ಲೋಕದರ್ಶನ ವರದಿ
ಮುದ್ದೇಬಿಹಾಳ 11: ಎಳೆಯ ವಯಸ್ಸಿನಿಂದಲೆ ಮಕ್ಕಳಲ್ಲಿ ಸುಪ್ತವಾಗಿರುವ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸಬೇಕು, ಶಿಕ್ಷಣವು ಮಕ್ಕಳಿಗೆ ತಿವಿತವಾಗದೆ ಹಿತಕರವಾದ ಅನುಭವವೆನಿಸಬೇಕು ಎಂದು ಭಾರತೀಯ ಜನತಾ ಪಾರ್ಟಿ ವಿಜಯಪುರ ಜಿಲ್ಲಾಧ್ಯಕ್ಷ ಆರ್.ಎಸ್.ಪಾಟೀಲ(ಕುಚಬಾಳ) ಹೇಳಿದರು.
ತಾಲ್ಲೂಕಿನ ಹುಲ್ಲೂರ ಗ್ರಾಮದಲ್ಲಿ ಹಮ್ಮಿಕೊಳ್ಳಲಾಗಿದ್ದ ಶ್ರೀ ಅಭಿನವ ಕುಮಾರೇಶ್ವರ ವಿದ್ಯಾವರ್ಧಕ ಸಂಸ್ಥೆ(ರಿ), ಸಿ.ಬಿ.ಎಸ್. ಪ್ರಾಥಮಿಕ ಶಾಲೆಯ 8ನೇ ವಾಷರ್ಿಕೋತ್ಸವ ಹಾಗೂ ರಾಜ್ಯಮಟ್ಟದ ಚನ್ನಬಸವಶ್ರೀ ಪ್ರಶಸ್ತಿ ಪ್ರಧಾನ ಮಾಡಿ ಮಾತನಾಡಿದ ಅವರು ಪಾಲಕರು ತಮ್ಮ ಮಕ್ಕಳಿಗೆ ಅಂಕ ಗಳಿಕೆಗಿಂತ ಕೌಶಲ್ಯ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಬೇಕು, ಮಕ್ಕಳಲ್ಲಿ ಆಗಾದವಾದ ಶಕ್ತಿ ಅಡಗಿದ್ದು ಶಾಲಾ ವಾರ್ಷಿಕೋತ್ಸವ ಮಕ್ಕಳ ಪ್ರತಿಭೆ ಅನಾವರಣಕ್ಕೆ ಉತ್ತಮ ವೇದಿಕೆ, ಬಾಲ್ಯದಲ್ಲಿ ಮಕ್ಕಳ ಪ್ರತಿಭೆಗೆ ತಕ್ಕಂತೆ ಪ್ರೋತ್ಸಾಹ ನೀಡಿ ದೇಶದ ಉತ್ತಮ ಸಾಧಕರಾಗಿ ಬೆಳೆಯುವಂತೆ ಮಾಡಬೇಕು, ಇಂದಿನ ಮಕ್ಕಳಲ್ಲಿ ಭಾರತದ ಭವಿಷ್ಯ ಅಡಗಿದೆ ಎಂದು ಹೇಳಿದರು.
ಈ ಸಂಧರ್ಭದಲ್ಲಿ ಇಲಕಲ್ ಡಯಟ್ ಉಪನ್ಯಾಸಕ ಬೆಳಗಲ್ ಮಕ್ಕಳ ಕುರಿತು ಉಪನ್ಯಾಸ ನೀಡಿದರು, ಪ್ರಭಾರಿ ಕ್ಷೇತ್ರ ಶಿಕ್ಷಣಾಧಿಕಾರಿ ಕಲಬುರ್ಗಿ, ಸಂಸ್ಥೆಯ ಅಧ್ಯಕ್ಷ ಮಹಾದೇವ ಪವಾರ, ನಿವೃತ್ತ ಜಲಾಯನ ಅಧಿಕಾರಿ ಎಚ್ ಎಚ್ ಬೊಮ್ಮಣಗಿ, ಅಶೋಕ ಹಂಚಲಿ ಶಿಕ್ಷಣ ಪ್ರೇಮಿ, ದೈಹಿಕ ಶಿಕ್ಷಣಾಧಿಕಾರಿ ಕರಡ್ಡಿ ಬಿ.ಆರ್.ಸಿ ಎಸ್ಪಿರಾಠೋಡ, ಹುಲ್ಲೂರ ಪಿ.ಕೆ.ಪಿಎಸ್ ಬ್ಯಾಂಕಿನ ಅಧ್ಯಕ್ಷ ಮುತ್ತಣ್ಣ ಹುಗ್ಗಿ, ಸುರೇಶ ಹಳೇಮನಿ, ಶ್ರೀಶೈಲ ಕಡಿ, ಎಸ್ ಎಸ್ ಪಾಟೀಲ, ಹುಲ್ಲೂರ ಗ್ರಾ.ಪಂ ಸದಸ್ಯ ಸುಭಾಸ ಓಲೇಕಾರ ಗ್ರಾ.ಪಂ ಸದಸ್ಯ ತಾವರಪ್ಪ ಜಾಧವ, ಭೀಮನಗೌಢ ಸಂಕಪ್ಪನವರು, ಶಿವಕುಮಾರ ಅಂಗಡಿ, ಕೃಷ್ಣಾಜೀ ಬಂಡಿವಡ್ಡರ, ಬಾಬು ನಾಯ್ಕೋಡಿ, ಜಟ್ಟಗಿ ಮುಖ್ಯ ಗುರುಗಳಾದ ಯಲಗೂರೆಶ ಬಳಬಟ್ಟಿ. ಸೇರಿದಂತೆ ಮತ್ತಿತರು ಉಪಸ್ಥೀತರಿದ್ದರು ಅರವಿಂದ ಪಾಸೋಡಿ, ಭೀಮನಗೌಡ ಕೊಡಗಾನೂರ, ನಿರೂಪಿಸಿ ಬಿಎಚ್ ಬಳಬಟ್ಟಿ ವಂದಿಸಿದರು.