ಸಕಾಲದಲ್ಲಿ ಸರ್ಕಾರ ಯೋಜನೆಗಳನ್ನು ಜನತೆಗೆ ತಲುಪಿಸಿ : ಶಾಸಕ ಜೆ.ಎನ್‌.ಗಣೇಶ

ಸಕಾಲದಲ್ಲಿ ಸರ್ಕಾರ ಯೋಜನೆಗಳನ್ನು ಜನತೆಗೆ ತಲುಪಿಸಿ : ಶಾಸಕ ಜೆ.ಎನ್‌.ಗಣೇಶ Government should deliver projects to the people on time: MLA J.N. Ganesh

ಲೋಕದರ್ಶನ ವರದಿ 

ಕಂಪ್ಲಿ 24 : ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಜನರನ್ನು ಕಚೇರಿಗೆ ಅಲೆದಾಡಿಸದೇ, ಸಕಾಲದಲ್ಲಿ ಸರ್ಕಾರದ ಯೋಜನೆಗಳನ್ನು ತಲುಪಿಸಲು ಅಧಿಕಾರಿಗಳು ಮುಂದಾಗಬೇಕು ಎಂದು ಶಾಸಕ ಜೆ.ಎನ್‌.ಗಣೇಶ ಹೇಳಿದರು. ತಾಲೂಕಿನ ನಂ.10 ಮುದ್ದಾಪುರ ಗ್ರಾಮದ ಮಿನಿ ವಿಧಾನಸೌಧದ ಬಳಿಯಲ್ಲಿರುವ ತಾಪಂ ಸಭಾಂಗಣದಲ್ಲಿ ತಾಪಂ, ಗ್ರಾಪಂ ಸಹಯೋಗದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ರಾಷ್ಟ್ರೀಯ ಪಂಚಾಯತ್ ರಾಜ್ ದಿನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಪ್ರಜಾಪ್ರಭುತ್ವ ವಿಕೇಂದ್ರಿಕರಣ ಮತ್ತು ಸ್ಥಳೀಯ ಆಡಳಿತವನ್ನು ಬಲಗೊಳಿಸುವ ನಮ್ಮ ಬದ್ಧತೆಯನ್ನು ಪುನರುಜ್ಜೀವನಗೊಳಿಸುವ ಹಾಗೂ ಪಂಚಾಯಿತ್ ರಾಜ್ ಸಂಸ್ಥೆಗಳ ಸಾಧಿಸುವ ಗಮನಾರ್ಹ ಪ್ರಗತಿ ಸಾಧಿಸುವ ದಿನವಾಗಿದೆ. ಜನತೆಗೆ ಉತ್ತಮ ಸಲಹೆ ನೀಡುವ ಮೂಲಕ ಮನದಟ್ಟು ಮಾಡಿ, ಸೌಲಭ್ಯಗಳನ್ನು ಕಲ್ಪಿಸಬೇಕು.  

ಶ್ರದ್ಧೆ, ನಿಷ್ಠೆಯೊಂದಿಗೆ ಜನಸ್ನೇಹಿಯಾಗಿ ಕೆಲಸ ಮಾಡುವ ಅಧಿಕಾರಿಗಳ ಜೊತೆಗೆ ನಾವಿದ್ದೇವೆ. ಕುಡಿಯುವ ನೀರು, ದೀಪ ದೀಪ ಸೇರಿದಂತೆ ಇನಿತರ ಸಮಸ್ಯೆಗಳನ್ನು ಸ್ಥಳೀಯ ಮಟ್ಟದಲ್ಲಿ ಬಗೆಹರಿಸಬೇಕು. ನೀರೀಕ್ಷೆ ಮೀರಿದ ಜವಾಬ್ದಾರಿಗಳು ಮತ್ತು ಒತ್ತಡಗಳ ಮಧ್ಯ ಕೆಲಸ ಮಾಡಬೇಕಾಗಿದೆ. ಯಾವದಕ್ಕೂ ಕಿವಿಗೊಡದೇ, ಅಧಿಕಾರಿಗಳು ತಮ್ಮ ಕೆಲಸವನ್ನು ಪಕ್ಷತೀತವಾಗಿ ಮಾಡುವದೊಂದಿಗೆ ಜನರೊಂದಿಗೆ ಉತ್ತಮವಾಗಿ ಸಾಗಬೇಕು ಎಂದರು.  

