ಲೋಕದರ್ಶನ ವರದಿ
ಮುದ್ದೇಬಿಹಾಳ 28: ಕರ್ನಾಟಕ ಸಾರಿಗೆ ನೌಕರರನ್ನು ಸಕರ್ಾರಿ ನೌಕರರನ್ನಾಗಿ ಪರಿಗಣಿಸಿ, ನಿಗಮವನ್ನು ತೆಗೆದು ಹಾಕಿ ಸರಕಾರ ಇಲಾಖೆಗೆ ಹೊಂದಿಸಿ, ಸದಾ ಒತ್ತಡದಲ್ಲಿ ಕರ್ತವ್ಯ ನಿರ್ವಹಿಸುತ್ತಾ ಸಾರ್ವಜನಿಕ ಸೇವೆಯನ್ನು ನಿಷ್ಠೆ, ಶ್ರದ್ಧೆಯಿಂದ ಮಾಡುತ್ತಿರುವ ಸಾರಿಗೆ ನೌಕರರನ್ನು ಸರ್ಕಾರಿ ನೌಕರರೆಂದು ಘೋಷಣೆ ಮಾಡಲು ಮೀನಾಮೇಷ ಎಣಿಸುತ್ತಿರುವುದು ಸರಿಯಲ್ಲ, ಎಂದು ಸರ್ಕಾರದ ಧೋರಣೆಯನ್ನು ಖಂಡಿಸಿದ ಕೂಡಲ ಸಂಗಮ ಜಂಗಮ ಪೀಠದಪೀಠಾಧಿಪತಿ ಜಯಬಸವ ಮೃತ್ಯುಂಜ ಪೂಜ್ಯರು.
ಮುದ್ದೇಬಿಹಾಳ ಪಟ್ಟಣದ ಅಂಬೇಡ್ಕರ ವೃತ್ತದಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ ನೌಕರರ ಮೂಲಭೂತ ಹಕ್ಕುಗಳ ವಿಚಾರ ವೇದಿಕೆಯ ರಾಜ್ಯಧ್ಯಕ್ಷ ಶಿವರಡ್ಡಿ, ಜಿಲ್ಲಾಧ್ಯಕ್ಷ ಸುನೀಲ ರಾಠೋಡ, ಹಾಗೂ ಸರ್ವ ಸದಸ್ಯರು ಸನ್ಮಾನಿಸಿದರು, ಗೌರವನ್ನು ಸ್ವೀಕರಿಸಿದ ಬಳಿಕ ಪತ್ರಿಕಾ ಪ್ರತಿನಿದಿಯೊಂದಿಗೆ ಮಾತನಾಡಿದವರು.
ಸಾರ್ವಜನಿಕರ ಸೇವೆ ಮಾಡುವಂತ ಒಂದಿಷ್ಟು ಸಾರ್ವಜನಿಕ ಸಂಸ್ಥೆಗಳಲ್ಲಿ ಸಾರಿಗೆ ಇಲಾಖೆ ಕೂಡಾ ಒಂದಾಗಿದ್ದು, ನೇರವಾಗಿ ಸಾರ್ವಜನಿಕರಿಗೆ ತಲುಪುವ, ಸಹಾಯವಾಗುವ, ಸಂಸ್ಥೆ ಸಾರಿಗೆ ಇಲಾಖೆಯ ಸಿಬ್ಬಂದಿಗಳ ಕರ್ತವ್ಯ ಸ್ಲಾಗನೀಯವಾಗಿದೆ, ಆದರೆ ಒಂದು ವಿಷಾದನೆ ಸಂಗತಿ ಎಂದರೆ ಎಲ್ಲ ನೌಕರರಂತೆ ಈ ನೌಕರರನ್ನಾಗಿ ಸರಕಾರಿ ನೌಕರರು ಎಂದು ಪರಿಗಣಿಸದೆ ಇರುವದು ದೊಡ್ಡ ನೋವಿನ ಸಂಗತಿ, ಸಾರ್ವಜನಿಕರಿಗೆ ನೇರವಾಗಿ ಸಹಕರಿಸುವ ಸಿಬ್ಬಂದಿಗಳನ್ನು ಸರಕಾರಿ ನೌಕರರು ಎಂದು ಪರಿಗಣಿಸಿ ಸಾರ್ವಜನಿಕರ ಸೇವೆಗೆ ಅನುಕೂಲ ಮಾಡಿಕೋಡಬೇಕು, ಜನರ ಪರೋಕ್ಷವಾಗಿ ಹಗಲು ರಾತ್ರಿ ಅನ್ನದೇ ಕಣ್ಣಿಗೆ ನಿದ್ದೆ ಇಲ್ಲದೆ ದುಡಿವು ಸಾರಿಗೆ ನೌಕರರು ಇವರಾಗಿದ್ದು ಇವರ ಕಷ್ಟಕ್ಕೆ ಆದಷ್ಟು ಬೇಗ ಸರಕಾರ ಸ್ಪಂದಿಸಿ ಇವರಿಗೆ ಅನುಕೂಲ ಮಾಡಿಕೋಡಬೇಕು ಇವರ ನೋವಿಗೆ, ಸಂತೋಷದ ವಿಷಯ ಸರಕಾರ ನೀಡಲಿ ಎಂದರು.
ಈ ಸಂದರ್ಭದಲ್ಲಿ ಹೋರಾಟ ಸಮಿತಿಯ ರಾಜ್ಯಉಪಾಧ್ಯಕ್ಷ ರಫೀಕಹಮ್ಮದ ನಾಗನೂರ, ಜಿಲ್ಲಾಧ್ಯಕ್ಷ ಸುನೀಲ ರಾಠೋಡ, ಸದಸ್ಯರಾದ ಮೈಬೂಬ ಚಪ್ಪರಬಂದ, ಜಯರಾಮ ರಾಠೋಡ, ಬಸು ಕಡಿಭಾವಿ, ರೇಖಾ ಗಂಗಣ್ಣನ್ನವರ, ವಿಲಾಸ ಕುಲಕರ್ಣಿ, ಎ.ಆಯ್.ಹಸ್ಮಿ, ಮೋರೆ, ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.