ಮುದ್ದೇಬಿಹಾಳ: ಪತ್ರಿಕಾ ದಿನಾಚರಣೆ: ವಿದ್ಯಾರ್ಥಿಗಳಿಗೆ ಪತ್ರಿಕೋದ್ಯಮ ಅರಿವು ಕಾರ್ಯಕ್ರಮ

ಲೋಕದರ್ಶನ ವರದಿ

ಮುದ್ದೇಬಿಹಾಳ 02: ಇಂದಿನ ದಿನಗಳಲ್ಲಿ ಮಾಧ್ಯಮಗಳು ದಕ್ಷಿಣ ಕರ್ನಾಟಕ  ಕೇಂದ್ರೀಕೃತವಾಗಿದ್ದು ಉತ್ತರ ಕನರ್ಾಟಕ ಸಂಪೂರ್ಣ ಮರೆತಂತೆ ನಡೆದುಕೊಳ್ಳುತ್ತಿವೆ. ವೈಭವೀಕರಣ ಹೆಚ್ಚಾಗುತ್ತಿದೆ. ವರ್ತಮಾನ ಬರೆಯುವುದರ ಜೊತೆಗೆ ಭವಿಷ್ಯ ನಿಮರ್ಿಸೋ ಚಿಂತನೆ ಮಾಧ್ಯಮಗಳಿಗೆ ಇರಬೇಕು ಎಂದು ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ಹೇಳಿದ್ದಾರೆ.

ಮುದ್ದೇಬಿಹಾಳ ಪಟ್ಟಣದ ವಿವೇಕಾನಂದ ವಿದ್ಯಾಪ್ರಸಾರಕ ಸಮಿತಿಯ ಜ್ಞಾನಭಾರತಿ ವಿದ್ಯಾಮಂದಿರದಲ್ಲಿ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಆಶ್ರಯದಲ್ಲಿ ಸೋಮವಾರ ನಡೆದ ಪತ್ರಿಕಾ ದಿನಾಚರಣೆ, ಕಾಲೇಜು ವಿದ್ಯಾರ್ಥಿಗಳಿಗೆ ಪತ್ರಿಕೋದ್ಯಮ ಅರಿವು ಕಾರ್ಯಕ್ರಮವನ್ನು ಸಸಿಗೆ ನೀರೆರೆಯುವ ಮೂಲಕ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

ಭಾರತ ಬಿಟ್ರೆ ಬೇರೆ ದೇಶದಲ್ಲಿ ಪತ್ರಿಕಾ ಸ್ವಾತಂತ್ರ್ಯ ಇಲ್ಲ. ಇದು ನಮ್ಮ ದೇಶದ ಪ್ರಜಾತಂತ್ರ ವ್ಯವಸ್ಥೆಯ ಶಕ್ತಿಯಾಗಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಮಾಧ್ಯಮ ದಾರಿ ತಪ್ಪುತ್ತಿದೆ. ಜನರು ಟೀವಿಯಲ್ಲಿನ ನ್ಯೂಜ್ ನೋಡೋದನ್ನ ಕಡಿಮೆ ಮಾಡುತ್ತಿದ್ದಾರೆ. ಟಿವಿಯಲ್ಲಿ, ಪತ್ರಿಕೆಗಳಲ್ಲಿ ಬರುವುದನ್ನು ಜನ ನಂಬದೆ ಇರೋ ಸ್ಥಿತಿ ನಿರ್ಮಾಣಗೊಳ್ಳತೊಡಗಿದೆ . ಮಾಧ್ಯಮಗಳಿಗೆ ನೈತಿಕ ಶಕ್ತಿ ಕಡಿಮೆ ಆಗತೊಡಗಿರುವುದು ವಿಷಾಧ ಪಡುವಂಥದ್ದು ಎಂದರು.

