ಸಾಧಕರ ಸಾಧನೆಗೆ ತಾಯಿಯೇ ಪ್ರೇರಕಳು: ಮಂಜುಳಾ

ಧಾರವಾಡ29 : ಜಗತ್ತಿನ ಮಹಾನ್ ಸಾಧಕರ ಸಾಧನೆಗೆ ತಾಯಿಯೇ ಪ್ರೇರಕಳು. ಅವಳು ನಮ್ಮ ಬದುಕಿನ ಬಹುದೊಡ್ಡ ಶಕ್ತಿ ಎಂದು ನಗರದ ಕನರ್ಾಟಕ ವಿದ್ಯಾವರ್ಧಕ ಸಂಘವು ಶಾಂತಕ್ಕ ಮಠದ ದತ್ತಿ ಕಾರ್ಯಕ್ರಮ ಅಂಗವಾಗಿ ಮಹಿಳಾ ಮಂಡಳಗಳಿಗಾಗಿ ಆಯೋಜಿಸಿದ್ದ 'ಅಮ್ಮನ ಕೈ ತುತ್ತು-ಮನಕುಲಕ್ಕೆ ಸಂಪತ್ತು' ವಿಷಯ ಕುರಿತ ಭಾಷಣ ಸ್ಪಧರ್ೆಯ ಸಮಾರೋಪ ಸಮಾರಂಭದಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಿ, ಮುಖ್ಯ ಅತಿಥಿಗಳಾಗಿ ಮಾತನಾಡಿದ ಪ್ರಾಧ್ಯಾಪಕಿ ಮಂಜುಳಾ ಸವಡಿ ಹೇಳಿದರು. 

      ತಾಯಂದಿರೆಲ್ಲಾ ದೇವರ ಪ್ರತಿರೂಪವೇ ಜೀವನದುದ್ದಕ್ಕೂ ನೋವುಂಡು ನಮ್ಮೆಲ್ಲರ ಬದುಕಿಗೆ ಬೆಳಕಾದವಳೇ ತಾಯಿ. ತಾಯಿಯ ಕೈ ತುತ್ತಿನಲ್ಲಿ ಸಂಸ್ಕಾರ, ತ್ಯಾಗ, ಕರುಣೆ, ಮಮತೆಯ ಜೀವನ ಮೌಲ್ಯಗಳಿವೆ. ಶಾಂತಕ್ಕ ಮಠದ ಆದರ್ಶ ಮಾತೆಯಾಗಿ ಲೋಕಾನುಭವದ ಮೂಲಕ ಬದುಕು ಕಟ್ಟಿಕೊಂಡವರು. ನಾವು ಹೆಣ್ಣಾಗಿ ಹುಟ್ಟಿದ್ದು ನಮಗೂ ಅಭಿಮಾನ ಎಂದು ಅವರು ಹೇಳಿದರು. 

       ತಾಯಿಯ ಕೈ ತುತ್ತು ಎಂಬುದನ್ನು ನಾವು ಬಹಳ ಸಂಕುಚಿತ  ಶಬ್ಧವಾಗಿ ನೋಡುತ್ತಿದ್ದೇವೆ. ತಾಯಿಯ ಕೈ ತುತ್ತು ಎಂದರೆ ನಮಗೆ ಹೊಟ್ಟೆ ತುಂಬಿಸಲು ನೀಡಿದ ತುತ್ತು ಅಥವಾ ಆಹಾರ ಮಾತ್ರವಲ್ಲ. ಅದು ವಿಶಾಲ ಅರ್ಥವನ್ನು ಮತ್ತು ವ್ಯಾಖ್ಯಾನ ಹೊಂದಿದೆ.

  ಹಸಿ ಮಣ್ಣಿನ ಮುದ್ದಿಯಂತೆ ಇರುವ ಮಗುವಿಗೆ ವ್ಯಕ್ತಿ ವಿಕಸನದ ಪರಿಪೂರ್ಣ ವ್ಯಕ್ತಿಯನ್ನಾಗಿಸುವ ತಾಯಿಯ ಪ್ರತಿಯೊಂದು ನಡೆ, ತಾಯಿ ಮಗುವಿಗೆ ನೀಡಿದ ಕೈ ತುತ್ತು ಎನ್ನಬಹುದಾಗಿದೆ. ಮಾತು ಕಲಿಸಿ, ನಡೆ-ನುಡಿ ಹೇಳಿಕೊಟ್ಟು, ಚಾರಿತ್ರ್ಯವಂತರನ್ನಾಗಿಸಿ ಬದುಕು ಕಟ್ಟಿ ಕೊಡುವಾಗ ತಾಯಿ ಪಟ್ಟ ಪ್ರತಿಯೊಂದು ಶ್ರಮ ಹಾಗೂ ಮಾಡಿದ ಮಾರ್ಗದರ್ಶನ ಕೂಡಾ ತಾಯಿ ನೀಡಿದ ಅಮೂಲ್ಯ ಕೈ ತುತ್ತು ಆಗಿದೆ ಎಂದು ಮುಂದುವರೆದು ಮಾತನಾಡಿ ಪ್ರಾಧ್ಯಾಪಕಿ ಮಂಜುಳಾ ಸವಡಿ ಹೇಳಿದರು. 

