ಲೋಕದರ್ಶನ ವರದಿ
ಮುದ್ದೇಬಿಹಾಳ 14: ಪಿಯುಸಿಯ ಇತಿಹಾಸ, ಜೀವಶಾಸ್ತ್ರ ವಿಷಯದ ಪರೀಕ್ಷೆಯಲ್ಲಿ ಭಾರೀ ಪ್ರಮಾಣದಲ್ಲಿ ನಕಲು ನಡೆಸಲಾಗುತ್ತಿದೆ ಮತ್ತು ಖಾಸಗಿ ಸಂಸ್ಥೆಯೊಂದು ಪರೀಕ್ಷಾ ಮುಖ್ಯ ಸಿಬ್ಬಂದಿಗೆ ಹಣ ಕೊಟ್ಟು ನಕಲಿಗೆ ಬಳಸಿಕೊಂಡಿದೆ ಎನ್ನುವ ಗಂಭೀರ ಆರೋಪ ಹಿನ್ನೆಲೆ ವಿಜಯಪುರ ಎಸಿ ರುದ್ರೇಶ ಹಾಗೂ ತಹಸೀಲ್ದಾರ್ ವಿನಯ್ಕುಮಾರ ಪಾಟೀಲ ನೇತೃತ್ವದ ಪ್ರತ್ಯೇಕ ತಂಡ ಎರಡು ಪರೀಕ್ಷಾ ಕೇಂದ್ರಗಳ ಮೇಲೆ ಗುರುವಾರ ದಿಢಿರ್ ದಾಳಿ ನಡೆಸಿ ನಕಲು ನಡೆಸುತ್ತಿದ್ದ 10 ವಿದ್ಯಾಥರ್ಿಗಳನ್ನು ಡಿಬಾರ್ ಮಾಡಿದ್ದೂ ಅಲ್ಲದೆ ಓರ್ವ ಪರೀಕ್ಷಾ ಮುಖ್ಯ ಅಧಿಕ್ಷಕರನ್ನು ಕರ್ತವ್ಯದಿಂದ ಬಿಡುಗಡೆಗೊಳಿಸುವ ಮೂಲಕ ಭಾರೀ ಬಿಸಿ ಮುಟ್ಟಿಸಿದ್ದಾರೆ.
ಜ್ಞಾನಭಾರತಿ ಕೇಂದ್ರದಲ್ಲಿ ನಡೆಸಿದ ಕಂಪ್ಯೂಟರ್ ಸೈನ್ಸ್ ವಿಷಯದ ಪರೀಕ್ಷೆಯಲ್ಲಿ ಪರೀಕ್ಷಾ ಸಿಬ್ಬಂದಿ ಎದುರೇ ವ್ಯಾಪಕ ನಕಲು ನಡೆಸಲಾಗಿದೆ ಎನ್ನುವ ಗಂಭೀರ ಆರೋಪ ಕೇಳಿಬಂದ ಹಿನ್ನೆಲೆ ಜಿಲ್ಲಾಧಿಕಾರಿಗಳ ಸೂಚನೆ ಮೇರೆಗೆ ಈ ದಾಳಿ ನಡೆಸಲಾಗಿತ್ತು. ಹೀಗಾಗಿ ದಾಳಿಯ ಬಿಸಿ ಎಲ್ಲ ಪರೀಕ್ಷಾ ಕೇಂದ್ರಗಳಿಗೂ ತಟ್ಟುವಂತಾಗಿತ್ತು. ಜ್ಞಾನಭಾರತಿ ಕೇಂದ್ರದಲ್ಲಿ ಎಸಿ ರುದ್ರೇಶ ಅವರ ತಂಡ ದಾಳಿ ನಡೆಸಿ ನಕಲು ನಡೆಸುತ್ತಿದ್ದ ಐವರು ಇತಿಹಾಸ ಹಾಗೂ ಓರ್ವ ಜೀವಶಾಸ್ತ್ರ ವಿದ್ಯಾಥರ್ಿಗಳನ್ನು, ನಾಗರಬೆಟ್ಟದಲ್ಲಿ ತಹಸೀಲ್ದಾರ್ ಪಾಟೀಲ ಅವರು ದಾಳಿ ನಡೆಸಿ ನಾಲ್ವರು ಜೀವಶಾಸ್ತ್ರ ವಿದ್ಯಾರ್ಥಿಗಳನ್ನು ಆಯಾ ಕೇಂದ್ರಗಳ ಮುಖ್ಯ ಅಧಿಕ್ಷಕರ ಮೂಲಕ ಡಿಬಾರ್ ಮಾಡಿಸಿದರು. ಈ ಮಧ್ಯೆ ಜ್ಞಾನಭಾರತಿ ಕೇಂದ್ರದಲ್ಲಿದ್ದ ವಿಜಯಪುರ ಪದವಿಪೂರ್ವ ಶಿಕ್ಷಣ ಇಲಾಖೆ ಪ್ರಭಾರ ಉಪ ನಿದರ್ೇಶಕ ಎಸ್.ವೈ.ಅಮಾತೆ ಅವರು ಎಸಿ ಅವರ ಸೂಚನೆ ಮೇರೆಗೆ ಆ ಕೇಂದ್ರ ಮುಖ್ಯ ಅಧಿಕ್ಷಕರನ್ನು ಕರ್ತವ್ಯದಿಂದ ಬಿಡುಗಡೆಗೊಳಿಸಿ ಅವರ ಜಾಗದಲ್ಲಿ ಎಲ್.ಎಸ್.ಗುರವ್ ಅವರನ್ನು ನೇಮಿಸಿ ಪರೀಕ್ಷಾ ಕಾರ್ಯ ಮುನ್ನಡೆಸಲು ಕ್ರಮ ಕೈಕೊಂಡರು.
ಖಾಸಗಿ ಸಂಸ್ಥೆಯವರೊಬ್ಬರು ಪರೀಕ್ಷಾ ಕೇಂದ್ರವೊಂದರ ಮುಖ್ಯ ಅಧಿಕ್ಷಕರಿಗೆ, ಸ್ಥಾನಿಕ ಜಾಗೃತದಳದ ಸಿಬ್ಬಂದಿಗೆ ಮತ್ತು ವಿವಿಧ ಅಧಿಕಾರಿಗಳಿಗೆ ಹಣ ನೀಡಿ ಭಾರೀ ಪ್ರಮಾಣದಲ್ಲಿ ನಕಲು ನಡೆಸಿದ್ದಾರೆ ಎನ್ನುವ ಆರೋಪಗಳು ಎಲ್ಲಾ ಕಡೆ ವೈರಲ್ ಆಗಿದ್ದು ಈ ದಾಳಿಗೆ ಕಾರಣವಾಗಿರಬಹುದು ಎಂದು ವಿಶ್ಲೇಷಿಸಲಾಗುತ್ತಿದ್ದು ಆ ನಿಟ್ಟಿನಲ್ಲಿ ತನಿಖೆ ನಡೆಯುತ್ತಿದೆ ಎಂದು ಮೂಲಗಳು ತಿಳಿಸಿವೆ.