ಮುದ್ದೇಬಿಹಾಳ 20: ತಾಲೂಕಿನ ಸರೂರ, ಕವಡಿಮಟ್ಟಿ, ನೆರಬೆಂಚಿ ಗ್ರಾಮದ ಭಾಗದಲ್ಲಿ ಹಾಯ್ದು ಹೋಗಿರುವ ಕಾಲುವೆ ಕಾಮಗಾರಿ ಕಳಪೆಮಟ್ಟದಿಂದ ಕೂಡಿದ್ದು, ಕೂಡಲೇ ದುರಸ್ತಿಗೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕೆಂದು ಸರೂರ ಗ್ರಾಮಸ್ಥರು ಆಗ್ರಹಿಸಿದರು.
ತಾಲೂಕಿನ ಸರೂರ, ಕವಡಿಮಟ್ಟಿ ಹಾಗೂ ನೆರಬೆಂಚಿ ಗ್ರಾಮಗಳ ವ್ಯಾಪ್ತಿಯಲ್ಲಿ ನಿಮರ್ಿಸಿರುವ ಕಾಲುವೆ ಜಾಲಕ್ಕೆ ಇತ್ತೀಚೆಗೆ ಕೆಬಿಜೆಎನ್ಎಲ್ ಅಧಿಕಾರಿಗಳೊಂದಿಗೆ ಗ್ರಾಮಸ್ಥರು ಭೇಟಿ ನೀಡಿದ್ದ ವೇಳೆ ಕಾಲುವೆ ಸ್ಥಿತಿಗತಿ ಕುರಿತು ಪರಿಶೀಲಿಸಿದರು.
ಗ್ರಾಪಂ ಸದಸ್ಯ ಶ್ರೀಶೈಲ ಹೂಗಾರ ಅವರು ಕೆಬಿಜೆಎನ್ಎಲ್ ಅಧಿಕಾರಿ ದೊಡಮನಿ ಅವರನ್ನು ತೀವ್ರ ತರಾಟೆಗೆ ತೆಗೆದುಕೊಂಡರಲ್ಲದೆ, ರೈತರು ಅನುಭವಿಸುತ್ತಿರುವ ಕಷ್ಟ ಕಣ್ಣಾರೆ ಕಂಡು ರೈತರ ಹೊಲಗಳಲ್ಲಿ ಹಾದು ಹೋದ ದೊಡ್ಡ ಕಾಲುವೆ ಹಾಗೂ ಸಣ್ಣ ಕಾಲುವೆಗಳ ಕಾಮಗಾರಿ ಕಳಪೆಯಾಗಿ ನಿಮರ್ಿಸಿದ್ದರಿಂದ ಸಂಪರ್ಕ ಸೇತುವೆ ಕುಸಿದಿವೆ. ಇದರಿಂದ ರೈತರು ತಮ್ಮ ಹೊಲಗಳಿಗೆ ಹೋಗಲು ಸಾಧ್ಯವಾಗುತ್ತಿಲ್ಲ. ಎರಡ್ಮೂರು ವರ್ಷವಾದರೂ ನೀವು ಸ್ವಲ್ಪವೂ ತಿರುಗಿ ನೋಡುವುದಿಲ್ಲವೆಂದರೆ ಹೇಗೆ? ಎಂದು ಪ್ರಶ್ನಿಸಿದರು.
ಕಾಲುವೆ ಜಾಲದಲ್ಲಿ ಅಲ್ಲಲ್ಲಿ ಬಿರುಕು ಬಿದ್ದಿದ್ದು, ಜೋರಾಗಿ ನೀರು ಹರಿಸಿದರೆ ಕಾಲುವೆ ಒಡೆಯುವ ಭೀತಿ ಇದೆ. ಕಾಲುವೆಯ ಕೊನೆಯವರೆಗೂ ನೀರಿನ ಹರಿವು ಸಾಧ್ಯವಾಗುವುದೇ ಇಲ್ಲ. ರೈತರಿಗೆ ನೀರು ಹೇಗೆ ಸಿಗುತ್ತದೆ ಎಂದು ಪ್ರಶ್ನಿಸಿದರು. ಒಂದು ವೇಳೆ ಕೂಡಲೇ ದುರಸ್ತಿಗೆ ಕ್ರಮ ಜರುಗಿಸದಿದ್ದರೆ ಉಗ್ರ ಹೋರಾಟ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು.