ಲೋಕದರ್ಶನ ವರದಿ
ಕೊಪ್ಪಳ 25: ಪ್ಲಾಸ್ಟಿಕ್ ನಂತಹ ತ್ಯಾಜ್ಯ ವಸ್ತುಗಳಿಂದ ಪರಿಸರದ ಮಾಲಿನ್ಯ ಉಂಟಾಗುತ್ತಿದ್ದು. ಪರಿಸರ ಹಾಳು ಮಾಡುವ ಪ್ಲಾಸ್ಟಿಕ್ ಮುಂತಾದ ತ್ಯಾಜ್ಯ ವಸ್ತುಗಳ ಬಳಕೆ ಮಾಡದಂತೆ ಶಿಕ್ಷಕರು ಹಾಗೂ ಪೋಷಕರು ಮಕ್ಕಳಲ್ಲಿ ಜಾಗೃತಿ ಮೂಡಿಸಿ ಅವರಿಗೆ ಪರಿಸರದ ರಕ್ಷಣೆಯ ಬಗ್ಗೆ ಪ್ರೇರಣೆ ನೀಡಬೇಕು ಎಂದು ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ನ ರಾಜ್ಯ ಆಯುಕ್ತರಾದ ಪಿ.ಜಿ.ಆರ್.ಸಿಂದ್ಯಾ ಹೇಳಿದರು.
ಅವರು ನಗರದ ಮಾಸ್ತಿ ಪಬ್ಲಿಕ್ ಶಾಲೆಯಲ್ಲಿ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ನ ಘಟಕದ ವತಿಯಿಂದ ಹಮ್ಮಿಕೊಂಡಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡುತ್ತ, ಪ್ರಸ್ತುತ ದಿನಮಾನಗಳಲ್ಲಿ ಪರಿಸರದ ಮಲಿನತೆಯು ಹೆಚ್ಚಾಗಿದೆ. ಪರಿಸರದ ಮಾಲಿನ್ಯದಿಂದ ಮಾನವನ್ನು ಅನೇಕ ರೀತಿಯ ತೊಂದರೆಗಳನ್ನು ಅನುಭವಿಸುತ್ತಿದ್ದಾನೆ. ಪರಿಸರದಲ್ಲಿ ವಿಶೇಷವಾಗಿ ಪ್ಲಾಸ್ಟಿಕ್ ನಂತಹ ಅನೇಕ ವಿಷ ವಸ್ತುಗಳು ಮಾಲಿನ್ಯವನ್ನು ಉಂಟುಮಾಡುತ್ತಿವೆ. ಪ್ಲಾಸ್ಟಿಕ್ ಮುಕ್ತ ಸಮಾಜವನ್ನು ನಿಮರ್ಿಸುವಲ್ಲಿ ಶಿಕ್ಷಕರ ಪಾತ್ರ ಬಹಳ ಮಹತ್ವದಾಗಿದೆ. ಶಿಕ್ಷಕರ ಮಾತುಗಳನ್ನು ಮಕ್ಕಳು ಗಂಭೀರವಾಗಿ ಪರಿಗಣಿಸುತ್ತಾರೆ. ಅಲ್ಲದೇ ಅದರಂತೆ ನಡೆದುಕೊಳ್ಳುತ್ತಾರೆ. ಪೋಷಕರು ಸಹ ಮಕ್ಕಳಿಗೆ ಪರಿಸರದ ಮಾಲಿನ್ಯ ಮತ್ತು ಅದರಿಂದ ಆಗುವ ಪರಿಣಾಮಗಳ ಬಗ್ಗೆ ಮನವರಿಕೆಯನ್ನು ಮಾಡಿಕೊಡಬೇಕಿದೆ. ಅಲ್ಲದೇ ಪ್ರತಿಯೊಬ್ಬ ವ್ಯಕ್ತಿಯು ತನ್ನ ಹಕ್ಕುಳನ್ನು ಪಡೆದುಕೊಳ್ಳುವ ನಿಟ್ಟಿನಲ್ಲಿ ಯಾವ ರೀತಿಯಲ್ಲಿ ಹೋರಾಟವನ್ನು ಮಾಡುತ್ತಾನೇಯೋ ಅದೇ ರೀತಿಯಲ್ಲಿ ಅವನು ನಿರ್ವಹಿಸಬೇಕಾದ ಕರ್ತವ್ಯಗಳನ್ನು ಅಷ್ಟೇ ಸರಿಸಮಾನವಾಗಿ ನಿರ್ವಹಿಸಬೇಕು.ಒಂದು ವೇಳೆ ಪರಿಸರವನ್ನು ನಾವು ಸಂಪೂರ್ಣವಾಗಿ ನಾಶ ಮಾಡಿದರೇ ಮನುಕುಲದ ಸಂತತಿಯು ಕೂಡಾ ಉಳಿಯುವುದಿಲ್ಲ ಎಂದು ಹೇಳಿದರು.
