ಶಾಂತಿಯುತವಾಗಿ ವಾಹನ ಚಲಿಸಿ: ಶಿವಾನಂದ ಮಗದುಮ್ಮ

ಲೋಕದರ್ಶನ ವರದಿ

ಬೆಳಗಾವಿ, 6:  ವಾಹನ ಸಂಚಾರಕರು ದ್ವಿಚಕ್ರ, ದೊಡ್ಡ ವಾಹನಗಳನ್ನು ನವಿಕರಣಗೊಳ್ಳಿಸಿ, ಸರಿಯಾದ ದಾಖಲಾತಿಗಳನ್ನು  ಸಿದ್ದಪಡಿಸಿ ಭದ್ರವಾಗಿಟ್ಟಕೊಳ್ಳಬೇಕು. ಸಂಚಾರಕ್ಕೆದಟ್ಟನೆಯಾಗದರೀತಿಯಲ್ಲಿ ವಾಹನಗಳನ್ನು ಚಲಿಸಬೇಕೆಂದು ಸಾರಿಗೆ ಪ್ರಾದೇಶಿಕ ಆಯುಕ್ತರಾದ ಶಿವಾನಂದ ಮಗದುಮ್ಮ ಹೇಳಿದರು. 

ನಗರದ ಭರತೇಶ ಮಹಾವಿದ್ಯಾಲಯದ ಸಭಾಭವನದಲ್ಲಿಗುರುವಾರ 6 ರಂದು  ಸಾರಿಗೆ ಇಲಾಖೆ ಮತ್ತು ಸಾರ್ವಜನಿಕ ಶಿಕ್ಷಣ ಇಲಾಖೆಯ ವತಿಯಿಂದ ಆಯೋಜಿಸಲಾಗಿದ್ದ ವಾಯು ಮಾಲಿನ್ಯ ಮಾಸಾಚರಣೆ, ಶಾಲಾ ವಾಹನ ಚಾಲಕರಿಗೆಅರಿವು ಮೂಡಿಸುವತರಬೇತಿ ಹಾಗೂ ಶಾಲಾ ಮಕ್ಕಳಿಗೆ ವಿವಿಧ ಸ್ಪದರ್ಾ ಕಾರ್ಯಕ್ರಮಗಳಲ್ಲಿ ವಿಜೇತರಿಗೆ ಬಹುಮಾನ ವಿತರಣೆ ಮತ್ತು ಸಮಾರೋಪ ಸಮಾರಂಭದಲ್ಲಿ ಮಾತನಾಡಿದಅವರು.

ನಗರದಲ್ಲಿ ವಾಹನಗಳ ಸರಿಯಾದ ದಾಖಲಾತಿಗಳನ್ನು ನೀಡದಿದ್ದರೆ ಕಾನೂನ ಕ್ರಮಜರುಗಿಸಲಾಗುವುದು. ಶಾಂತಿಯುತವಾಗಿ  ವಾಹನಗಳನ್ನು ಚಲಿಸಬೇಕು ನಗರದಲ್ಲಿಯಾಗುವ ಅಪಘಾತಗಳನ್ನು ತಪ್ಪಿಸಲುಉತ್ತಮ ರಸ್ತೆಗಳನ್ನು ನಿಮರ್ಾಣಮಾಡಲಾಗಿದೆ. ಟ್ರಾಪಿಕ್ ವೇಳೆಯಲ್ಲಿ ನಿಮಯ ಪಾಲಿಸಿ ಸಂಚಾರ ಮಾಡುವುದುಅಗತ್ಯವಾಗಿದೆ, ಎಲ್ಲಂದರಲ್ಲಿ ವಾಹನಗಳನ್ನು ನಿಲ್ಲುವದರಿಂದಟ್ರಾಫಿಕ್ಕಿರಿಕರಿಯಾಗುವ ಸಾದ್ಯತೇ ಹೇಚ್ಚು ಅದಕ್ಕಾಗಿ ಸಾರ್ವಜನಿಕರು ಸಹಕರಿಸಿ ತೊಂದರೆಯಾಗದರೀತಿಯಲ್ಲಿ ವಾಹನಗಳನ್ನು ಕಾಪಾಡಿಕೊಳ್ಳಬೇಕು.