 ಜಿಪಂ ಉಪ ಕಾರ್ಯದರ್ಶಿ ಶಿಶಿಕಾಂತ ಶಿವಪೂರ ಮಾತನಾಡಿ, ಜಿಪಂ, ತಾಪಂ ಮುಖಾಂತರ ಸಾಕಷ್ಟು ಯೋಜನೆಗಳನ್ನು ಗ್ರಾಮ ಪಂಚಾಯತ್ ಮಟ್ಟದಲ್ಲಿ ಅಭಿವೃದ್ಧಿಗೊಳಿಸುವ ಮೂಲಕ ದೇಶದ ಅಭಿವೃದ್ಧಿಗೆ ಕೈಜೋಡಿಸಬೇಕಾಗಿದೆ. ಗ್ರಾಪಂ ಮಟ್ಟದಲ್ಲಿ ಅಧಿಕಾರಿಗಳು ಸರ್ಕಾರದ ಪ್ರತಿಯೊಂದು ಯೋಜನೆಗಳನ್ನು ತಲುಪಿಸಲು ಮುಂದಾಗಬೇಕು ಎಂದರು. ಗ್ರಾಪಂ ಮಟ್ಟದ ತೆರಿಗೆಯಲ್ಲಿ ಶೇ.100ರಷ್ಟು ವಸೂಲಾತಿ ಮಾಡಿದ ಗ್ರಾಪಂ ಪಿಡಿಒ, ಕಾರ್ಯದರ್ಶಿ, ಬಿಲ್‌ಕಲೆಕ್ಟರ್‌ಗಳಿಗೆ ಹಾಗೂ ವಿಆರ್‌ಡಬ್ಲ್ಯೂಯವರಿಗೆ ಸನ್ಮಾನಿಸಿ ಗೌರವಿಸಿದರು. 

  ಈ ಸಂದರ್ಭದಲ್ಲಿ ಪಂಚ ಗ್ಯಾರಂಟಿ ಯೋಜನಾ ಸಮಿತಿ ತಾಲೂಕು ಅಧ್ಯಕ್ಷ ಕೆ.ಶ್ರೀನಿವಾಸರಾವ್, ತಾಪಂ ಇಒ ಆರ್‌.ಕೆ.ಶ್ರೀಕುಮಾರ, ಎಡಿ ಮಲ್ಲನಗೌಡ ಕೆ.ಎಸ್, ಲೆಕ್ಕಾಧಿಕಾರಿ ನಾರಾಯಣಸ್ವಾಮಿ, ಯೋಜನಾಧಿಕಾರಿ ಗುರುಪ್ರಸಾದ್, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಹೆಚ್‌.ದೊಡ್ಡಬಸಪ್ಪ, ಕ.ಪ.ಅ.ಅ.ಕ್ಷೇ ಸಂಘದ ಖಜಾಂಚಿ ಷೇಷಾವಲಿ ಎಂ, ಪಿಡಿಒ ಬೀರಲಿಂಗ, ಹಾಲರಿ​‍್ವ ಶೇಷಗಿರಿ, ಮಲ್ಲಿಕಾರ್ಜುನ, ಶಶಿಕಾಂತ, ಶಿಲ್ಪರಾಣಿ, ಅಪರಂಜಿ ಸೇರಿದಂತೆ ತಾಪಂ, ಗ್ರಾಪಂ ಅಧಿಕಾರಿಗಳು, ಸಿಬ್ಬಂದಿಗಳು ಹಾಗೂ ಇತರರು ಇದ್ದರು.