ಲೋಕದರ್ಶನವರದಿ
ಧಾರವಾಡ: ತಾಯಿಯನ್ನು ಸಮೀಕರಿಸುವ ವ್ಯಕ್ತಿ ವಿಶ್ವದಲ್ಲಿಯೇ ಇನ್ನೊಬ್ಬರಿಲ್ಲ ಎಂದು ಖ್ಯಾತ ಸಾಹಿತಿ, ಚಿಂತಕ ಮತ್ತು ಇಂಗ್ಲೀಷ ಅಧ್ಯಾಪಕ ಪ್ರೊ. ಹರ್ಷ ಡಂಬಳ ಇಲ್ಲಿ ಹೇಳಿದರು.
ನಗರದ ಕನರ್ಾಟಕ ವಿದ್ಯಾವರ್ಧಕ ಸಂಘದ ಲೀಲಾತಾಯಿ ಉರ್ಫ ಲಕ್ಷ್ಮೀಬಾಯಿ ಜಿ. ಪಾಟೀಲ ಕುಲಕಣರ್ಿ ದತ್ತಿ ಕಾರ್ಯಕ್ರಮ ಹಾಗೂ ಅದರ ಅಂಗವಾಗಿ ಖ್ಯಾತ ಸಾಹಿತಿ, ಸಮಾಜ ಸೇವಕಿ ಇಂದಿರಾ ಪ್ರಸಾದ ಮತ್ತು ಹಿರಿಯ ಕಾಮರ್ಿಕ ಹೋರಾಟಗಾರ ಎಂ.ಬಿ. ಕಟ್ಟಿಯವರ ಸನ್ಮಾನವನ್ನು ಮಾಡಿ ಅವರು ಮಾತನಾಡಿದರು.
ಹಿರಿಯ ಮಹಿಳೆಯನ್ನು ನಾವು ತಾಯಿ ಎಂದು ಭಾವಿಸಿ ಅದರಂತೆ ಪಾರದರ್ಶಕವಾಗಿ ವತರ್ಿಸಬೇಕು. ತಾಯಿ ದೇವರ ಸ್ವರೂಪವೇ, ನಿಜಕ್ಕೂ ಸಂಚಾರಿ ದೇವಿ. ಆಕೆ ಎಂದೂ ತನ್ನ ಮಕ್ಕಳಿಂದ ಸಮರ್ಪಣೆ ಮತ್ತು ಶರಣಾಗತಿ ಅಪೇಕ್ಷಿಸುವುದಿಲ್ಲ.
ಖ್ಯಾತ ಸಾಹಿತಿ ಡಾ. ಗುರುಲಿಂಗ ಕಾಪಸೆ ತಮ್ಮ ಗತಿಸಿದ ಸಹಧಮರ್ಿಣಿಯೊಂದಿಗೆ 'ಅನುಭಾವ ಕ್ರಿಯೆ'ಯಲ್ಲಿ ತೊಡಗಿ ಸಮಾಲೋಚಿಸಿದ್ದನ್ನು ಅವರು ನೆನೆದುಕೊಂಡರು.
ಲೋಕ ಶಿಕ್ಷಣ ಟ್ರಸ್ಟಿನ ಮುಖ್ಯ ಕಾರ್ಯನಿವರ್ಾಹಕ ಅಧಿಕಾರಿ ಎ.ಸಿ. ಗೋಪಾಲ ಮಾತನಾಡಿ, ಮಹಿಳೆಯರ ಪರಿಕಲ್ಪನೆ ಹಾಗೂ ಅವರನ್ನು ಅಥರ್ೈಸುವ ಸಶಕ್ತ, ಆರೋಗ್ಯಕರ ವಾತಾವರಣ ನಿಮರ್ಾಣವಾಗಬೇಕಾಗಿದೆ. ಸ್ವಾಭಿಮಾನದಿಂದ ಬದುಕುವ ಮತ್ತು ಅವರಿಗೆ ಶಿಕ್ಷಣ ದೊರೆಯುವ ಅನುಕೂಲವೂ ಆಗಬೇಕಾಗಿದೆ ಎಂದು ಹೇಳಿದರು.
