ಲೋಕದರ್ಶನವರದಿ
ರಾಣೇಬೆನ್ನೂರು: ನಗರದ ಜನನೀಬೀಡ ಪ್ರದೇಶವಾದ ಬಸ್ಟ್ಯಾಂಡ್ ರಸ್ತೆಯೂ ಸೇರಿದಂತೆ ವಿವಿಧ ಓಣಿ, ಗಲ್ಲಿಗಳಲ್ಲಿ ಬಹುಪ್ರಮಾಣದಲ್ಲಿ ಕೋಳಿ ಮಾಂಸ ಮಾರಾಟ ಮತ್ತು ದನದ ಮಾಂಸ ಮಾರಾಟದಂಗಡಿಗಳು ಎಲ್ಲೆಡೆಯೂ ಕಂಡುಬರುತ್ತಿದ್ದು, ಈ ಅಂಗಡಿಗಳಿಂದ ಪರಿಸರದಲ್ಲಿ ಕಲುಷಿತವಾಗಿ ಸಂಪೂರ್ಣ ಪರಿಸರ ನಾಶವಾಗುತ್ತಲಿದೆ. ನಗರಸಭೆ ಕೂಡಲೇ ಎಚ್ಚೆತ್ತುಕೊಂಡು ಅವುಗಳನ್ನು ತೆರವುಗೊಳಿಸಲು ಕ್ರಮಕೈಗೊಳ್ಳುವಂತೆ ಆಗ್ರಹಸಿ ನಗರಸಭಾ ಪೌರಾಯುಕ್ತರಿಗೆ ಮನವಿ ಸಲ್ಲಿಸಿ ಒತ್ತಾಯಿಸಿದರು.
ಸೋಮವಾರ ಮುಂಜಾನೆ ವಿವಿಧ ಸಂಘಟನೆಗಳ ಮುಖಂಡರು ನಗಸರಭೆ ಮುಂಭಾಗದಲ್ಲಿ ಜಮಾವಣೆಗೊಂಡು ಈ ಕುರಿತು ಸ್ಥಳೀಯ ಜನರಲ್ಲಿ ಜನ-ಜಾಗೃತಿಗೊಳಿಸಿ ಪೌರಾಯುಕ್ತ ಡಾ|| ಮಹಾಂತೇಶ ಅವರಿಗೆ ಸಾರ್ವಜನಿಕವಾಗಿ ತಮ್ಮ ಮನವಿ ಸಲ್ಲಿಸಿ ಕೂಡಲೇಕ್ರಮಕ್ಕೆ ಆಗ್ರಹಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಭಾರತಿ ಜಂಬಿಗಿ ಮತ್ತು ಹನುಮಂತಪ್ಪ ಕಬ್ಬಾರ ಅವರು ಪ್ರಧಾನ ಅಂಚೆ ಕಛೇರಿಯಿಂದ ನಿತ್ಯವೂ ಹತ್ತಾರು ಸಾವಿರ ನಾಗರೀಕರು ಮತ್ತು ವಿವಿಧ ಶಾಲಾ ಕಾಲೇಜುಗಳಿಗೆ ತೆರಳುವ ಸಾವಿರಾರು ವಿದ್ಯಾಥರ್ಿಗಳು ಇಲ್ಲಿಂದ ಬಸ್ಟ್ಯಾಂಡ್ ವರೆಗೆ ಸಾಗಬೇಕಾಗುತ್ತದೆ.
ಮೇಡ್ಲೇರಿ ರಸ್ತೆ ಸಾಗುವ ಮಾರ್ಗ ಮಧ್ಯದಲ್ಲಿ ಶ್ರೀ ಈಶ್ವರ ದೇವಸ್ಥಾನ ಧಾರ್ಮಿಕ ಜಾಗೃತಿ ಸ್ಥಾನವಿದೆ. ಅದರ ಎದುರಗಡೆ ಹತ್ತಾರು ಕೋಳಿ ಮಾಂಸದ ಅಂಗಡಿಗಳಿವೆ. ಇಲ್ಲಿ ಹಲಾಲ್ ಮಾಡಿದ ಕೋಳಿಗಳು ತೂಗಿ ಬಿಡುವುದರಿಂದ ಮತ್ತು ಒಳಗಡೆ ಅದರ ಗಲೀಜಿನಿಂದ ದುವರ್ಾಸನೆ ಬೀರುತ್ತದೆ. ಇದರ ಪರಿಣಾಮ ಸಾರ್ವಜನಿಕರ ಮೇಲೆ ಗಂಭೀರವಾಗಿ ಬೀಳುತ್ತಲಿದೆ. ರಸ್ತೆಗೆ ಬಿದ್ದರೆ ಅಂಗಡಿಗಳು ದಾಟುವವರೆಗೂ ಮೂಗು ಮುಚ್ಚಿಕೊಂಡೆ ಸಾಗಬೇಕು.
ಅಲ್ಲದೇ, ಮಾನಸಿಕ ವೇದನೆ ಅನುಭವಿಸಬೇಕು ಇದಕ್ಕೆ ಪಯರ್ಾಯ ವ್ಯವಸ್ಥೆ ಮಾಡಲು ಸಾಧ್ಯವಾಗುವುದಿಲ್ಲವೇ? ಎಂದು ಅವರು ಪ್ರಶ್ನಿಸಿದ್ದಾರೆ. ಕೂಡಲೇ ಕ್ರಮ ಕೈಗೊಂಡು ಪಯರ್ಾಯ ವ್ಯವಸ್ಥೆ ಕಲ್ಪಿಸಿ ಅಂಗಡಿಗಳನ್ನು ಸ್ಥಳಾಂತರಗೊಳಿಸಲು ಮುಂದಾಗದೇ ಇದ್ದಲ್ಲಿ ಅಗಸ್ಟ್ 15ರವಳಗಾಗಿ 13 ರಂದು ಮೇಡ್ಲೇರಿ ರಸ್ತೆ, ಚೌಡೇಶ್ವರಿ ದೇವಿಯ ಮಹಾದ್ವಾರದ ಮುಂಭಾಗದಲ್ಲಿ ವಿವಿಧ ಸಂಘಟನೆಯ ಮುಖಂಡರು, ಸಾರ್ವಜನಿಕರು ಧರಣಿ ಆರಂಭಿಸಿ ನಿರಂತರ ಉಪವಾಸ ಸತ್ಯಾಗ್ರಹ ನಡೆಸಿ ರಾಣೇಬೆನ್ನೂರು ಬಂದ್ಗೆ ಕರೆನೀಡಲಾಗುವುದು ಎಂದು ಪ್ರತಿಭಟನಾ ನಿರತರು ಎಚ್ಚರಿಸಿದರು.