ಲೋಕದರ್ಶನ ವರದಿ
ಮುದ್ದೇಬಿಹಾಳ 09: ದೇಶಕ್ಕೆ ಕೊಡುಗೆ ನೀಡುವಂತೆ ಮಕ್ಕಳನ್ನು ರೂಪಿಸುವ ಜವಾಬ್ಧಾರಿ ಶಿಕ್ಷಣ ಸಂಸ್ಥೆಗಳ ಮೇಲಿದೆ. ಹಣ ಮಾಡಿಕೊಳ್ಳುವುದಕ್ಕೋಸ್ಕರ ಶಿಕ್ಷಣ ಸಂಸ್ಥೆ ಪ್ರಾರಂಭಿಸಿದ್ದರೆ ದೀರ್ಘಕಾಲಿನ ಯಶಸ್ಸು ಸಿಗುವುದಿಲ್ಲ. ಶಿಕ್ಷಣವು ಶಿಸ್ತು, ಸಮಯಪ್ರಜ್ಞೆಯನ್ನು ಒಳಗೊಂಡಿರಬೇಕು ಎಂದು ಕೊಡಗು ಸೈನಿಕ ಶಾಲೆಯ ಪ್ರಾಂಶುಪಾಲೆ, ಲೆಫ್ಟಿನೆಂಟ್ ಕರ್ನಲ್ ಸೀಮಾ ತ್ರಿಪಾಠಿ ಕರೆ ಹೇಳಿದ್ದಾರೆ.
ಮುದ್ದೇಬಿಹಾಳ ಪಟ್ಟಣದ ಡಾ.ಪದಕಿ ಆಸ್ಪತ್ರೆ ಬಳಿ ಆರ್.ಎಚ್.ಪಾಟೀಲ ಅವರ ರಾಜದೀಪ್ ಟಾವರ್ನಲ್ಲಿ ನೂತನವಾಗಿ ಪ್ರಾರಂಭಗೊಂಡಿರುವ ರಾಮನ್ ಎಜ್ಯುಕೇಶನ್ ಅಕಾಡೆಮಿ ಮತ್ತು ಸೊಸೈಟಿಯ ಲೋಕಾರ್ಪಣೆ, ಮಾಜಿ ಸೈನಿಕರು ಮತ್ತು ಅವರ ಕುಟುಂಬ ಸದಸ್ಯರಿಗೆ ಸನ್ಮಾನ, ಸಾಧಕ ವಿದ್ಯಾಥರ್ಿಗಳಿಗೆ ರಾಮನ್ ಸಾಧಕ ಪ್ರಶಸ್ತಿ ಪುರಸ್ಕಾರ ಸಮಾರಂಭವನ್ನು ಸೋಮವಾರ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಮುಖ್ಯ ಅತಿಥಿಯಾಗಿದ್ದ ವಿಜಯಪುರ ಜಿಲ್ಲಾ ಮಾಜಿ ಸೈನಿಕರ ಸಂಘದ ಅಧ್ಯಕ್ಷ ನಿವೃತ್ತ ಕ್ಯಾಪ್ಟನ್ ಎಂ.ಬಿ.ತೋಟದ, ಅತಿಥಿಗಳಾಗಿದ್ದ ಬಾಗಲಕೋಟೆ ಬಿಟಿಡಿಎ ಎಸ್ಓ ಪ್ರಕಾಶ ದಡ್ಡಿ, ವೈದ್ಯ ಡಾ.ಎ.ಎಂ.ಮುಲ್ಲಾ ಮಾತನಾಡಿದರು. ಸಾನಿಧ್ಯವಹಿಸಿದ್ದ ಯರಝರಿ ಯಲ್ಲಾಲಿಂಗ ಮಠದ ಮಲ್ಲಾಲಿಂಗ ಮಹಾಸ್ವಾಮಿಗಳು ಆಶಿರ್ವಚನ ನೀಡಿದರು.
