ಮೂಲಭೂತ ಹಕ್ಕುಗಳನ್ನು ಈಡೇರಿಸುವಂತೆ ಮನೆಯಿಂದಲೇ ಚಳುವಳಿ

ಲೋಕದರ್ಶನವರದಿ

ಹಗರಿಬೊಮ್ಮನಹಳ್ಳಿ.ಎ.21 : ಕೋರೋನಾ ವೈರಸ್ ನಿಯಂತ್ರಣದಲ್ಲಿ ತ್ಮ ಪ್ರಾಣವನ್ನು ಲೆಕ್ಕಿಸದೇ ಕಾರ್ಯ ನಿರ್ವಹಿಸುತ್ತಿರುವ ಪ್ರತಿಯೊಬ್ಬರಿಗೂ ರಕ್ಷಣಾ ಕಿಟ್ ನೀಡಬೇಕು ಹಾಗೂ ಮೂಲಭೂತ ಹಕ್ಕುಗಳನ್ನು ಈಡೇರಿಸುವಂತೆ ಜನವಾದಿ ಸಂಘಟನೆಯಿಂದ ಮಂಗಳವಾರ ಮನೆಯಿಂದಲೇ ಚಳುವಳಿ ಮಾಡಿದರು.

ಬೇಡಿಕೆ ಈಡೇರಿಕೆಯ ಚಳುವಳಿಯಲ್ಲಿ ತಾಲೂಕಾಧ್ಯಕ್ಷೆ ಜಿ.ರತ್ನಮ್ಮ ಮಾತನಾಡಿ ಅಗತ್ಯವಿರುವ ಕುಟುಂಬಗಳಿಗೆ 7500ಹಣ ವಗರ್ಾವಣೆಯಾಗಬೇಕು, ಎಪಿಎಲ್, ಬಿಪಿಎಲ್ ಎಂಬ ತಾರತಮ್ಯವಿಲ್ಲದೇ ಉಚಿತವಾಗಿ ಪಡಿತರ ಮತ್ತು ಅಡುಗೆ ಅನಿಲ ಸಿಲಿಂಡರ್, ಔಷಧಿಗಳು ಮತ್ತಿತರ ಅಗತ್ಯ ವಸ್ತುಗಳನ್ನು ತ್ವರಿತವಾಗಿ ಒದಗಿಸಬೇಕು, ಅಗತ್ಯ ವಸ್ತುಗಳ ಬೆಲೆ ಏರಿಕೆಗೆ ಕಡಿವಾಣ ಹಾಕಬೇಕು.

       ದೌರ್ಜನ್ಯಕೊಳಗಾದ ಮಹಿಳೆಯರಿಗೆ ನೆರವು ಒದಗಿಸಬೇಕು,ಕೌಟುಂಬಿಕ ದೌರ್ಜನ್ಯಕ್ಕೊಳಗಾದ ಮಹಿಳೆಯರಿಗೆ ಪಯರ್ಾಯ ವಸತಿ, ಜೀವನೋಪಾಯಕ್ಕೆ ಆಥರ್ಿಕ ನೆರೆವು ಒದಗಿಸಬೇಕು ಹಾಗೂ ಕೋವಿಡ್19 ವೈರಸ್ ನಿಯಂತ್ರಣದಲ್ಲಿ ತಮ್ಮ ಪ್ರಾಣವನ್ನು ಲೆಕ್ಕಿಸದೇ ಸೇವೆಗಯ್ಯುತ್ತಿರುವ ನಸರ್್, ವೈದ್ಯಕೀಯ ಸಿಬ್ಬಂದಿಗಳು, ಪೌರ ಕಾಮರ್ಿಕರು, ಆಶಾ ಅಂಗನವಾಡಿ ನೌಕರರಿಗೆ ಉತ್ತಮ ಗುಣಮಟ್ಟದ ಸುರಕ್ಷಾ ಕಿಟ್ಗಳನ್ನು ತಕ್ಷಣ ಒದಗಿಸಬೇಕೆಂದು ಮನೆಯಿಂದಲೇ ರಾಷ್ಟ್ರವ್ಯಾಪಿ ಚಳುವಳಿ ಮುಂದಗಿದ್ದೆವೆ ಎಂದರು.ಹಾಗೂ ಕೋರೋನಾ ವೈರಸ್ ನಿಯಂತ್ರಣಕ್ಕಾಗಿ ಅನಗತ್ಯವಾಗಿ ಯಾರು ಮನೆಯಿಂದ ಹೊರಗಡೆ ಬಾರದೇ ಮನೆಯಲ್ಲಿ ಇದ್ದು ಇದರ ವಿರುಧ್ದ ಹೋರಾಡುವಂತೆ ಕರೆಯನ್ನು ನೀಡಿದರು.

ಇ ಸಂಧರ್ಭದಲ್ಲಿ ಜಿಲ್ಲಾ ಕಾರ್ಯದಶರ್ಿ ಜಿ.ಸರೋಜ, ಸಹ ಕಾರ್ಯದಶರ್ಿ ಎಸ್.ಹುಲಿಗೆಮ್ಮ,ಘಟಕಾಧ್ಯಕ್ಷೆ ಶಮಿಂ ಬಾನು, ಪಾಯಲ್ ಬಾನು, ಮುಂತಾಜ್ ಬಾನು ಸೇರಿದಂತೆ ಇತರಿದ್ದರು.