ಮುದ್ದೇಬಿಹಾಳ: ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಅಂಗನವಾಡಿ ನೌಕರರ ಪ್ರತಿಭಟನೆ

ಲೋಕದರ್ಶನ ವರದಿ

ಮುದ್ದೇಬಿಹಾಳ 05: ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿ ಕನರ್ಾಟಕ ರಾಜ್ಯ ಅಂಗನವಾಡಿ ಕಾರ್ಯಕತರ್ೆ ಹಾಗೂ ಸಹಾಯಕಿಯರ ಸೇವಾ ಸಂಘದ ನೇತೃತ್ವದಲ್ಲಿ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದ ಅಂಗನವಾಡಿ ನೌಕರರು ತಹಸೀಲ್ದಾರ್ ಹಾಗೂ ತಾಪಂ ಇಒಗೆ ಮನವಿ ಸಲ್ಲಿಸಿದರು. 

ಸಂಘಟನೆ ರಾಜ್ಯಾಧ್ಯಕ್ಷೆ ನೀಲಮ್ಮ ಬೋರಾವತ್ ಮಾತನಾಡಿ, ಅಂಗನವಾಡಿ ಬಾಡಿಗೆ ಕೊಟ್ಟಿರುವ ಬಾಡಿಗೆಯನ್ನು ಕಳೆದೆರಡು ವರ್ಷದಿಂದ ಪಾವತಿಸಿಲ್ಲ. ಕೆಲವು ಮೇಲ್ವಿಚಾರಕಿಯರು ಕಟ್ಟಿಗೆಯ ಹಣದಲ್ಲಿ ಸಹಾಯಕಿಯರಿಂದ 400-500 ರೂ. ವಸೂಲಿ ಮಾಡುತ್ತಿದ್ದು, ಇದನ್ನು ತಡೆಗಟ್ಟಲು ಇಲಾಖೆಯ ಅಧಿಕಾರಿಗಳು ವಿಫಲರಾಗಿದ್ದಾರೆ ಎಂದು ದೂರಿದರು. 

ಕೆಲ ಮೇಲ್ವಿಚಾರಕಿಯರು ಸಿಡಿಪಿಒ ಕಚೇರಿಯಲ್ಲಿ ಫೈಲು ಮಾಡುವುದಾಗಿ ಹೇಳಿ ಸಹಾಯಕಿಯರಿಂದ 1000 ರೂ. ಪಡೆದುಕೊಳ್ಳುತ್ತಿದ್ದಾರೆ. ಅಂತಹ ಮೇಲ್ವಿಚಾರಕಿಯರು ಯಾವ ಫೆಲ್ಗಾಗಿ ಹಣ ಪಡೆದಿದ್ದಾರೆ ಎಂಬುದನ್ನು ಸ್ಪಷ್ಟಪಡಿಸಬೇಕು ಸೇರಿ ಒಂಭತ್ತು ಬೇಡಿಕೆಗಳನ್ನು ಈಡೇರಿಸಬೇಕೆಂದು ಒತ್ತಾಯಿಸಿ ತಹಸೀಲ್ದಾರ್ ವಿನಯಕುಮಾರ ಪಾಟೀಲರಿಗೆ ಮನವಿ ಸಲ್ಲಿಸಿದರು. 

ಎಂ.ಬಿ. ಬಾಗಲಕೋಟ, ಎಸ್.ಎಸ್. ಕಾಖಂಡಕಿ, ಎಸ್.ಎಂ. ಅಂಗಡಗೇರಿ, ಅಯ್ಯಮ್ಮ ವಣಕಿಹಾಳ, ಹುಲಿಗಮ್ಮ ಕಂದಗಲ್ಲ,ನಾಗಮ್ಮ ನಾಟೀಕಾರ, ಚಂದ್ರಕಲಾ ಜೋಷಿ, ಸರೋಜಾ ನಾಯ್ಕೋಡಿ, ಗುರುಬಾಯಿ ಲಮಾಣಿ, ಯಮನಕ್ಕ ವಡ್ಡರ ಮತ್ತಿತರರಿದ್ದರು.