ಲೋಕದರ್ಶನ ವರದಿ
ಮುದ್ದೇಬಿಹಾಳ 22: ಸಬ್ ಸಾಥ ಸಬ್ ಕಾ ವಿಕಾಶ, ಮನ್ ಕಿ ಬಾತ್, ಬೇಟಿ ಪಡಾವೋ ಬೇಟಿ ಬಚಾವೋ ಎಂಬ ಹೆಸರುಗಳಿಂದ ಜನರನ್ನು ಮುರ್ಖರನ್ನಾಗಿ ಮಾಡಲು ಹೊರಟಿರುವ ನರೇಂದ್ರ ಮೋದಿ ಹಾಗೂ ಬಿಜೆಪಿ ಪಕ್ಷಕ್ಕೆ ತಕ್ಕ ಪಾಠ ಕಲಿಸಬೇಕಿದೆ ಎಂದು ಕರ್ನಾಟಕದ ದಲಿತ ಸಂಘರ್ಷ ಸಮಿತಿ ರಾಜ್ಯ ಸಂಘಟನಾ ಸಂಚಾಲಕ ಜಿತೇಂದ್ರ ಕಾಂಬಳೆ ಕರೆ ನೀಡದರು.
ಇಲ್ಲಿನ ಅಂಬೇಡ್ಕರ್ ವೃತ್ತದಲ್ಲಿರುವ ರಾಂಪೂರ್ ಕಾಂಪ್ಲೇಕ್ಸ್ನಲ್ಲಿ ರವಿವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ರಮೇಶ ಜಿಗಜಿಣಗಿ ಅವರಿಗೆ ಚುನಾವಣೆ ಸಂದರ್ಭದಲ್ಲಿ ಮಾತ್ರ ದಲಿತರು ನೆನೆಪಾಗುತ್ತಾರೆ. ಚುನಾವಣೆ ಗೆದ್ದ ನಂತರ ಯಾರೊಬ್ಬ ದಲಿತರ ಕಣ್ಣಿಗೂ ಕಾಣುವುದಿಲ್ಲ. ಇಂತಹ ರಾಜಕಾರಣಿಗೆ ದಲಿತರು ಹಾಗೂ ಹಿಂದುಳಿದವರು ತಿರಸ್ಕರಿಸಬೇಕು ಎಂದು ಅವರು ಹೇಳಿದರು.
2018ರಲ್ಲಿ ಜಂತರ್ ಮಂತರ್ನಲ್ಲಿ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಬರೆದ ಸಂವಿಧಾನವನ್ನು ಸುಟ್ಟು ಕೇಕೆ ಹಾಕಿ ಕೇಸರಿ ಭಯೋತ್ಪಾದಕರನ್ನು ಶಿಕ್ಷಗ ಗುರಿಪಡಿಸದೇ ಸುಮ್ಮನಿದ್ದು ದೇಶಕ್ಕೆ ಅವಮಾನ ಮಾಡಿದ್ದು ಯಾರೂ ಮರೆತಿಲ್ಲ ಎಂಬುವುದನ್ನು ಬಿಜೆಪಿಯವರು ತಿಳಿದುಕೊಳ್ಳಬೇಕು. ಇನ್ನೂ ಮೀಸಲಾಯಿತಿ ವಿರೋಧಿ ಹೇಳಿಕೆಗಳನ್ನು ನೀಡುವ ಬಿಜೆಪಿಯವರು ದೇಶದ ಸಂವಿಧಾನವನ್ನೇ ಬದಲಿಸುವ ಪ್ರಯತ್ನದಲ್ಲಿದ್ದಾರೆ. ದೇಶದಲ್ಲಿ ಕೋಮುಸೌಹಾರ್ದತೆಯಲ್ಲಿರುವ ಜನರನ್ನು ವಿಭಜನೆ ಮಾಡಿಕೊಂಡು ರಾಜಕೀಯವಾಗಿ ಅಧಿಕಾರ ಪಡೆಯುವ ತವದಲ್ಲಿ ಮೋದಿ ಮುನ್ನೆಯುತ್ತಿದ್ದಾರೆ ಎಂದು ಅವರು ಆರೋಪಿಸಿದರು.
ಈ ಸಂದರ್ಭದಲ್ಲಿ ಬಸು ಚಲವಾದಿ, ವಿಠ್ಠಲ ಕಡಿಮನಿ, ಶಿವು ಚಲವಾದಿ, ಪ್ರಚಂಡ ಸರೂರ, ಶಿವಪ್ಪ ದೊಡಮನಿ ಇದ್ದರು.