ಶಾಲಾ-ಕಾಲೇಜ ಪ್ರಾಚಾರ್ಯ ಹಾಗೂ ಪಾಲಕರು ವಿದ್ಯಾಥರ್ಿಗಳ ಬಗ್ಗೆ ಹೆಚ್ಚಿನ ಗಮನ ಹರಿಸಿ, ವಿದ್ಯಾಥರ್ಿಗಳು ಶಾಲೆಗಳತ್ತ ಹೋಗುವಾಗ ಸಮಸ್ಯೆಗಳು ಎದುರಾಗುತ್ತಿವೆಇದಕ್ಕೆಲ್ಲ ಎಡೆಮಾಡಿಕೊಡದೇ ವಿದ್ಯಾಥರ್ಿಗಳ ಬಗ್ಗೆ ಜಾಗೃತ ವಹಿಸಬೇಕು. ಅನುಮಾನಗಳು ಕಂಡು ಬಂದಲ್ಲಿ ಹತ್ತಿರ ಪೊಲೀಸ್ಠಾಣೆಯಲ್ಲಿದೂರುದಾಖಲಿಸಬೇಕೆಂದು ಕಿವಿಮಾತು 

ಹೇಳಿದರು.

ಕ್ಷೇತ್ರ ಸಮನ್ವಯಅಧಿಕಾರಿ ಶಿಕ್ಷಣ ಇಲಾಖೆಯರಾಜಶೇಖರ ಚಳಗೇರಿ ಮಾತನಾಡಿ, ಸಾರ್ವಜನಕರು ವಾಹನಗಳಿಗೆ ಉತ್ತಮ ಪೇಟ್ರೋಲ್ ಬಳಸದೇ ಸೀಮೆಎಣ್ಣೆಯನ್ನು ಬಳಸಲಾಗುತ್ತಿದೆ ಇದರಿಂದ ವಾಹನಗಳು ವಿಷ ಅನಿಲವನ್ನು ಉಗುಳುತ್ತಿದೆ. ಜಾಗೃತರಾಗದಿದ್ದರೆ ಪರಿಸರ ವಿನಾಶಕ್ಕೆ ಜನಸಾಮನ್ಯರು ಮೊದಲುಕಾರಣರಾಗುತ್ತಾರೆಎಂದರು.

ರಾಜುದೊಡ್ಡಣ್ಣವರ ಮಾತನಾಡಿ,  ವಾಹನಗಳ ಸಂಚಾರದಿಂದ  ವಾಯುಮಾಲಿನ್ಯ ವೀಪರಿತವಾಗಿ ಹಾಳಾಗುತ್ತಿದೆ. ಪರಿಸರ ಮೇಲಾಗುವ ದುಷ್ಪಪರಿಣಾಮದಿಂದ ಮಾನವನ ಜೀವಕ್ಕೆಕುತ್ತು ಬರುತ್ತಿದೆ. ಪರಿಸರವನ್ನು ಕಾಪಾಡಿಕೊಳ್ಳವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಪರಿಸರಕ್ಕೆ ಕಂಟಕ ಎದುರಾದರೇಕ್ಯಾನ್ಸರ್, ಹೃದಯಘಾತ, ಚರ್ಮಕಾಯಿಲೆ ವಿವಿಧ ರೋಗಗಳನ್ನು ಬರಲಾಂರಭಿಸುತ್ತೆ. ಗಾಳಿಯಲ್ಲಿ ವಿಷಕಾರಿ ಅನಿಲ ಬೇರ್ಪಡುತ್ತಿದೆಇದರಿಂದಾಗಿ ಉಸಿರಾಟಕ್ಕೆ ತೊಂದರೆಯಾಗುತ್ತದೆಎಂದು ವಿಷಾಧಿಸಿದರು. 

ಈ ಸಂದರ್ಭಲ್ಲಿಎಸ್.ಕೆ. ಹುಗ್ಗಿ, ಅಶಪಾನ್, ಎಸ್ ಅಕ್ಕಿ ಉಪಸ್ಥಿತರಿದ್ದರು. ಭಾರತಿ ನರಸನ್ನವರ ನಿರೂಪಿಸಿದರು ಶಿವಾನಂದ ಹಿತ್ತಲಮನಿ. ವಂದಿಸಿದರು.