ಮುದ್ದೇಬಿಹಾಳ: ಆರ್ ಎಮ್ ಎಸ್ಎ ವಿದ್ಯಾಲಯ ಕಟ್ಟಡ ಕಾಮಗಾರಿ ಪರಿಶೀಲಿಸಿದ ನಡಹಳ್ಳಿ

ಲೋಕದರ್ಶನ ವರದಿ

ಮುದ್ದೇಬಿಹಾಳ 28: ಬಿದರಕುಂದಿ ಗ್ರಾಮದ ಹತ್ತಿರ ನಿರ್ಮಾಣಗೊಳ್ಳುತ್ತಿರುವ ಆರ್ಎಂಎಸ್ಎ ವಿದ್ಯಾಲಯ ಕಟ್ಟಡ ಕಾಮಗಾರಿ ಶೀಘ್ರ ಪೂರ್ಣಗೊಳಿಸಲು ಮತ್ತು ಆ ಶಾಲೆಗೆ ಸೂಕ್ತ ಸಂಪರ್ಕ ರಸ್ತೆ ಒದಗಿಸಲು ಅಗತ್ಯ ಕ್ರಮ ಕೈಕೊಂಡಿದ್ದು ಕೆಲವೇ ತಿಂಗಳಲ್ಲಿ ಇದು ಲೋಕಾರ್ಪಣೆಗೊಳ್ಳಲಿದೆ ಎಂದು ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ಹೇಳಿದ್ದಾರೆ.

ವಿದ್ಯಾಲಯ ಕಟ್ಟಡಕ್ಕೆ ಭೇಟಿ ಕೊಟ್ಟು ಅಲ್ಲಿ ನಡೆಯುತ್ತಿರುವ ಕಾಮಗಾರಿ ಪರಿಶೀಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿದ್ಯಾಲಯ ಕಟ್ಟಡ ಕಾಮಗಾರಿ ವಿಳಂಬಕ್ಕೆ ನಾನು ಹೊಣೆಗಾರನಲ್ಲ. ನಾನು ಶಾಸಕನಾಗುವುದಕ್ಕಿಂತ ಮೊದಲೇ ಕಟ್ಟಡದ ಕೆಲಸ ಪ್ರಾರಂಭಿಸಲಾಗಿತ್ತು. ಸೂಕ್ತ ರಸ್ತೆಯೇ ಇಲ್ಲದ ಸ್ಥಳದಲ್ಲಿ ಶಾಲೆ ಕಟ್ಟಡಕ್ಕೆ ಜಾಗೆ ಆಯ್ದುಕೊಂಡಿರುವುದು ತಪ್ಪು. ಆದರೂ ಆದಷ್ಟು ಶೀಘ್ರ ಈ ಕಟ್ಟಡವನ್ನು ವಿದ್ಯಾರ್ಥಿಗಳಿಗೆ ಮುಕ್ತಗೊಳಿಸಲು ಪ್ರಾಮಾಣಿಕ ಪ್ರಯತ್ನ ನಡೆಸುತ್ತಿದ್ದೇನೆ ಎಂದು ತಿಳಿಸಿದರು.

ಈ ಆದರ್ಶ ವಿದ್ಯಾಲಯ ಕಟ್ಟಡಕ್ಕೆ ನಿವೇಶನ ಗುತರ್ಿಸುವಲ್ಲಿ ಹಿಂದಿನವರು ಎಡವಿದ್ದಾರೆ. ಅವರು ಆಗ ಮಾಡಿರುವ ತಪ್ಪನ್ನು ಶಾಸಕನಾದ ನಾನು ಈಗ ಸರಿಪಡಿಸುವ ಜವಾಬ್ಧಾರಿ ಹೊರಬೇಕಾಗಿದೆ. ವಿದ್ಯಾರ್ಥಿಗಳ ಪಾಲಕರು ಈಗ ಶಾಸಕನಾಗಿರುವ ನನ್ನನ್ನು ವಿನಾಕಾರಣ ದೂರಬಾರದು ಎಂದು ಮನವಿ ಮಾಡಿದರು.

ಶಾಲಾ ಕಟ್ಟಡ ಪರಿಶೀಲಿಸುವ ವೇಳೆ ಹಲವೆಡೆ ಕಳಪೆ ಕಾಮಗಾರಿ ಕಂಡುಬಂತು. ನೆಲಮಹಡಿ, ಮೊದಲ ಮಹಡಿಯಲ್ಲಿನ ಕೊಠಡಿಗಳು, ವಿವಿಧ ಮೂಲಸೌಕರ್ಯ ಮುಂತಾದವುಗಳನ್ನು ಪರಿಶೀಲಿಸಿದ ಶಾಸಕರು ಸ್ಥಳದಲ್ಲಿದ್ದ ಕಾಮಗಾರಿ ಎಲ್ಲೆಲ್ಲಿ ಕಳಪೆ ಕೆಲಸ ನಡೆದಿದೆಯೋ ಅದೆಲ್ಲವನ್ನು ಗುಣಮಟ್ಟದಲ್ಲಿ ನಿರ್ಮಿಸಲು ಗುತ್ತಿಗೆದಾರರಿಗೆ ತಿಳಿಸಿ ಸರಿಪಡಿಸುವಂತೆ ಸಲಹೆ ನೀಡಿದರು.

ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಡಿ.ಗಾಂಜಿ, ಶಾಲೆಯ ಮುಖ್ಯಾಧ್ಯಾಪಕಿ ನೀಲಮ್ಮ ತೆಗ್ಗಿನಮಠ, ಎಸ್ಡಿಎಂಸಿ ಅಧ್ಯಕ್ಷ ಎಸ್.ಎಂ.ಚಿಲ್ಲಾಳಶೆಟ್ಟರ ವಕೀಲರು, ದೈಹಿಕ ಶಿಕ್ಷಣ ಪರಿವೀಕ್ಷಕ ಎಚ್.ಎಲ್.ಕರಡ್ಡಿ, ಡಿಸಿಸಿ ಬ್ಯಾಂಕ್ ನಿದರ್ೇಶಕ ಸೋಮನಗೌಡ ಬಿರಾದಾರ ಕವಡಿಮಟ್ಟಿ, ಪುರಸಭೆ ಮಾಜಿ ಸದಸ್ಯರಾದ ಮನೋಹರ ತುಪ್ಪದ, ರಾಜು ಹೊನ್ನುಟಗಿ, ಬಿಜೆಪಿ ಧುರೀಣ ಬಸವರಾಜ ಗುಳಬಾಳ, ಶಿಕ್ಷಕ ಸಂಗಮೇಶ ಸಜ್ಜನ, ನಾಗರಾಜ ಕನ್ನೊಳ್ಳಿ, ಬಸನಗೌಡ ಪಾಟೀಲ ನಡಹಳ್ಳಿ, ಸಿಪಿಐ ಆನಂದ ವಾಘ್ಮೋಡೆ, ಪಿಎಸೈ ಮಲ್ಲಪ್ಪ ಮಡ್ಡಿ ಮತ್ತಿತರರು ಇದ್ದರು.