ಕೆ ರವಾನೆ ಮಾಡ ಬಹುದು. ದೂರನ್ನು ಪರಿಶೀಲಿಸಿ 100 ನಿಮಿಷದೊಳಗಾಗಿ ಕ್ರಮ ವಹಿಸಿ ದೂರುದಾರರಿಗೆ ಮಾಹಿತಿ ನೀಡಲಾಗುವುದು.ದೂರುದಾರರ ವಿವ ರಗಳನ್ನು ಗೌಪ್ಯವಾಗಿಡಲಾಗುವುದು. ಸುಳ್ಳು ದೂರು ದಾಖಲಿಸಬಾರದು ಎಂದು ಮಾಹಿತಿ ನೀಡಿದರು. 

ಬೈಕ್ ರ್ಯಾಲಿ ಜಾಥಾ ಕಾರ್ಯಕ್ರಮ ದಲ್ಲಿ ತಾಪಂ ಕಾರ್ಯನಿವರ್ಾಹಕ ಅಧಿಕಾರಿ ಬಿ.ವ್ಹಿ.ಅಡವಿಮಠ, ತಾಲೂಕಾ ಕ್ಷೇತ್ರ ಶಿಕ್ಷಣಾಧಿಕಾರಿ ಇಲಾಖೆಯ ಸಿಆರ್ಪಿ ನರಸನಗೌಡರ, ತಾಲೂಕಾ ಕಸಾಪ ಅಧ್ಯಕ್ಷ ಸಂಗಮೇಶ ನೀಲಗುಂದ, ರಾಜ್ಯ ನೌಕರರ ಸಂಘದ ತಾಲೂಕಾ ಘಟಕದ ಅಧ್ಯಕ್ಷ ಎಸ್.ಆರ್.ನಿಡೋಣಿ, ತಾಲೂಕಾ ಕೃಷಿ ಇಲಾಖೆಯ ಸಹಾಯಕ ನಿದರ್ೇಶಕ ನಾಗಣ್ಣನವರ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಶಿಶು ಅಭಿವೃದ್ಧಿ ಇಲಾಖೆಯ ಅಧಿಕಾರಿ ಕೆ.ಜಿ.ಕೋರೆಗೋಳ, ಜಮಖಂಡಿ ತಾಲೂಕಾ ವ್ಯಾಪ್ತಿಯ ಗ್ರಾಪಂ ಅಭಿ ವೃದ್ಧಿ ಅಧಿಕಾರಿ ಮಂಜುನಾಥ ಬಡಿಗೇರ, ಡಿ.ಜಿ. ಕುಲಗೋಡ, ಮುಧೋಳ ತಾಲೂಕಾ ವ್ಯಾಪ್ತಿಯ ವಿವಿಧ ಗ್ರಾಪಂ ಅಭಿವೃದ್ಧಿ ಅಧಿಕಾರಿಗಳಾದ ರಾಜು ವಾರದ, ಅಶೋಕ ಜನಗೊಂಡ, ವಿವೇಕ ಬಿರಾದಾರ,ಶಿವಾನಂದ ನರಸನ್ನವರ, ಶ್ರೀನಿವಾಸ ಚಿಗರಡ್ಡಿ ಸೇರಿದಂತೆ ತಾಲೂಕಾ ವಿವಿಧ ಇಲಾಖೆ ಗಳ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರು ಭಾಗವಹಿಸಿದ್ದರು.

ನಗರದ ಸಂಗೋಳ್ಳಿ ರಾಯಣ್ಣನ ವೃತ್ತದಿಂದ ಆರಂಭಗೊಂಡ ಮತದಾನ ಜಾಗೃತಿ ಜಾಥಾ ಅಭಿಯಾನ ಬೈಕ್ ರ್ಯಾಲಿ ಪ್ರಮುಖ ಬೀದಿಗಳ ಮೂಲಕ ಸಂಚರಿಸಿ ರನ್ನ ಸರ್ಕಲ್ಗೆ ಬಂದು ಮುಕ್ತಾಯಗೊಂಡಿತು.