ಜನರು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರವಾಗುವಂತೆ ಸೂಚನೆ: ಸುನೀಲ್ ಕುಮಾರ್

ಕೊಪ್ಪಳ 10: ತುಂಗಭದ್ರ ಜಲಾಶಯದಿಂದ ಸುಮಾರು 25000 ಕ್ಯೂಸೆಕ್ಸ್ ಹೆಚ್ಚುವರಿ ನೀರನ್ನು ಹೊರಬಿಡಲಾಗುತ್ತಿದ್ದು, ಕೊಪ್ಪಳ ಜಿಲ್ಲೆಯಲ್ಲಿ ತುಂಗಭದ್ರ ನದಿ ಪಾತ್ರದಲ್ಲಿ ಬರುವ ನಗರ/ ಗ್ರಾಮದ ಜನರುಗಳು ತಮ್ಮ ಜನ ಮತ್ತು ಜಾನುವಾರುಗಳೊಂದಿಗೆ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತವಾಗುವಂತೆ ಜಿಲ್ಲಾಧಿಕಾರಿ ಪಿ.ಸುನೀಲ್ ಕುಮಾರ್ ಅವರು ತಿಳಿಸಿದ್ದಾರೆ.  

ತುಂಗಭದ್ರ ಜಲಾಶಯದಲ್ಲಿ ಆಗಸ್ಟ್. 10 ರಂದು ಬೆಳಿಗ್ಗೆ 8 ಗಂಟೆಗೆ ಜಲಾಶಯದ ಮಟ್ಟ 1626.08 ಅಡಿಗಳಷ್ಟು, ಸಾಮಥ್ರ್ಯ 76.377 ಟಿ.ಎಂ.ಸಿ, ಒಳಹರಿವು 1,84,012 ಕ್ಯೂಸೆಕ್ಸ್ ಹಾಗೂ ಹೊರಹರಿವು 2522 ಕ್ಯೂಸೆಕ್ಸ್ ಆಗಿತ್ತು.  ಆದರೆ ತುಂಗಭದ್ರ ಜಲಾನಯನ ಪ್ರದೇಶದಲ್ಲಿ ಅತಿ ಹೆಚ್ಚು ಮಳೆಯಾಗುತ್ತಿರುವುದರಿಂದ ಕೇಂದ್ರ ಜಲ ಆಯೋಗ ನೀಡಿರುವ ಒಳಹರಿವಿನ ಗೇಜನ ಪ್ರಮಾಣದಂತೆ ಹರಳಹಳ್ಳಿ ಗೇಜನಿಂದ 1,69,512 ಕ್ಯೂಸೆಕ್ಸ್ ಮತ್ತು ಮರೋಳು ಗೇಜನಿಂದ 56,504 ಕ್ಯೂಸೆಕ್ಸ್ ಒಟ್ಟಾರೆ ತುಂಗಭದ್ರ ಜಲಾಶಯಕ್ಕೆ 2,26,016 ಕ್ಯೂಸೆಕ್ಸ್ ಒಳಹರಿವು ಇರುತ್ತದೆ.  

ತುಂಗಭದ್ರ ಜಲಾಶಯದ ಆಪರೇಶನ್ ಷೆಡ್ಯೂಲ್ನ ಪ್ರಕಾರ ಕೇಂದ್ರ ಜಲ ಆಯೋಗದ ನೀರಿನ ಗೇಜನ ಪ್ರಮಾಣದಂತೆ ಒಟ್ಟಾರೆ ತುಂಗಭದ್ರ ಜಲಾಶಯಕ್ಕೆ 2,26,016 ಕ್ಯೂಸೆಕ್ಸ್ ಒಳಹರಿವು ಇರುವುದರಿಂದ ಜಲಾಶಯದಿಂದ ಇಂದು ಮದ್ಯಾಹ್ನ 3 ಗಂಟೆಗೆ ಸುಮಾರು 25000 ಕ್ಯೂಸೆಕ್ಸ್ ಹೆಚ್ಚುವರಿ ನೀರನ್ನು ಹೊರಬಿಡಲಾಗುತ್ತಿದೆ.  ಹೊರಹರಿವಿನ ಪ್ರಮಾಣ ಇನ್ನು ಹೆಚ್ಚಾಗುವ ಸಾಧ್ಯತೆ ಇರುವುದರಿಂದ, ಕೊಪ್ಪಳ ಜಿಲ್ಲೆಯಲ್ಲಿ ತುಂಗಭದ್ರ ನದಿ ಪಾತ್ರದಲ್ಲಿ ಬರುವ ನಗರ/ ಗ್ರಾಮದ ಜನರುಗಳಿಗೆ ತಮ್ಮ ಜನ ಮತ್ತು ಜಾನುವಾರುಗಳೊಂದಿಗೆ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತವಾಗುವಂತೆ ಹಾಗೂ ನದಿಯ ಹತ್ತಿರ ಯಾವುದೇ ಕಾರಣಕ್ಕೆ ಹೋಗದಂತೆ ಈ ಮೂಲಕ ಕೋರಲಾಗಿದೆ.  ಒಂದು ವೇಳೆ ಏನಾದರು ಸಮಸ್ಯೆ ಉಂಟಾದರೆ ಕೂಡಲೇ ಸಾರ್ವಜನಿಕರು ಜಿಲ್ಲಾಧಿಕಾರಿಗಳ ಕಛೇರಿ ದೂ.ಸಂ. 08539-225001, ತಹಶೀಲ್ದಾರರ ಕಚೇರಿ ಕೊಪ್ಪಳ; 08539-220381, ಗಂಗಾವತಿ; 08539-220929 ಹಾಗೂ ಕಾರಟಗಿ; 7975337817, ಈ    ಸಹಾಯವಾಣಿಗೆ ದೂರು ನೀಡಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.