ಉಪನ್ಯಾಸ ನೀಡಿದ ವಿಜಯಪುರ ಆಕಾಶವಾಣಿ ವರದಿಗಾರ ನೇತಾಜಿಗಾಂಧಿ ಟ್ಯಾಗೋರ (ನೀಲೇಶ  ಬೇನಾಳ) ಮಾತನಾಡಿ ಪತ್ರಿಕೋದ್ಯಮ ನಡೆದು ಬಂದ ದಾರಿ, ಮೊದಲ ಕನ್ನಡ ಪತ್ರಿಕೆ ಮಂಗಳೂರು ಸಮಾಚಾರ, ಸ್ವಾತಂತ್ರ್ಯಹೋರಾಟದಲ್ಲಿ ಪತ್ರಿಕೆಗಳು, ಪತ್ರಕರ್ತರ ಪಾತ್ರ, ಆಧುನಿಕ ಪತ್ರಕರ್ತರ ಸ್ಥಿತಿ ಹೇಗಿದೆ, ಪತ್ರಿಕೋದ್ಯಮ ಇಂದು ಏಕೆ ಹೆಸರು ಕೆಡಿಸಿಕೊಳ್ಳುತ್ತಿದೆ ಎನ್ನುವ ಅಂಶಗಳ ಕುರಿತು ಮಾತನಾಡಿದರು.

ಮುಖ್ಯ ಅತಿಥಿಯಾಗಿದ್ದ ವಿಜಯಪುರ ಉಪ ವಿಭಾಗಾಧಿಕಾರಿ ಸೋಮಲಿಂಗ ಗೆಣ್ಣೂರ ಮಾತನಾಡಿ ವಿದ್ಯಾರ್ಥಿಗಳು  ಯಾರ್ಯಾರನ್ನೋ ಆದರ್ಶವಾಗಿಟ್ಟುಕೊಳ್ಳುವುದರ ಬದಲು ನಿಮ್ಮ ತಂದೆ, ತಾಯಿ, ನೀವು ಎದುರಿನಿಂದ ನೋಡುವವರನ್ನು ಆದರ್ಶವಾಗಿಟ್ಟುಕೊಳ್ಳಬೇಕು ಎಂದರು.

ಅತಿಥಿಯಾಗಿದ್ದ ತಹಸೀಲ್ದಾರ್ ವಿನಯ್ಕುಮಾರ ಪಾಟೀಲ ಮಾತನಾಡಿ ಪತ್ರಿಕೋದ್ಯಮ ಜವಾಬ್ಧಾರಿಯುತ ವೃತ್ತಿ. ಯಾರೋ ಒಬ್ಬರು ಮಾಡುವ ತಪ್ಪು ಇಡೀ ಪತ್ರಕರ್ತರಿಗೆ ಅಂಟುತ್ತೆ ಎಂದರು.

ದೈಹಿಕ ಶಿಕ್ಷಣಾಧಿಕಾರಿ ಎಚ್.ಎಲ್.ಕರಡ್ಡಿ, ವಿವೇಕಾನಂದ ವಿದ್ಯಾಪ್ರಸಾರಕ ಸಮಿತಿ ಕಾರ್ಯದಶರ್ಿ ಪ್ರಭು ಕಡಿ, ಡಿಸಿಸಿ ಬ್ಯಾಂಕ್ ನಿರ್ದೇಶಕ ಸೋಮನಗೌಡ ಬಿರಾದಾರ ಕವಡಿಮಟ್ಟಿ, ಸಂಜೀವಕುಮಾರ ಓಸ್ವಾಲ್, ಪ್ರಭಾರ ಪ್ರಾಂಶುಪಾಲ ವಿ.ಬಿ.ಪಾಟೀಲ, ಸಂಘದ ತಾಲೂಕು ಅಧ್ಯಕ್ಷ ಎ.ಎಲ್.ಮುಲ್ಲಾ ವೇದಿಕೆಯಲ್ಲಿದ್ದರು. 

ವಿಜಯಪುರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಉಪಾಧ್ಯಕ್ಷ ಡಿ.ಬಿ.ವಡವಡಗಿ ಅಧ್ಯಕ್ಷತೆ ವಹಿಸಿದ್ದರು. ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಬಸವರಾಜ ನಾಲತವಾಡ, ನಿವೃತ್ತ ಪ್ರಾಂಶುಪಾಲ ಬಾಪುಗೌಡ ಪಾಟೀಲ, ನಿವೃತ್ತ ಮುಖ್ಯಾಧ್ಯಾಪಕ ಅಶೋಕ ಮಣಿ, ನಗರಾಭಿವೃದ್ಧಿ ಯುವ ಹೋರಾಟ ವೇದಿಕೆ ಸಂಚಾಲಕ ಬಸವರಾಜ ನಂದಿಕೇಶ್ವರಮಠ, ಪುರಸಭೆ ಮಾಜಿ ಸದಸ್ಯರಾದ ಮನೋಹರ ತುಪ್ಪದ, ಶರಣು ಬೂದಿಹಾಳಮಠ, ಶಿವು ಕನ್ನೊಳ್ಳಿ, ಕಾರ್ಗಿಲ್ಲ ಹುತಾತ್ಮ ಯೋಧರ ಸ್ಮಾರಕ ನಿರ್ಮಾಣ  ಸಮಿತಿ ಅಧ್ಯಕ್ಷ ಕಿರಣಗೌಡ ಪಾಟೀಲ, ಮಾಜಿ ಸೈನಿಕ ಎಸ್.ಕೆ.ಕತ್ತಿ, ಕಾಲೇಜಿನ ಉಪನ್ಯಾಸಕರು, ಜ್ಞಾನಭಾರತಿ ಕಾಲೇಜು ಮತ್ತು ಎಸ್ಎಸ್ ಶಿವಾಚಾರ್ಯ ಕಾಲೇಜು ವಿದ್ಯಾರ್ಥಿಗಳು  ಸಂಘದ ಸರ್ವ ಸದಸ್ಯರು ಉಪಸ್ಥಿತರಿದ್ದರು.

ವಿದ್ಯಾಭಾರತಿ ಶಾಲೆಗಳ ವಿಜಯಪುರ ಜಿಲ್ಲಾ ಅಧ್ಯಕ್ಷರಾಗಿ ನೇಮಕಗೊಂಡ ಪ್ರಭು ಕಡಿ, ಸರ್ವಶ್ರೇಷ್ಠ ಭಾರತೀಯ ಗ್ರಂಥಕತರ್ೃವೂ ಆದ ಉಪ ವಿಭಾಗಾಧಿಕಾರಿ ಸೋಮಲಿಂಗ ಗೆಣ್ಣೂರ, ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ಸೇರಿದಂತೆ ವೇದಿಕೆಯಲ್ಲಿದ್ದ ಗಣ್ಯರನ್ನು ಸಂಘದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ಸರ್ವಶ್ರೇಷ್ಠ ಭಾರತೀಯ ಪುಸ್ತಕಗಳನ್ನು ಆಯಾ ಕಾಲೇಜುಗಳ ಗ್ರಂಥಾಲಯಕ್ಕೆ ಉಚಿತವಾಗಿ ವಿತರಿಸಲಾಯಿತು. ಎಸ್ಎಸ್ ಶಿವಾಚಾರ್ಯ ಕಾಲೇಜು ವತಿಯಿಂದ ಕಾರ್ಯದರ್ಶಿ  ರವಿ ನಾಯಕ ಮತ್ತು ಪ್ರಾಂಶುಪಾಲ ಬಿ.ಬಿ.ಬಿರಾದಾರ ಅವರು ಎಸಿ ಸೋಮಲಿಂಗ ಗೆಣ್ಣೂರ ಅವರನ್ನು ಸನ್ಮಾನಿಸಿದರು.

ಜ್ಞಾನಭಾರತಿ ವಿದ್ಯಾರ್ಥಿನಿಯರು ಪ್ರಾಥರ್ಿಸಿದರು. ಎ.ಎಲ್.ಮುಲ್ಲಾ ಸ್ವಾಗತಿಸಿದರು. ಡಿ.ಬಿ.ವಡವಡಗಿ ಪ್ರಾಸ್ತಾವಿಕವಾಗಿ ಮಾತನಾಡಿದರು. ರವೀಂದ್ರ ನಂದೆಪ್ಪನವರ್ ನಿರೂಪಿಸಿದರು. ಪರಶುರಾಮ ಕೊಣ್ಣೂರ ವಂದಿಸಿದರು.