ಗಣ್ಯ ಡಾ.ಜಿ.ಕೆ.ಹೊಕ್ರಾಣಿ, ಭಾರತೀಯ ವಾಯುಸೇನೆಯ ಸಾಜರ್ೆಂಟ್ ಎಚ್.ಆರ್.ಮಾಚಪ್ಪನವರ್, ತಾಲೂಕು ಮಾಜಿ ಸೈನಿಕರ ಸಂಘದ ಉಪಾಧ್ಯಕ್ಷ ನಾನಪ್ಪ ನಾಯಕ, ಜಿಲ್ಲಾ ಮಾಜಿ ಸೈನಿಕರ ಸಂಘದ ಪ್ರತಿನಿಧಿ ಎಸ್.ಕೆ.ಕತ್ತಿ, ವಿಜಯಪುರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಉಪಾಧ್ಯಕ್ಷ ಡಿ.ಬಿ.ವಡವಡಗಿ, ಸೊಸೈಟಿಯ ಪಿಆರ್ಓ ಮಾಜಿ ಸೈನಿಕ ಸುಧೀರ ಲಮಾಣಿ, ಸೊಸೈಟಿ ಕಾರ್ಯದಶರ್ಿ ವೀರೇಶ ಹೂಲಿಕೇರಿ, ಸಮಾಜ ಸೇವಕ ಬಾಬುಸಾಬ ಜಾನ್ವೇಕರ್, ಶರಣಯ್ಯ ಮಠ, ಮಹಾಂತಗೌಡ ಪಾಟೀಲ ಗುಂಡಕರ್ಜಗಿ ಉಪಸ್ಥಿತರಿದ್ದರು.
ಇದೇ ವೇಳೆ ಜಿಲ್ಲೆಯ ಮಾಜಿ ಸೈನಿಕರಿಗೆ ಮತ್ತು ನಿಧನ ಹೊಂದಿದ ಮಾಜಿ ಸೈನಿಕರ ಕುಟುಂಬದ ಸದಸ್ಯರಿಗೆ ಅಕಾಡೆಮಿ ವತಿಯಿಂದ ಸನ್ಮಾನಿಸಲಾಯಿತು. ರಾಮನ್ ರಿವಾಡರ್್ ಪರೀಕ್ಷೆಯ ಪ್ರಾಥಮಿಕ ವಿಭಾಗದಲ್ಲಿ ಪ್ರಥಮ ಸ್ಥಾನ ಹಂಚಿಕೊಂಡ ಅಮೋಘ ಪಾಟೀಲ, ಅಕಿಲ್ ನದಾಫ್, ಬಸವರಾಜ ನೆರಬೆಂಚಿ, ದ್ವಿತಿಯ ಸ್ಥಾನ ಪಡೆದ ವಿನೋದ ಮಂಗ್ಯಾಳ, ತೃತಿಯ ಸ್ಥಾನ ಹಂಚಿಕೊಂಡ ರೇಖಾ ಬಾಚಿಹಾಳ, ಸಾಗರ ಪಡೇಕನೂರ, ಶಿವಶಂಕರ ಕರಡಿ ಹಾಗೂ ಎಸ್ಸೆಸ್ಸೆಲ್ಸಿ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದ ನಾಜಬಿನ್ಪರವೀನ್, ದ್ವಿತಿಯ ಸ್ಥಾನ ಪಡೆದ ಸ್ನೇಹಾ ಎಸ್., ತೃತಿಯ ಸ್ಥಾನ ಪಡೆದ ರೇಖಾ ಚೌಧರಿ, ಚತುರ್ಥ ಸ್ಥಾನ ಹಂಚಿಕೊಂಡ ವೈಷ್ಣವಿ, ಸಮೀದುಲ್ಲಾ ಕಾಟೇವಾಡಿ ಇವರಿಗೆ ನಗದು ಪುರಸ್ಕಾರ, ಪ್ರಶಸ್ತಿ ಪತ್ರ ನೀಡಿ ಪುರಸ್ಕರಿಸಲಾಯಿತು.
ಸಮಾರಂಭಕ್ಕೂ ಮುನ್ನ ರಾಜದೀಪ್ ಟಾವರ್ನಲ್ಲಿರುವ ಅಕಾಡೆಮಿ ಮತ್ತು ಸೊಸೈಟಿಯನ್ನು ರಿಬ್ಬನ್ ಕತ್ತರಿಸುವ ಮೂಲಕ ಲೆ.ಕ.ಸೀಮಾ ಲೋಕಾರ್ಪಣೆಗೊಳಿಸಿದರು. ರುದ್ರಮ್ಮ ಮಠಪತಿ ಮತ್ತು ಜ್ಯೋತಿ ನಾಗರಾಳ ಪ್ರಾಥರ್ಿಸಿದರು. ಉಪನ್ಯಾಸಕ ಗಿರೀಶ ವಾಗಣಗೇರಿ ಸ್ವಾಗತಿಸಿದರು. ಉಪನ್ಯಾಸಕರು ತನುಜಾ ಮತ್ತು ವೀಣಾ ನಿರೂಪಿಸಿದರು. ವೀರೇಶ ಹೂಲಿಕೇರಿ ವಂದಿಸಿದರು.