ಅಧ್ಯಕ್ಷತೆ ವಹಿಸಿದ್ದ ವಿಶ್ರಾಂತ ಪ್ರಾಧ್ಯಾಪಕರಾದ ಡಾ. ವಿಜಯಾ ಗುತ್ತಲ ಮಾತನಾಡಿ, ಅಮ್ಮನ ಕೈತುತ್ತು ನಮ್ಮ ಬದುಕಿಗೆ ಆಶೀವರ್ಾದ. ತಾಯಿ ಪ್ರೇಮದ ಖಣಿ. ಮಮತೆಯ ಸಾಕಾರಮೂತರ್ಿ. ಅವಳು ಭೂಮಿಗಿಂತಲೂ ದೊಡ್ಡವಳು. ತಾಯಿ ಬಾಲ್ಯದಲ್ಲಿ ನೀಡಿದ ಸಂಸ್ಕಾರದಿಂದ ನಾನು ಓದಿ ಪ್ರಾಧ್ಯಾಪಕಿಯಾಗಲು ಸಾಧ್ಯವಾಯಿತೆಂದು ತಾಯಿಯನ್ನು ಸ್ಮರಿಸಿಕೊಂಡರು. 

        ಸಂಘದ ಪ್ರಧಾನ ಕಾರ್ಯದಶರ್ಿ ಪ್ರಕಾಶ ಎಸ್. ಉಡಿಕೇರಿ ಪ್ರಾಸ್ತಾವಿಕವಾಗಿ ಮಾತನಾಡಿ, ಶಾಂತಕ್ಕ ಮಠದವರು ಮಹಿಳಾ ಸಮುದಾಯಕ್ಕೊಂದು ದೊಡ್ಡಶಕ್ತಿ. ಮಹಿಳಾ ಮಂಡಳಗಳನ್ನು ಒಂದು ಗೂಡಿಸಿ ಮಹಿಳೆಯರಲ್ಲಿ ಶಕ್ತಿ ತುಂಬಿ ಸ್ವಾವಲಂಬಿ ಬದುಕು ಸಾಗಿಸಲು ಅವರು ಪ್ರೇರೇಪಿಸಿದರು. ಬಹುಮುಖ ಪ್ರತಿಭೆ ಹೊಂದಿದ ಶಾಂತಕ್ಕ ಮಠದ ಮಹಿಳೆಯರ ಆಥರ್ಿಕ ಸ್ವಾವಲಂಬನೆಗಾಗಿ ಸಹಕಾರಿ ಬ್ಯಾಂಕ್ ಸ್ಥಾಪಿಸಿ ದಾಖಲೆ ಸ್ಥಾಪಿಸಿದರು ಎಂದು ಹೇಳಿದರು. 

   ಭಾಷಣ ಸ್ಪಧರ್ೆಯಲ್ಲಿ ಶ್ರೀಶಕ್ತಿ ಸ್ನೇಹಾ ಮಹಿಳಾ ಅಭಿವೃದ್ಧಿ ಮಂಡಳದ ಬಸವಂತಿ ಇಂಗಳಹಳ್ಳಿ  ಪ್ರಥಮ ಸ್ಥಾನ, ಕಲ್ಯಾಣನಗರ ಮಹಿಳಾ ಮಂಡಳದ ಉಷಾ ಗದ್ಗಿಮಠ ದ್ವಿತೀಯ ಸ್ಥಾನ ಹಾಗೂ ಸುವರ್ಣ ಮಹಿಳೆಯರ ಕನಸಿನ ಮಹಿಳಾ ಮಂಡಳದ ಮಂಜುಳಾ ರಾಮಡಗಿ ತೃತೀಯ ಸ್ಥಾನ ಪಡೆದರು. ವಿಜೇತರಿಗೆ ನಗದು ಸೇರಿ ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಯಿತು. ಈ ಸ್ಪಧರ್ೆಯಲ್ಲಿ 24 ಮಹಿಳಾ ಸ್ಪಧರ್ಾಳುಗಳು ಭಾಗವಹಿಸಿದ್ದರು. ಭಾಗವಹಿಸಿದ ಎಲ್ಲರಿಗೂ ಪ್ರಮಾಣ ಪತ್ರ ನೀಡಲಾಯಿತು. 

      ಶಾಂತಕ್ಕ ಮಠದವರ ಭಾವಚಿತ್ರಕ್ಕೆ ಗಣ್ಯರು ಪುಷ್ಪ ನಮನ ಸಲ್ಲಿಸಿದರು. ಮೇ ತಿಂಗಳ ದತ್ತಿ ಕಾರ್ಯಕ್ರಮದ ಸಂಚಾಲಕರಾದ ಶಂಕರ ಕುಂಬಿ ಸ್ವಾಗತಿಸಿದರು. ಕೆ.ಎಚ್. ನಾಯಕ ನಿರೂಪಿಸಿದರು. ಉಪನ್ಯಾಸಕ ವೀರಣ್ಣ ಒಡ್ಡೀನ, ಮಹಾಂತೇಶ ನರೇಗಲ್ ಇದ್ದರು.