ತಮ್ಮ ಸನ್ಮಾನಕ್ಕೆ ಉತ್ತರಿಸಿದ ಖ್ಯಾತ ಸಾಹಿತಿ, ಸಮಾಜ ಸೇವಕಿ ಇಂದಿರಾ ಪ್ರಸಾದವರು ಮಾತನಾಡಿ, ತಮ್ಮ ಅಲ್ಪಸೇವೆಯನ್ನು ಅಗಾಧ ಎಂದು ಪರಿಗಣಿಸಿ ಸನ್ಮಾನಿಸಿದ್ದಕ್ಕೆ ಕೃತಜ್ಞತೆ ಸಲ್ಲಿಸಿದರು. ಖ್ಯಾತ ಕಾಮರ್ಿಕ ಹೋರಾಟಗಾರ ಎಂ.ಬಿ. ಕಟ್ಟಿ ಮಾತನಾಡಿ ತಮ್ಮ ಕಾಮರ್ಿಕ ಹೋರಾಟದ ನಡೆದು ಬಂದ ದಾರಿಯನ್ನು ವಿವರಿಸಿದರು. ಬಡತನ ಹಾಗೂ ಶಿಕ್ಷಣದ ಮಟ್ಟ ಎಂದಿಗೂ ಮಹತ್ವಾಕಾಂಕ್ಷೆಗೆ ಹಾಗೂ ಸತ್ಯ-ಸತ್ವಯುತ ಹೋರಾಟಕ್ಕೆ ಅಡ್ಡಿಪಡಿಸುವುದಿಲ್ಲ ಎಂದು ಹೇಳಿದರು. ಮಹಾದಾಯಿ ಹೋರಾಟ ಫಲಪ್ರದ ಈವರೆಗೂ ಆಗದ್ದಕ್ಕೆ ರಾಜಕೀಯ ಇಚ್ಚಾಶಕ್ತಿ ಇಲ್ಲದಿರುವುದೇ ಕಾರಣವೆಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಮಹಿಳಾ ಹೋರಾಟಗಾತರ್ಿ, ಹಿರಿಯನ್ಯಾಯವಾದಿ ಶ್ರೀಮತಿ ಪ್ರಫುಲ್ಲಾನಾಯಕ ಮಾತನಾಡಿದರು. ಪ್ರಾರಂಭದಲ್ಲಿ ಜಯಶ್ರೀ ಪಾಟೀಲಕುಲಕಣರ್ಿ ಪ್ರಾರ್ಥನೆ ಗೀತೆ ಹಾಡಿದರು. ಸಂಘದ ಕೋಶಾಧ್ಯಕ್ಷ ಕೃಷ್ಣ ಜೋಶಿ ಸ್ವಾಗತಿಸಿದರು. ಸಂಘದ ಪ್ರಧಾನ ಕಾರ್ಯದಶರ್ಿ ಪ್ರಕಾಶ ಎಸ್. ಉಡಿಕೇರಿ ಪ್ರಾಸ್ತಾವಿಕವಾಗಿ ಮಾತನಾಡಿ, ಎಂ.ಬಿ. ಕಟ್ಟಿಯವರ ಪರಿಚಯ ಮಾಡಿದರು.
ಶೈಲಜಾ ಪಾಟೀಲ, ಪಂಕಜಾ ಪಾಟೀಲಗಂಗಾವತಿಕರ, ಶಿವಾನಂದ ಭಾವಿಕಟ್ಟಿ, ಇತರರು ಗ್ರಂಥ ಸಮರ್ಪಣೆ ಮಾಡಿದರು. ಸಂಘದ ಕಾಯರ್ಾಧ್ಯಕ್ಷ ಶಿವಣ್ಣ ಬೆಲ್ಲದ ವೇದಿಕೆ ಮೇಲೆ ಉಪಸ್ಥಿತರದ್ದರು. ಕಾರ್ಯಕಾರಿ ಸಮಿತಿ ಸದಸ್ಯ ಶಂಕರ ಕುಂಬಿ ಕಾರ್ಯಕ್ರಮ ನಿರೂಪಿಸಿದರು. ಇನ್ನೊಬ್ಬ ಸದಸ್ಯ ಎಸ್.ಬಿ. ಗಾಮನಗಟ್ಟಿ ಆಭಾರ ಮನ್ನಿಸಿದರು. ಸಭೆಯಲ್ಲಿ ಮಾಜಿ ಶಾಸಕ ಚಂದ್ರಕಾಂತ ಬೆಲ್ಲದ, ಸಂಘದ ಉಪಾಧ್ಯಕ್ಷ ನಿಂಗಣ್ಣ ಕುಂಟಿ, ಸಹ ಕಾರ್ಯದಶರ್ಿ ಸದಾನಂದ ಶಿವಳ್ಳಿ, ಕಾರ್ಯಕಾರಿ ಸಮಿತಿ ಸದಸ್ಯ ಮನೋಜ ಪಾಟೀಲ, ರಾಜು ಪಾಟೀಲಕುಲಕಣರ್ಿ, ರಮಾ ಕಟ್ಟಿ ಇತರರು ಉಪಸ್ಥಿತರಿದ್ದರು.