ಮುದ್ದೇಬಿಹಾಳ: ಕೋರ್ಟ ಕಲಾಪ ಬಹಿಷ್ಕರಿಸಿ ಸರ್ಕಾರಕ್ಕೆ ಮನವಿ

ಮುದ್ದೇಬಿಹಾಳ 29: ಹಾಸನ ಜಿಲ್ಲೆ ಚನ್ನರಾಯಪಟ್ಟಣದ ನ್ಯಾಯವಾದಿಗಳ ಸಂಘದ ಸದಸ್ಯರಾಗಿದ್ದ ಸತೀಶ ಅವರ ಬರ್ಬರ ಹತ್ಯೆ ಖಂಡಿಸಿ ಇಲ್ಲಿನ ನ್ಯಾಯವಾದಿಗಳ ಸಂಘದ ಸದಸ್ಯರು ನ್ಯಾಯಾಲಯದ ಕಾರ್ಯ ಕಲಾಪದಿಂದ ದೂರ ಉಳಿದು ಪ್ರತಿಭಟಿಸಿದ ಘಟನೆ ಬುಧವಾರ ಇಲ್ಲಿ ನಡೆದಿದೆ.

ಇಲ್ಲಿನ ಹೊಸ ಕೋರ್ಟ ಕಟ್ಟಡದಲ್ಲಿರುವ ಸಂಘದಲ್ಲಿ ಸಭೆ ನಡೆಸಿದ ಎಲ್ಲ ನ್ಯಾಯವಾದಿಗಳು ಘಟನೆ ಖಂಡಿಸಿ ಕೋಟ್ ಕಲಾಪದಿಂದ ದೂರ ಉಳಿಯುವ ಠರಾವು ಸ್ವೀಕರಿಸಿದರು. ನಂತರ ಎಲ್ಲರೂ ಮಿನಿ ವಿಧಾನಸೌಧಕ್ಕೆ ತೆರಳಿ ತಹಸೀಲ್ದಾರ್ ಮೂಲಕ ಸರ್ಕಾರಕ್ಕೆ  ಬೇಡಿಕೆಯ ಮನವಿ ಸಲ್ಲಿಸಿದರು.

ಸತೀಶರನ್ನು ಹತ್ಯೆಗೈದ ದುಷ್ಕಮರ್ಿಗಳ ವಿರುದ್ಧ ಕಠಿಣ ಕ್ರಮ ಕೈಕೊಳ್ಳಬೇಕು ಮತ್ತು ವಕೀಲರ ಸಂರಕ್ಷಣೆಗಾಗಿ ಕಾನೂನಿನಲ್ಲಿ ಸೂಕ್ತ ತಿದ್ದುಪಡಿ ಮಾಡಬೇಕು ಎಂದು ಮನವಿ ಮೂಲಕ ಸರ್ಕಾರವನ್ನು  ಒತ್ತಾಯಿಸಲಾಯಿತು. ಸಂಘದ ಪ್ರಧಾನ ಕಾರ್ಯದಶರ್ಿ ಬಿ.ವೈ.ಮೇಟಿ, ವಕೀಲರಾದ ಎಸ್.ಎಂ.ಚಿಲ್ಲಾಳಶೆಟ್ಟರ, ಪಿ.ಬಿ.ಮಾತಿನ, ಎಚ್.ಎನ್.ಬಿರಾದಾರ, ಆರ್.ಎಸ್.ಬಿರಾದಾರ, ಎಂ.ಎಸ್.ಬಿರಾದಾರ, ಪಿ.ಬಿ.ಜಾಧವ, ಕೆ.ಬಿ.ದೊಡಮನಿ, ಎನ್.ಎಸ್.ಪಾಟೀಲ, ಎಂ.ಎಚ್.ಹುಗ್ಗಿ, ಬಿ.ಎ.ಚಿನಿವಾರ, ಆರ್.ಬಿ.ಕುಲಕಣರ್ಿ, ಆರ್.ಬಿ.ಪಾಟೀಲ, ಎಚ್.ಡಿ.ಅನಂತಪುರ ಮತ್ತಿತರರು ಪಾಲ್ಗೊಂಡಿದ್ದರು.