ಲೋಕದರ್ಶನ ವರದಿ
ಮುದ್ದೇಬಿಹಾಳ 14: ತಮ್ಮ ತಾಂಡಾದಲ್ಲಿ ಮಾದಕ ದ್ರವ್ಯ ಹಾಗೂ ಗಾಂಜಾ ಸೇವಿಸಿ ಗ್ರಾಮಸ್ಥರಿಗೆ, ವಿದ್ಯಾರ್ಥಿಗಳಿಗೆ ತೊಂದರೆ ಕೊಡುತ್ತಾನೆ, ಹೊಡೆಯುವುದು, ಮಾರಕಾಸ್ತ್ರಗಳಿಂದ ಹಲ್ಲೆ ನಡೆಸುತ್ತಾನೆ ಎಂದು ದೂರಿ ಗ್ರಾಮದ ನೀತಿನ್ ಭೀಮಸಿಂಗ್ ನಾಯಕ ವಿರುದ್ಧ ಕ್ರಮ ಜರುಗಿಸಬೇಕೆಂದು ಆಗ್ರಹಿಸಿ ನೂರಾರು ಗ್ರಾಮಸ್ಥರು ಸ್ಥಳೀಯ ಹೆಸ್ಕಾಮ್ ಕಚೇರಿಗೆ ಗುರುವಾರ ಮನವಿ ಸಲ್ಲಿಸಿದ್ದಾರೆ. ಮನವಿಯಲ್ಲಿ ಮಾದಕ ದ್ರವ್ಯ ಸೇವನೆ, ಗ್ರಾಮದ ವಿದ್ಯಾರ್ಥಿಗಳಿಂದ ಮಾದಕ ದ್ರವ್ಯ ತರಿಸುತ್ತಾನೆ. ಅವರಿಗೆ ಮಾದಕ ದ್ರವ್ಯ ಸೇವಿಸುವಂತೆ ಒತ್ತಾಯ ಮಾಡುತ್ತಾನೆ, ನಿರಾಕರಿಸಿದವನಿಗೆ ಬೆದರಿಕೆ ಹಾಕುತ್ತಾನೆ. ಗ್ರಾಮದ ಹೆಣ್ಣು ಮಕ್ಕಳ ಸುರಕ್ಷತೆ ಸಮಸ್ಯೆಯಾಗಿದೆ. ಹೆಣ್ಣು ಮಕ್ಕಳು ಮನೆಯಂಗಳದಲ್ಲಿ ಕುಳಿತುಕೊಳ್ಳದಂತೆ, ಬಹಿರ್ದೆಸೆಗೆ ಹೋಗಲೂ ಹೆದರುವಂತಾಗಿದೆ. ಎಂದು ಹೇಳಲಾಗಿದೆ.
ಮನವಿಗೆ ಪ್ರೇಮಸಿಂಗ ಚವ್ಹಾಣ, ಎಸ್.ಎಂ.ಮೇಲಿನಮನಿ, ಸಿ.ಎನ್.ರಾಠೋಡ, ವಿ.ಬಿ.ರಾಠೋಡ, ಬಿ.ಎಚ್.ಚವ್ಹಾಣ, ಎಸ್.ಜೆ.ಚವ್ಹಾಣ, ಎಸ್.ಜಿ.ಚವ್ಹಾಣ, ಪಿ.ಎಸ್.ಚವ್ಹಾಣ, ಕವಿತಾ ಚವ್ಹಾಣ, ಅಶ್ವಿನಿ ರಾಠೋಡ, ಜ್ಯೋತಿ ಚವ್ಹಾಣ, ಸ್ನೇಹಾ ಪವಾರ, ಸಂತೋಷ ಚವ್ಹಾಣ ಮತ್ತಿತರರು ಸೇರಿದಂತೆ ಐವತ್ತಕ್ಕೂ ಹೆಚ್ಚು ಜನ ಗ್ರಾಮಸ್ಥರು ಸಹಿ ಮಾಡಿದ್ದಾರೆ. ಮನವಿಯನ್ನು ಹೆಸ್ಕಾಂ ಇಲಾಖೆಯ ಸಹಾಯಕ ಅಭಿಯಂತರರಾದ ಎಸ್.ಎಸ್.ಪಾಟೀಲರಿಗೆ ಸಲ್ಲಿಸಲಾಯಿತು. ಈ ಕುರಿತು ಇಲಾಖೆಗೆ ವರದಿ ನೀಡಲಾಗುವುದು ಎಂದು ಎಸ್.ಎಸ್.ಪಾಟೀಲರು ತಿಳಿಸಿದರು.