ತರಬೇತಿ ಪಡೆದ ಅಭ್ಯರ್ಥಿಗಳು ಸ್ವಯಂ ಉದ್ಯೋಗ ಕೈಗೊಳ್ಳಲು ಪ್ರೇರೇಪಿಸಿ: ಜಿ.ಪಂನ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ರಘುನಂದನ್

ಕೊಪ್ಪಳ 07: ಆರ್ಸೆಟ್ಇ ಇಂದ ತರಬೇತಿ ಪಡೆದ ಅಭ್ಯರ್ಥಿಗಳಿಗೆ ಸ್ವಯಂ ಉದ್ಯೋಗ ಕೈಗೊಳ್ಳಲು ಮಾರ್ಗದರ್ಶನ ನೀಡಿ, ಬ್ಯಾಂಕ್ ಸಾಲ ಸೌಲಭ್ಯಗಳನ್ನು ಒದಗಿಸಲು ಪ್ರಯತ್ನಿಸಿ ಎಂದು ಜಿ.ಪಂನ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ರಘುನಂದನ್ ಮೂರ್ತಿ  ಹೇಳಿದರು.

ಜಿ.ಪಂನ ಸ್ಥಾಯಿ ಸಮಿತಿ ಸಭಾಂಗಣದಲ್ಲಿ ಎಸ್ಬಿಐನ ಗ್ರಾಮೀಣ ಸ್ವಯಂ ಉದ್ಯೋಗ ತರಬೇತಿ ಸಂಸ್ಥೆ(ಆರ್ಸೆಟ್ಇ) ವತಿಯಿಂದ ಆಯೋಜಿಸಿದ್ದ ಮೂರನೇ ಜಿಲ್ಲಾ ಮಟ್ಟದ ಆರ್ಸೆಟ್ಇ ಸಲಹಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ತರಬೇತಿ ಸಂಸ್ಥೆಯಿಂದ ವಿವಿಧ ಕೌಶಲ್ಯಯುಕ್ತ ಉದ್ಯೋಗಗಳಿಗೆ ತರಬೇತಿ ನೀಡಲಾಗುತ್ತಿದೆ. ಆದರೆ ತರಬೇತಿ ನಂತರ ತರಬೇತಿ ಪಡೆದ ಅಭ್ಯರ್ಥಿಗಳು ಸ್ವಯಂ ಉದ್ಯೋಗ ಆರಂಭಿಸಿದ ಕುರಿತು ದೃಢೀಕರಿಸಿಕೊಳ್ಳಬೇಕು. ಒಂದು ವೇಳೆ ಅಭ್ಯಥರ್ಿಗಳಿಗೆ ಆರ್ಥಿಕ ಸಹಾಯದ ಅಗತ್ಯವಿದ್ದರೆ ಬ್ಯಾಂಕ್ಗಳ ಮೂಲಕ ಸಾಲ ಸೌಲಭ್ಯ ಪಡೆಯುವ ಕ್ರಮಗಳ ಕುರಿತು ತಿಳಿಸಬೇಕು. ಜಿಲ್ಲಾ ವ್ಯಾಪ್ತಿಯಲ್ಲಿ ಅಗತ್ಯವಿರುವ ಕೌಶಲ್ಯಗಳು ಅಥವಾ ಉದ್ಯೋಗದ ವಿಧಗಳು ಮಾತ್ರವಲ್ಲದೆ, ಸಂಸ್ಥೆಯಿಂದ ದೇಶಾದ್ಯಂತ ತರಬೇತಿ ನೀಡಲಾಗುವುದರಿಂದ ಇತರ ರಾಜ್ಯಗಳಲ್ಲಿನ ಸೃಜನಾತ್ಮಕ ಕೌಶಲ್ಯಗಳ ಕುರಿತು ಅರಿತುಕೊಂಡು ಅವುಗಳನ್ನು ಇಲ್ಲಿನ ಅಭ್ಯರ್ಥಿಗಳಿಗೆ ತರಬೇತಿ ನೀಡಲು ಪ್ರಯತ್ನಿಸಿ ಎಂದು ಅವರು ಹೇಳಿದರು.

ಗ್ರಾಮೀಣ ಭಾಗದ ಜನರಿಗೆ ಸಂಸ್ಥೆಯ ಕುರಿತು ಹೆಚ್ಚಿನ ಜಾಗೃತಿ ಮೂಡಿಸಬೇಕು. ಸ್ಥಳೀಯವಾಗಿ ನಡೆಯುವ ಸಭೆಗಳಲ್ಲಿ ಸಂಸ್ಥೆಯಿಂದ ನೀಡಲಾಗುವ ತರಬೇತಿಗಳ ಕುರಿತು ತಿಳುವಳಿಕೆ ನೀಡಬೇಕು. ಲೈಂಗಿಕ ಅಲ್ಪಸಂಖ್ಯಾತರಿಗೆ, ವಿಕಲಚೇತನರಿಗೆ ನೀಡಬಹುದಾದ ತರಬೇತಿಗಳ ಕುರಿತು ಪರಿಶೀಲಿಸಿ, ಆ ಕುರಿತು ಕ್ರಮವಹಿಸಿ ಎಂದು ಅವರು ಹೇಳಿದರು.

ಸಭೆಯಲ್ಲಿ ಆರ್ಸೆಟ್ಇ ಕೊಪ್ಪಳದ ನಿದರ್ೇಶಕರಾದ ವಿ.ಎಸ್.ಪಲ್ಲಾಪುರ ಅವರು 2019-2020ನೇ ಸಾಲಿನ ಆರ್ಥಿಕ ವರ್ಷದ ಸಾಧನೆಗಳ ಕುರಿತು ಅಂಕಿ-ಅಂಶಗಳ ಸಹಿತ ಮಾಹಿತಿ ನೀಡಿದರು. ಇದುವರೆಗೂ ನೀಡಿದ ತರಬೇತಿಗಳ ಪ್ರಗತಿ ಮಾಹಿತಿಯನ್ನು ತಿಳಿಸಿದರು.

ಸಭೆಯಲ್ಲಿ ಲೀಡ್ ಬ್ಯಾಂಕ್ ವ್ಯವಸ್ಥಾಪಕರಾದ ಬಾಬುರಾವ್ ಬೋರಲೆ, ಕೆವಿಐಬಿಯ ವೀರೇಶ, ಜವಳಿ ಮತ್ತು ಕೈಮಗ್ಗ ಇಲಾಖೆಯ ವಸಂತ ಕೆ, ಪಾಲಿಟೆಕ್ನಿಕ್ ಕಾಲೇಜಿನ ವಾದಿರಾಜ, ಬಿಎಐಎಫ್ ಸಂಸ್ಥೆಯ ಎಂ.ಡಿ. ಹಳ್ಳಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.