11 ರಿಂದ ಮೋಟಗಿ ಬಸವೇಶ್ವರ ಜಾನುವಾರು ಜಾತ್ರೆ

ಬಾಗಲಕೋಟೆ೦೪: ಫೆಬ್ರವರಿ 11 ರಿಂದ 15 ವರೆಗೆ ಜರಗುವ ಮೋಟಗಿ ಬಸವೇಶ್ವರ ಜಾನುವಾರು ಜಾತ್ರೆಯನ್ನು ವ್ಯವಸ್ಥಿತವಾಗಿ ಹಮ್ಮಿಕೊಳ್ಳುವಂತೆ ಶಾಸಕ ವೀರಣ್ಣ ಚರಂತಮಠ ಅಧಿಕಾರಿಗಳಿಗೆ ಕರೆ ನೀಡಿದರು.

ಕೃಷಿ ಉತ್ಪನ್ನ ಮರುಕಟ್ಟೆ ಸಭಾಂಗಣದಲ್ಲಿಂದು ಜರುಗಿದ ಜಾನುವಾರು ಜಾತ್ರೆ ಪೂರ್ವ ಸಿದ್ದತಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಜಿಲ್ಲೆಯಲ್ಲಿಯೇ ಬಹು ದೊಡ್ಡ ಐತಿಹಾಸಿಕ ಶ್ರೀ ಮೋಟಗಿ ಬಸವೇಶ್ವರ ಜಾತ್ರೆಯು ಹಲವಾರು ದಶಕಗಳಿಂದಲೂ ಅತ್ಯಂತ ಯಶಸ್ವಿಯಾಗಿ ಜರುಗುತ್ತಿದ್ದು, ಫೆ.11 ರಿಂದ 5 ದಿನಗಳ ಕಾಲ ಈ ಬಾರಿಯೂ ಸಹ ಆಯೋಜನೆ ಮಾಡಲಾಗಿದ್ದು, ಸಂಬಂಧಿಸಿದ ಅಧಿಕಾರಿಗಳು ಎಲ್ಲ ರೀತಿಯ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಿ ಯಶಸ್ವಿಗೊಳಿಸುವಂತೆ ಶಾಸಕರು ತಿಳಿಸಿದರು.

ಕೃಷಿ, ತೋಟಗಾರಿಕೆ ಇಲಾಖೆಯವರು ರೈತರಿಗೆ ಅನುಕೂಲವಾಗುವಂತೆ ಸ್ಟಾಲ್ಗಳನ್ನು ಹಾಕುವಂತೆ ನಿದರ್ೇಶನ ನೀಡಿದರು. ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ವತಿಯಿಂದ ಜಾನುವಾರುಗಳಿಗೆ ಹಾಗೂ ರೈತರಿಗೆ ಕುಡಿಯುವ ನೀರಿನ ವ್ಯವಸ್ಥೆ, ಬೆಳಕಿನ ವ್ಯವಸ್ಥೆ, ಜಾನುವಾರುಗಳಿಗೆ ಆರೋಗ್ಯ ರಕ್ಷಣೆ, ಸಾರಿಗೆ ವ್ಯವಸ್ಥೆ, ಪೊಲೀಸ್ ಬಂದೋಬಸ್ತ ವ್ಯವಸ್ಥೆ, ವೈದ್ಯಕೀಯ ಸೌಲಭ್ಯಗಳ ಜೊತೆಗೆ ಜಾತ್ರೆಯ ಸ್ಥಳದಲ್ಲಿ ಹೋಟಲ್ಗಳಲ್ಲಿ ಬ್ಲಿಚಿಂಗ್ ಪೌಡರ ಸಿಂಪಡಿಸಲು ನಗರಸಭೆ ಅಧಿಕಾರಿಗಳಿಗೆ ಸೂಚಿಸಲಾಯಿತು. ಜಾನುವಾರು ಮಾರಾಟಕ್ಕೆ ಆಗಮಿಸುವ ರೈತರಿಗೆ ಪ್ರತಿ ದಿನ ರಾತ್ರಿ ಮನರಂಜನಾ ಕಾರ್ಯಕ್ರಮಗಳನ್ನು ಸಹ ಕೈಗೊಳ್ಳಲು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅಧಿಕಾರಿಗಳಿಗೆ ಸೂಚಿಸಲಾಯಿತು.

ಜಾತ್ರೆಯಲ್ಲಿ ಆಯ್ಕೆಯಾದ ಉತ್ತಮ ರಾಸುಗಳಿಗೆ ಬಹುಮಾನ ವಿತರಿಸುವ ವ್ಯವಸ್ಥೆ ಸಹ ಮಾಡಲಾಗುತ್ತಿದೆ. ಜಾನುವಾರು ಜಾತ್ರೆಯು ಯಶಸ್ವಿಗೊಳಿಸಲು ಎಲ್ಲ ಇಲಾಖೆಯ ಅಧಿಕಾರಿಗಳು ಸಹಕಾರ ಅಗತ್ಯವಾಗಿದೆ. ಸಾಕಷ್ಟು ಪ್ರಮಾಣದಲ್ಲಿ ಜಾನುವಾರುಗಳು ಆಗಮಿಸುತ್ತಿರುವುದರಿಂದ ಜಾತ್ರೆ ವ್ಯವಸ್ಥಿತವಾಗಿ ನಡೆಸಲು ಎಲ್ಲ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವಂತೆ ಅಧಿಕಾರಿಗಳಿಗೆ ಶಾಸಕರು ಸೂಚಿಸಿದರು. ಜಾತ್ರೆಗೆ ಬರುವ ಸ್ಥಳಗಳಲ್ಲಿ ಬಸ್ ನಿಲುಗಡೆ ವ್ಯವಸ್ಥೆ ಮಾಡುವಂತೆ ತಿಳಿಸಿದರು.

ಸಭೆಯಲ್ಲಿ ಎ.ಪಿ.ಎಂ.ಸಿ ಅಧ್ಯಕ್ಷರಾದ ನಿಂಗಪ್ಪ ಅರಕೇರಿ, ವ್ಯಾಪಾರಸ್ಥರ ಅಸೋಸಿಯೇಶನ್ ಅಧ್ಯಕ್ಷ ಮಹೇಶ ಅಂಗಡಿ, ಸದಸ್ಯರಾದ ಕೆ.ವಿ.ಅಥಣಿ, ಎಪಿಎಂಸಿ ಕಾರ್ಯದಶರ್ಿ ರವಿ ರಾಠೋಡ, ಸಹ ಕಾರ್ಯದಶರ್ಿ ಆರ್.ಎಸ್.ರಾಠೋಡ, ಆರ್.ವಿ.ದಂಡಿನ, ಜಿ.ಎಂ.ಬಗಲಿ, ಪಶುಸಂಗೋಪನನೆ ಇಲಾಖೆಯ ಉಪನಿದರ್ೇಶಕ ಡಾ.ಎಸ್.ಎಚ್.ಅಂಗಡಿ, ಸಹಾಯಕ ನಿದರ್ೇಶಕ ಆರ್.ಎಸ್.ಪದ್ರಾ, ರೈತ ಸಂಪನ್ಮೂಲ ಕೇಂದ್ರದ ಆರ್.ಎಸ್.ಪಂಚಮುಖಿ ಸೇರಿದಂತೆ ಇತರರು ಉಪಸ್ಥಿತರಿದ್ದರು.