ಲೋಕದರ್ಶನ ಚರದಿ
ಮುದ್ದೇಬಿಹಾಳ 29: ತಾಲೂಕಿನ ಹಲವೆಡೆ ಸಾಮಾಜಿಕ ವಲಯ ಅರಣ್ಯ ಇಲಾಖೆ ಗಿಡಗಳನ್ನು ನೆಡುವ ಮೂಲಕ ಹಸಿರು ಪಸರಿಸುವ ಕೆಲಸ ಮಾಡುವಲ್ಲಿ ಸಾಕಷ್ಟು ಪ್ರಗತಿ ಸಾಧಿಸಿದೆ ಎಂದು ಸಾಮಾಜಿಕ ವಲಯ ಅರಣ್ಯಾಧಿಕಾರಿ (ಆರ್ಎಫ್ಓ) ಸಂತೋಷಕುಮಾರ ಅಜೂರ ತಿಳಿಸಿದ್ದಾರೆ.
ಹಿರೇಮುರಾಳ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನೆರಬೆಂಚಿ ಗ್ರಾಮದ ಬಳಿ ನಡೆದಿರುವ ನೆಡುತೋಪು ಕಾಮಗಾರಿ ಸ್ಥಳಕ್ಕೆ ಸುದ್ದಿಗಾರರ ಸಮೇತ ಭೇಟಿ ನೀಡಿದ್ದ ಅವರು, ಈಗಾಗಲೇ ಬಿದರಕುಂದಿ ಬಳಿ ಬೆಳೆಸಿರುವ ನೆಡುತೋಪು ನಿರಂತರ ಪೋಷಣೆಯಿಂದ ಸಾಕಷ್ಟು ಬೆಳವಣಿಗೆ ಹೊಂದುತ್ತಿದೆ. ಅದೇ ಮಾದರಿಲ್ಲಿ ನೆರಬೆಂಚಿ ಗ್ರಾಮದ ಬಳಿಯೂ ಅಂದಾಜು 20 ಎಕರೆ ಸಕರ್ಾರಿ ಜಮೀನಿನಲ್ಲಿ ಹಿರೇಮುರಾಳ ಗ್ರಾಪಂನ ಜಲಾಮೃತ ಯೋಜನೆ ಅಡಿ ಉದ್ಯೋಗ ಖಾತ್ರಿ ಕೂಲಿ ಕಾಮರ್ಿಕರನ್ನು ಬಳಸಿಕೊಂಡು 1800 ಗಿಡ ನೆಡಲು ಚಾಲನೆ ನೀಡಲಾಗಿದೆ. ಸಧ್ಯ 1200 ಗಿಡಗಳನ್ನು ನೆಡುವ ಕಾರ್ಯ ಪೂರ್ಣಗೊಂಡಿದ್ದು ಇನ್ನೊಂದು ವಾರದೊಳಗೆ ಉಳಿದ 600 ಗಿಡಗಳನ್ನೂ ನೆಡುವ ಮೂಲಕ ನೆರಬೆಂಚಿ ಬ್ಲಾಕ್ನಲ್ಲಿ ಹಸಿರಿನಿಂದ ಕಂಗೊಳಿಸುವ ನೆಡುತೋಪು ನಿಮರ್ಿಸುವ ಗುರಿ ಈಡೇರಿಸಲಾಗುತ್ತದೆ ಎಂದು ತಿಳಿಸಿದರು.
ಆಲೂರು ಗ್ರಾಮ ಪಂಚಾಯಿತಿ ಪಿಡಿಓ ಅಯ್ಯಪ್ಪ ಮಲಗಲದಿನ್ನಿ, ತಾಲೂಕು ದೈಹಿಕ ಶಿಕ್ಷಣಾಧಿಕಾರಿ ಎಚ್.ಎಲ್.ಕರಡ್ಡಿ, ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ನ ಮುದ್ದೇಬಿಹಾಳ ತಾಲೂಕು ಸ್ಥಳೀಯ ಸಂಸ್ಥೆ ಉಪಾಧ್ಯಕ್ಷ ಡಿ.ಬಿ.ವಡವಡಗಿ, ಸಮಾಜಸೇವಕ ಬಸವರಾಜ ನಂದಿಕೇಶ್ವರಮಠ, ಹಿರೇಮುರಾಳದ ಅಯ್ಯಪ್ಪ ತಂಗಡಗಿ ಮತ್ತಿತರರು ಈ ಸಂದರ್ಭ ಇದ್ದು ನೆಡುತೋಪು ಪರಿಶೀಲಿಸಿ ಅರಣ್ಯಾಧಿಕಾರಿ ಅಜೂರ ಅವರ ಪರಿಸರದ ಬಗೆಗಿನ ಕಾಳಜಿ, ಕಳಕಳಿಯನ್ನು ಶ್ಲಾಘಿಸಿದರು.