ವಿಕಲಚೇತನ ನೌಕರರ ಸಂಘದ ರಾಜ್ಯಾಧ್ಯಕ್ಷರಾದ ಬೀರಪ್ಪ ಅಂಡಗಿ ಚಿಲವಾಡಗಿ ಮಾತನಾಡಿ, ಭಾರತ್ ಸ್ಕೌಟ್ಸ್ ಮತ್ತು ಗೌಡ್ಸ್ ಸಂಸ್ಥೆಯು ಮಕ್ಕಳಲ್ಲಿ ದೇಶದ ಅಭಿಮಾನವನ್ನು ಹೆಚ್ಚು ಮಾಡುವ ಜೊತೆಗೆ ದೇಶದ ಸೇವೆಯನ್ನು ಮಾಡುವ ಬಗೆ ಹಾಗೂ ಶಿಸ್ತನ್ನು ಮೂಡಿಸುವ ಕಾರ್ಯ ಮಾಡುತ್ತಿದೆ. ತರಬೇತಿಯನ್ನು ಪಡೆದ ಶಿಕ್ಷಕರು ತರಬೇತಿಯಲ್ಲಿ ನೀಡಿದ ಜ್ಞಾನವನ್ನು ಮಕ್ಕಳಿಗೆ ಹೇಳಿಕೊಡುವುದರ ಜೊತೆಗೆ ಮಕ್ಕಳಿಗೆ ಪ್ರಾಯೋಗಿಕವಾಗಿ ಮಾಡಿಸಬೇಕು ಅಂದಾಗ ಮಾತ್ರ ಮಕ್ಕಳು ಉತ್ತಮ ರೀತಿಯಲ್ಲಿ ಕಲಿಯಲು ಸಾಧ್ಯವಾಗುತ್ತದೆ. ಜೀವನದಲ್ಲಿ ಶಿಸ್ತಿಗೆ ಬಹಳ ಮಹತ್ವವಿದೆ. ಶಿಸ್ತನ್ನು ಪ್ರತಿಯೊಬ್ಬರು ಕೂಡಾ ಪಾಲಿಸಬೇಕು ಅಂದಾಗ ಮಾತ್ರ ಹಾಕಿಕೊಂಡ ಕಾರ್ಯ ಯಶ್ವಸಿಯಾಗಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಮಾಸ್ತಿ ಶಾಲೆಯ ಸಂಸ್ಥಾಪಕರಾದ ಹುಲುಗಪ್ಪ ಕಟ್ಟಿಮನಿ ಮಾತನಾಡುತ್ತ,ಮಕ್ಕಳ ಪಠ್ಯಕ್ರಮದಲ್ಲಿ ಇರುವ ದೇಶಪ್ರೇಮವನ್ನು ಬೆಳೆಸುವ ಕಾರ್ಯ ಚಟುವಟಿಕೆಗಳ ಜೊತೆಯಲ್ಲಿ ಸೇವಾದಳ, ಸ್ಕೌಟ್ಸ್, ಗೈಡ್ಸ್, ಎನ್.ಸಿ.ಸಿ.ಯಂತಹ ಅನೇಕ ಕಾರ್ಯ ಚಟುವಟಿಕೆಗಳಲ್ಲಿ ಮಕ್ಕಳನ್ನು ತೊಡಗಿಸಿಕೊಳ್ಳಬೇಕು. ಅಂದಾಗ ಮಾತ್ರ ಅದರ ಬಗ್ಗೆ ಹೆಚ್ಚು ಆಸಕ್ತಿ ಬೆಳೆಯಲು ಸಾಧ್ಯವಾಗುತ್ತದೆ. ಶಿಕ್ಷಕರಲ್ಲದೇ ಪಾಲಕರು ಹಾಗೂ ಸಮಾಜದ ಪ್ರತಿಯೊಬ್ಬ ಪ್ರಜೆಯು ಕೂಡಾ ಉತ್ತಮ ಕಾರ್ಯಗಳಲ್ಲಿ ಭಾಗಯಾಗಬೇಕು ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಹಿರಿಯ ವಕೀಲರಾದ ರಾಘವೇಂದ್ರ ಪಾನಘಂಟಿ, ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಆಯುಕ್ತರಾದ ಎಚ್.ಎಂ.ಸಿದ್ರಾಮಸ್ವಾಮಿ,ಸ್ಕೌಟ್ಸ್ ಜಿಲ್ಲಾ ಆಯುಕ್ತರಾದ ಮಲ್ಲಿಕಾಜರ್ುನ ಚೌಕಿಮಠ ಮುಂತಾದವರು ಹಾಜರಿದ್ದರು. ಕಾರ್ಯಕ್ರಮವನ್ನು ಶಾಲೆಯ ಮುಖ್ಯೋಪಾಧ್ಯಾಯರಾದ ಪರಶುರಾಮ ಗಾಳಿ ನಿರೂಪಿಸಿದರು. ಶಿಕ್ಷಕರಾದ ಮುತ್ತುರಾಜ ಬೇಲ್ಲದ ಸ್ವಾಗತಿಸಿ, ಶಿಕ್ಷಕಿ ಶಾಯಿಸ್ತಾಬೇಗಂ ವಂದಿಸಿದರು.