ಮೃತ್ಯುಂಜಯ ಮಟ್ಟಿ ಅವರಿಗೆ 60ನೇಯ ಹುಟ್ಟುಹಬ್ಬದ ಸಂಭ್ರಮ
Mrityunjaya Matti celebrates his 60th birthday
ಹುಬ್ಬಳ್ಳಿ 28 : ಹೊರಕೇರಿ ಮಾಸ್ತರ ಶಿಕ್ಷಣ ಪ್ರತಿಷ್ಠಾನ, ರಾಣಿಚನ್ನಮ್ಮ ಪರಿಸರ ಸೇವಾ ಸಮಿತಿಯ, ಕನ್ನಡ ಸಾಹಿತ್ಯ ಪರಿಷತ್ತು, ಕೆಎಸ್‌ಆರ್ಟಿಸಿ ಕ್ರೀಯಾ ಸಮಿತಿ, ಚುಟುಕು ಸಾಹಿತ್ಯ ಪರಿಷತ್ತು, ಬಸವ ಪರಿಸರ ಸಂರಕ್ಷಣಾ ಸಮಿತಿ ಸೇರಿದಂತೆ ಇನ್ನೂ ಹಲವು ಸಂಘಟನೆಗಳಲ್ಲಿ ಪದಾಧಿಕಾರಿಗಳಾಗಿ ಸೇವೆ ಸಲ್ಲಿಸುತ್ತಿರುವ ಮೃತ್ಯುಂಜಯ ಮಟ್ಟಿ ಅವರು 60ನೆಯ ಹುಟ್ಟುಹಬ್ಬದ ಸಂಭ್ರಮದ ಶುಭ ಸಂದರ್ಭದಲ್ಲಿ ಸಾಹಿತ್ಯಿಕ , ದಾರ್ಮಿಕ, ಸಾಮಾಜಿಕ ಸೇವಾ ಕಾರ್ಯಗಳಲ್ಲಿ ನಿರಂತರವಾಗಿ ತೊಡಗಿಸಿಕೊಂಡಿರುವ ಬಸವಾಭಿಮಾನಿಗಳು, ಸಮಾಜದ ಮುಖಂಡರು, ಬಂಧುಗಳು, ಆತ್ಮೀಯರಾದ ಮೃತ್ಯುಂಜಯ ಮಟ್ಟಿ ಅವರಿಗೆ ಹೊರಕೇರಿ ಮಾಸ್ತರ ಶಿಕ್ಷಣ ಪ್ರತಿಷ್ಠಾನ, ರಾಣಿಚನ್ನಮ್ಮ ಪರಿಸರ ಸೇವಾ ಸಮಿತಿಯ, ಬಸವ ಪರಿಸರ ಸಂರಕ್ಷಣಾ ಸಮಿತಿಯ ವತಿಯಿಂದ ಶಾಲು , ಗ್ರಂಥ ನೀಡಿ, ಮಾಲಾರೆ್ಣ ಮಾಡಿ ಗೌರವ ಪೂರ್ವಕವಾಗಿ ಆತ್ಮೀಯತೆಯಿಂದ ಪ್ರೀತಿ, ಹೃದಯ ಸ್ಪರ್ಶಿಯಾಗಿ. ಸನ್ಮಾನಿಸಲಾಯಿತು.
ಪ್ರೀತಿಯಿಂದ ಜನ್ಮದಿನದ ಶುಭಾಶಯಗಳನ್ನು ಕೋರಿದರು. ಪ್ರೀತಿಯ ಮೃತ್ಯುಂಜಯ ಅವರಿಗೆ ದೇವರು ಉತ್ತಮ ಆರೋಗ್ಯ ನೀಡಿ, ಧಾರ್ಮಿಕ , ಸಾಮಾಜಿಕ ಹಾಗೂ ಸಾಹಿತ್ಯ ವಲಯದಲ್ಲಿ ಸೇವೆ ಸಲ್ಲಿಸಲು ಆಶೀರ್ವಾದ ದಯಪಾಲಿಸಲಿ ಎಂದು ಪ್ರಾರ್ಥಿಸಿದ್ದಾರೆ. ಸುಜಯ್ ಸುರೇಶ್ ಹೊರಕೇರಿ, ಸೋಹನ್ ಸುರೇಶ್ ಹೊರಕೇರಿ, ರಾಣಿಚನ್ನಮ್ಮ ಪರಿಸರ ಸೇವಾ ಸಮಿತಿಯ ಕಾರ್ಯದರ್ಶಿ, ಬಸವ ಪರಿಸರ ಸಂರಕ್ಷಣಾ ಸಮಿತಿಯ ಕಾರ್ಯದರ್ಶಿ , ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿಯ ಜಿಲ್ಲಾ ಘಟಕದ ಉಪಾಧ್ಯಕ್ಷ, ಕರ್ನಾಟಕ ವಚನ ಸಾಹಿತ್ಯ ಪರಿಷತ್ನ ಜಿಲ್ಲಾ ಘಟಕದ ಕಾರ್ಯಾಧ್ಯಕ್ಷ, ಹೊರಕೇರಿ ಮಾಸ್ತರ ಶಿಕ್ಷಣ ಪ್ರತಿಷ್ಠಾನ ಟ್ರಸ್ಟಿ, ಗ್ರಂಥಪಾಲಕ ಡಾ. ಸುರೇಶ ಡಿ. ಹೊರಕೇರಿ, ಡಾ. ಬಸವಕುಮಾರ ತಲವಾಯಿ, ಅಶೋಕ್, ಮುಂತಾದವರು ಇದ್ದರು.
