ಪುಣೆ, ಜೂನ್ 06, ಬಿಜೆಪಿ ಹಿರಿಯ ನಾಯಕಿ ಹಾಗೂ ರೈಲ್ವೆ ಸಚಿವ ಪಿಯೂಷ್ ಗೋಯಲ್ ಅವರ ತಾಯಿ ಚಂದ್ರಕಾಂತ ಗೋಯಲ್ ವಿಧಿವಶರಾಗಿದ್ದಾರೆ. ಅವರಿಗೆ 88 ವರ್ಷ ವಯಸ್ಸಾಗಿತ್ತು. ತಮ್ಮ ತಾಯಿ ಇಡೀ ಜೀವನವನ್ನು ಜನರ ಸೇವೆಗಾಗಿ ಮೀಸಲಿಟ್ಟಿದ್ದರು. ಮತ್ತು ಇತರರಿಗೂ ಅದೇ ರೀತಿ ಮಾಡಲು ಪ್ರೇರಣೆ ನೀಡಿದರು ಎಂದು ಸಚಿವ ಪಿಯೂಷ್ ಗೋಯಲ್ ಟ್ವೀಟ್ ಮಾಡಿದ್ದಾರೆ.ತುರ್ತು ಪರಿಸ್ಥಿತಿಯ ನಂತರ ಚಂದ್ರಕಾಂತ ಗೋಯಲ್ ಮುಂಬಯಿಯಲ್ಲಿ ಒಂದು ಅವಧಿಗೆ ಕಾರ್ಪೊರೇಟರ್ ಆಗಿದ್ದರು. ನಂತರ ಮುಂಬೈನ ಮಾತುಂಗಾ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿಯನ್ನು ಮೂರು ಅವಧಿಗೆ ಪ್ರತಿನಿಧಿಸಿದ್ದರು. ಅವರ ಪತಿ, ದಿವಂಗತ ವೇದ ಪ್ರಕಾಶ್ ಗೋಯಲ್ ಅವರು ಬಿಜೆಪಿ ರಾಷ್ಟ್ರೀಯ ಖಜಾಂಚಿಯಾಗಿದ್ದರು. ಹಾಗೂ ಅಟಲ್ ಬಿಹಾರಿ ವಾಜಪೇಯಿ ಸರ್ಕಾರದಲ್ಲಿ ಹಡಗು ಸಚಿವರಾಗಿದ್ದರು. ಇಂದು ಬೆಳಿಗ್ಗೆ ಚಂದ್ರಕಾಂತ ಗೋಯಲ್ ಅವರ ಪಾರ್ಥಿವ ಶರೀಕದ ಅಂತ್ಯಕ್ರಿಯೆ ನೆರವೇರಿಸಲಾಗಿದೆ.