ಲೋಕದರ್ಶನ ವರದಿ
ಮುದ್ದೇಬಿಹಾಳ 25: ಆಲಮಟ್ಟಿ ಜಲಾಶಯದಿಂದ ಕೃಷ್ಣಾ ನದಿಗೆ ಹೆಚ್ಚಿನ ನೀರು ಬಿಟ್ಟಿದ್ದರಿಂದಾಗಿ ತಂಗಡಗಿಯಿಂದ ಕಮಲದಿನ್ನಿ, ಕುಂಚಗನೂರ, ಗಂಗೂರ ಸಂಪಕರ್ಿಸುವ ಸಂಪರ್ಕ ರಸ್ತೆಯಲ್ಲಿ ಪ್ರವಾಹದ ನೀರು ನಿಂತು ಎರಡು ದಿನಗಳ ಕಾಲ ಸಂಪರ್ಕ ಬಂದ್ ಆಗಿತ್ತು. ಇದೀಗ ನದಿಯಲ್ಲಿ ನೀರು ಇಳಿಮುಖವಾಗತೊಡಗಿದ್ದರಿಂದ ರಸ್ತೆ ಮೇಲೆ ಆವರಿಸಿರುವ ನೀರು ಸಹಿತ ನಿಧಾನಕ್ಕೆ ಕಡಿಮೆ ಆಗತೊಡಗಿದೆ.
ಸ್ಥಳಕ್ಕೆ ಪಿಡಬ್ಲೂಡಿ ಎಇಇ ಜಿ.ಎಸ್.ಪಾಟೀಲ ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಿದ್ದಾರೆ. ತಾಲೂಕಿನ ನಾಗರಹಾಳ ಗ್ರಾಮದಿಂದ ಅಯ್ಯನಗುಡಿವರೆಗಿನ ಅಂದಾಜು 10 ನದಿ ತೀರದ ಗ್ರಾಮಗಳಲ್ಲಿ ಮತ್ತೇ ಪ್ರವಾಹ ಪರಿಸ್ಥಿತಿಯ ಆತಂಕ ಎದುರಾಗಿತ್ತು. ಆದರೆ ಬಸವಸಾಗರದಿಂದ ಹೆಚ್ಚಿನ ಪ್ರಮಾಣದಲ್ಲಿ ನೀರು ಹೊರಗೆ ಹರಿಸಿದ್ದರಿಂದ ಆತಂಕ ನಿಧಾನವಾಗಿ ಕಡಿಮೆ ಆಯಿತು. ಈ ಮಧ್ಯೆ ಮತ್ತೇ ನದಿ ದಂಡೆಯ ಗ್ರಾಮಗಳ ರೈತರ ಜಮೀನಿನಲ್ಲಿ ಮಳೆಯ ನೀರಿನ ಜೊತೆಗೆ ಕೃಷ್ಣಾ ನದಿ ಪ್ರವಾಹದ ನೀರು ನುಗ್ಗಿ ಮೊದಲೇ ಬೆಳೆ ಹಾನಿಯಿಂದ ಕಂಗಾಲಾಗಿರುವ ಸಂತ್ರಸ್ತ ರೈತರು ಧೃತಿಗೆಡುವಂತೆ ಮಾಡಿದೆ. ನೋಡಲ್ ಅಧಿಕಾರಿಯೂ ಆಗಿರುವ ವಿಜಯಪುರ ಉಪ ವಿಭಾಗಾಧಿಕಾರಿ ಸೋಮಲಿಂಗ ಗೆಣ್ಣೂರ ಸ್ಥಳದಲ್ಲೇ ಬೀಡುಬಿಟ್ಟು ತಹಸೀಲ್ದಾರ್ ವಿನಯ್ಕುಮಾರ ಪಾಟೀಲ ಅವರೊಂದಿಗೆ ಚಚರ್ೆ ನಡೆಸಿ ಪರಿಸ್ಥಿತಿಯ ವರದಿಯನ್ನು ಜಿಲ್ಲಾಧಿಕಾರಿಗೆ ಸಲ್ಲಿಸಿದ್ದಾರೆ.