ವಿದ್ಯಾನಗರದ ರಾಜೀವನಗರದ ರಸ್ತೆಯಲ್ಲಿರುವ ಶ್ರಿ ಕೃಷ್ಣ ಭವನ ಹೋಟೆಲ್‌ನಲ್ಲಿ ಸನ್ಮಾನ ಕಾರ್ಯಕ್ರಮ ನಡೆಯಿತು. ಈ ಹೋಟೆಲಿನಲ್ಲಿ ಒಂದು ವಿಶೇಷತೆ ಎದ್ದು ಕಾಣುತ್ತದೆ ಅದೇನೆಂದರೆ, ಆಹಾರದಲ್ಲಿ ಕೃತಕ ಬಣ್ಣಗಳನ್ನು ಬಳಸುವುದು ನಿಷೇಧಿಸಿದ್ದಾರೆ. ಒಂದು ಬೋರ್ಡು ಸಹಾ ಹಾಕಲಾಗಿದೆ. ಬೋರ್ಡ್ನಲಿ, ಗ್ರಾಹಕರ ಯೋಗಕ್ಷೇಮಕ್ಕೆ ಆದ್ಯತೆ ನೀಡುವ ಈ ಸಂಸ್ಥೆಯು ಕೃತಕ ಬಣ್ಣಗಳು, ಸುವಾಸನೆಗಳನ್ನೂ ಮತ್ತು ಇತರೆ ಸೇರೆ್ಡಗಳನ್ನು ಪ್ರಜ್ಞಾಪೂರ್ವಕವಾಗಿ ತಪ್ಪಿಸುತ್ತದೆ. ಎಂದು ಬರೆಸಲಾಗಿದೆ. ಶ್ರಿ ಕೃಷ್ಣ ಭವನ ಹೋಟೆಲ್ ಮಾಲೀಕರಾದ ಪ್ರಸನ್ನ ಶೆಟ್ಟಿ ಅವರಿಗೆ ಹೊರಕೇರಿ ಮಾಸ್ತರ ಶಿಕ್ಷಣ ಪ್ರತಿಷ್ಠಾನ, ರಾಣಿಚನ್ನಮ್ಮ ಪರಿಸರ ಸೇವಾ ಸಮಿತಿಯ,
ಬಸವ ಪರಿಸರ ಸಂರಕ್ಷಣಾ ಸಮಿತಿಯ ವತಿಯಿಂದ ಗೌರವಪೂರಕವಾಗಿ ಅಭಿನಂದಿಸಿದರು. ಅವರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಲಾಯಿತು. ಎಲ್ಲ ಹೋಟೆಲ್ ಮಾಲೀಕರು ಇಂತಹ ತೀರ್ಮಾನ ಕೈಗೊಳ್ಳಬೇಕು ರಾಣಿಚನ್ನಮ್ಮ ಪರಿಸರ ಸೇವಾ ಸಮಿತಿಯ ಕಾರ್ಯದರ್ಶಿ, ಬಸವ ಪರಿಸರ ಸಂರಕ್ಷಣಾ ಸಮಿತಿಯ ಕಾರ್ಯದರ್ಶಿ , ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿಯ ಜಿಲ್ಲಾ ಘಟಕದ ಉಪಾಧ್ಯಕ್ಷ, ಕರ್ನಾಟಕ ವಚನ ಸಾಹಿತ್ಯ ಪರಿಷತ್ನ ಜಿಲ್ಲಾ ಘಟಕದ ಕಾರ್ಯಾಧ್ಯಕ್ಷ, ಹೊರಕೇರಿ ಮಾಸ್ತರ ಶಿಕ್ಷಣ ಪ್ರತಿಷ್ಠಾನ ಟ್ರಸ್ಟಿ, ಗ್ರಂಥಪಾಲಕ ಡಾ. ಸುರೇಶ ಡಿ. ಹೊರಕೇರಿ ಅವರು ವಿನಂತಿಸಿದ್ದಾರೆ.
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ
ಡಿಸಿಸಿ ಬ್ಯಾಂಕಿನ 7 ನಿರ್ದೇಶಕರನ್ನು ಅನರ್ಹ ಮಾಡಿ: ಆರ್.ಬಿಐಗೆ ಗಡಾದ ಪತ್ರ, ಇಲ್ಲವಾದಲ್ಲಿ ಕಾನೂನು ಹೋರಾಟ 