ಗುಳೇದಗುಡ್ಡ ಲಕ್ಷ್ಮೀ ಸಹಕಾರಿ ಬ್ಯಾಂಕ್ಗೆ ನೂರರ ಸಂಭ್ರಮ ಎಂ.ಎಸ್.ಹಳ್ಳದ

ಬಾಗಲಕೋಟೆ, 12: ಚಾಲುಕ್ಯರಾಳಿದ ನಾಡು ಐತಿಹಾಸಿಕ ಪ್ರಶಿದ್ಧಿಯ ಬಾದಾಮಿ ತಾಲೂಕಿನ ಪ್ರಮುಖ ನಗರಗಳಲ್ಲಿ ಒಂದಾದ ಗುಳೇದಗುಡ್ಡ ತನ್ನದೇ ಆದ ಇತಿಹಾಸ ಹೊಂದಿದ್ದು, ಇಲ್ಲಿ ನೇಕಾರಿಕೆ ಮೂಲ ಕಸಬು ಆಗಿದೆ. ರೇಷ್ಮೆ ಖಣ( ಕುಪ್ಪಸ್) ಗಳ ತಯಾರಿಕೆಯಲ್ಲಿ ದೇಶ ವಿದೇಶಿಗಳಲ್ಲಿ ಹೆಸರು ಮಾಡಿದೆ. ಜಿಲ್ಲೆಯಲ್ಲಿ ಈ ಮೊದಲು ಗುಳೇದಗುಡ್ಡ ಮತಕ್ಷೇತ್ರವಾಗಿತ್ತು. ಮತಕ್ಷೇತ್ರ ಪುರ್ನವಿಂಗಡಣೆಯಲ್ಲಿ ಕೈ ತಪ್ಪಿದರಿಂದ ಈಗ ತಾಲೂಕ ಕೇಂದ್ರವಾಗಿ ಘೋಷಣೆಯಾಗಿದ್ದರು. ಕಚೇರಿಗಳು ಪ್ರಾರಂಭವಾಗಿಲ್ಲ. ಇಲ್ಲಿ ಕೃಷಿ, ಕೈಗಾರಿಕೆ, ವ್ಯಾಪಾರ, ರಾಜಕೀಯ ಕ್ಷೇತ್ರಗಳಲ್ಲಿ ತನ್ನದೇ ಆದ ವಿಶಿಷ್ಠತೆ ಹೊಂದಿದ್ದು.  ರಾಜಕೀಯ ಹಾಗೂ ಸಹಕಾರಿ ಕ್ಷೇತ್ರಗಳಿಗೆ ಹಲವು ಮಹನಿಯರನ್ನು ನಾಡಿಗೆ ಪರಿಚಯಿಸಿದ್ದು, ಅದರಲ್ಲಿ ರಾಜಶೇಖರ ಶೀಲವಂತರು ಒಬ್ಬರಾಗಿದ್ದಾರೆ.

ಮೇ 3, 1964 ರಲ್ಲಿ ಜನಿಸಿದ ರಾಜಶೇಖರ ಬಿ.ಕಾಂ ಪದವೀದರರು ಪೂರ್ವಜರ ಕುಲಕಸಬು ಆದ ಬಂಗಾರ ವ್ಯಾಪಾರ ಇವರ ಪ್ರಮುಖ ಉದ್ಯೋಗವಾಗಿದ್ದು. ಬಾಲ್ಯದಿಂದಲೇ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಉತ್ಸಹಿ ನಾಯಕನಾಗಿ ಕಾಲೇಜು ಮಟ್ಟದಲ್ಲಿ ವಿದ್ಯಾಥರ್ಿ ಪರಿಷತ್ತಿನ ನಿರ್ವಹಣೆ ಮಾಡುತ್ತಾ ಕಾಲೇಜು ಪ್ರಧಾನ ಕಾರ್ಯದಶರ್ಿಯಾಗಿ ಸೇವೆ ಸಲ್ಲಿಸುತ್ತಾ ಸಾರ್ವಜನಿಕವಾಗಿ ಪ್ರಚಲಿತರಾದರು. 1993 ರಲ್ಲಿ ಲಕ್ಷ್ಮೀ ಸಹಕಾರಿ ಬ್ಯಾಂಕಿನ ಅಧ್ಯಕ್ಷರಾಗಿ ಇಲ್ಲಿಯವರಿಗೆ ಸುಧೀರ್ಘವಾಗಿ ಕಾರ್ಯ ನಿರ್ವಹಸಿ ಬ್ಯಾಂಕಿನ ಸರ್ವತೋಮುಖ ಅಭಿವೃದ್ಧಿಗೆ ಪಾತ್ರರಾಗಿದ್ದಾರೆ. 

2002ರಲ್ಲಿ ನವದೆಹಲಿಯಲ್ಲಿ ರಾಷ್ಟ್ರೀಯ ಅರ್ಬನ್ ಬ್ಯಾಂಕುಗಳ ನಿದರ್ೇಶಕರಾಗಿ 2008ರಲ್ಲಿ ಪ್ರೋಗ್ರೆಸಿವ್ ಎಜುಕೇಶನ್ ಟ್ರಸ್ಟಿನ್ ಚೇರಮ್ರಾಗಿ ಹುಬ್ಬಳ್ಳಿಯ ಉತ್ತರ ಕನರ್ಾಟಕ ಜ್ಯುಲೇರಿಸ್ ಸಂಘಗಳ ಉಪಧ್ಯಾಕ್ಷರಾಗಿ ಬೆಳಗಾವಿಯ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ವ್ಯಾಪ್ತಿಯ ಅನುದಾನಿತ ಡಿಗ್ರಿ ಕಾಲೇಜುಗಳ ಉಪಧ್ಯಾಕ್ಷರಾಗಿ ನಗರದ ಸರಸ್ವತಿ ವಿದ್ಯಾ ಸಂಸ್ಥೆಯ ನಿದರ್ೇಶಕರಾಗಿ ಮುರಘರಾಜೇಂದ್ರ ಶಿಕ್ಷಣ ಸಂಸ್ಥೆಯ ಕಟ್ಟಡ ಸಮಿತಿಯ ಅಧ್ಯಕ್ಷರಾಗಿ ಗುಳೇದಗುಡ್ಡ ತಾಲೂಕಾ ಹೋರಾಟ ಸಮಿತಿಯ ಅಧ್ಯಕ್ಷರಾಗಿ, ಗುಳೇದಗುಡ್ಡದ ಮತಕ್ಷೇತ್ರದ ಸಮಗ್ರ ನೀರಾವರಿ ಹೋರಟಕ್ಕಾಗಿ ಕಳಸ-ಬಂಡುಗಿ ನಾಲ ಜೋಡನೆಗೆ ಹೋರಾಟ ನಡೆಸಿದರು.

1994 ರಲ್ಲಿ ಅಖಂಡ ವಿಜಾಯಪುರ-ಬಾಗಲಕೋಟ ಜಿಲ್ಲೆಯ ಭಾಜಪದ ಪ್ರಧಾನ ಕಾರ್ಯಶಿರ್ದಸಿಯಾಗಿ 1994ರಲ್ಲಿ ಪ್ರಥಮವಾಗಿ ವಿಧಾನ ಸಭೆ ಚುನಾವಣೆಗೆ ಸ್ಪಧರ್ಿಸಿ ವಿಜಯಶಾಲಿಯಾಗಿ. 1996ರ ಉಪಚುನಾವಣೆಯಲ್ಲಿ ಪುನಃ ಆಯ್ಕೆಯಾಗಿ ದಾಖಲೆಯ ಗೆಲುವು ಸಾಧಿಸಿದರು. ಬಾಗಲಕೋಟ ಜಿಲ್ಲೆಯ ಭಾರತಿಯ ಜನತಾ ಪಕ್ಷದ ಅಧ್ಯಕ್ಷರಾಗಿ ಪಕ್ಷ ಸಂಘಟನೆಯಲ್ಲಿ ಅತೀ ಹೆಚ್ಚು ಕ್ರೀಯಾಶಿಲರಾಗಿ ಅನೇಕ ಜನಪರ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು. ಇಂದು ಗುಳೇದುಗಡ್ಡ ಪ್ರತಿಷ್ಠಿತ ಲಕ್ಷ್ಮೀ ಸಹಕಾರಿ ಬ್ಯಾಂಕ್ ಇವರ ಅಧ್ಯಕ್ಷತೆಯಲ್ಲಿಯೇ ಶತಮಾನೋತ್ಸವದ ಸಂಭ್ರಮದಲ್ಲಿದೆ.

ಈ ಕಾರ್ಯಕ್ರಮಕ್ಕೆ ನಾಡಿನ ಅನೇಕ ರಾಜಕೀಯ ಪ್ರಮುಖರು, ಕಲಾವಿದರು, ಸಂಗಿತಗಾರರು, ಮಠಾಧಿಪತಿಗಳು ಆಗಮಿಸಲಿದ್ದು ಶತಮಾನೋತ್ಸವದ ನೆನಪಿಗಾಗಿ ಕ್ರೀಡೆಗಳನ್ನು, ಮಹಿಳೆಯರಿಗಾಗಿ ಹಲವು ಕಾರ್ಯಕ್ರಮಗಳನ್ನು ಹಾಕಿಕೊಳ್ಳಲಗಿದ್ದು. ಗುಳೇದಗುಡ್ಡ ನಗರ ಕಳೆದ ಒಂದು ತಿಂಗಳಿನಿಂದ ಇಲ್ಲಿಯವರಿಗೆ ನವವದುವಿನಂತೆ ಶೃಂಗಾರಗೊಂಡಿದೆ.