ಬೆಳಗಾವಿ, ಸೆ 7: ಮಹಾರಾಷ್ಟ್ರದಲ್ಲಿ ಭಾರೀ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಅಲ್ಲಿನ ಜಲಾಶಯಗಳಿಂದ ಹೆಚ್ಚಿನ ನೀರು ಹರಿಸುತ್ತಿರುವುದರಿಂದ ಉತ್ತರ ಕನರ್ಾಟಕದಲ್ಲಿ ಒಂದು ತಿಂಗಳೊಳಗೆ ಮತ್ತೆ ಪ್ರವಾಹ ಪರಿಸ್ಥಿತಿಯ ಆತಂಕ ಉಂಟಾಗಿದೆ,
ಜಲಾಶಯಗಳಿಂದ ಭಾರೀ ನೀರು ಹರಿಸುತ್ತಿರುವುದರಿಂದ, ಕೃಷ್ಣ, ದೂದ್ಗಂಗಾ, ವೇದಗಂಗಾ ನದಿಗಳು ಸೇರಿದಂತೆ ಅನೇಕ ಪ್ರಮುಖ ನದಿಗಳು ತುಂಬಿ ಹರಿಯುತ್ತಿವೆ. ಘಟಪ್ರಭಾ, ಮಲಪ್ರಭಾ, ನವೀಲುತೀರ್ಥ ಜಲಾಶಯಗಳಲ್ಲಿ ಭಾರಿ ಒಳಹರಿವು ಕಂಡುಬಂದಿವೆ. ಬಹುತೇಕ ನದಿಗಳು ಉಕ್ಕಿ ಹರಿಯುತ್ತಿದ್ದು, ಅಪಾಯದ ಮಟ್ಟ ತಲುಪಿದೆ. ಮಹಾರಾಷ್ಟ್ರದ ಕೊಯ್ನಾ ಜಲಾಶಯದಿಂದ ಕೃಷ್ಣ ನದಿಗೆ ಸುಮಾರು 1.70 ಲಕ್ಷ ಕ್ಯೂಸೆಕ್ ನೀರನ್ನು ಬಿಡುಗಡೆ ಮಾಡಲಾಗಿದೆ.
ಕೇವಲ ಒಂದು ತಿಂಗಳ ಹಿಂದೆಯೇ ನೈರುತ್ಯ ಮುಂಗಾರು ಪ್ರಭಾವದಿಂದ ಉಂಟಾದ ಪ್ರವಾಹದಿಂದ ಜನ ಇನ್ನೂ ಚೇತರಿಸಿಕೊಳ್ಳುತ್ತಿರುವಾಗಲೇ ಜನರು ಮತ್ತೆ ರಾತ್ರಿ ನಿದ್ದೆ ಕಳೆಯುವ ಪರಿಸ್ಥಿತಿ ನಿರ್ಮಾಣವಾಗಿದೆ. ಪುನರ್ವಸತಿ ಕೇಂದ್ರಗಳಲ್ಲಿ ಆಶ್ರಯ ಪಡೆದಿದ್ದ ಹೆಚ್ಚಿನ ನಿರಾಶ್ರಿತರು, ಪ್ರಕೃತಿ ವಿಕೋಪದಿಂದಾಗಿ ಇನ್ನೂ ತಮ್ಮ ಮನೆಗಳಿಗೆ ಮರಳಲು ಸಾಧ್ಯವಾಗಿಲ್ಲ.
ಜಿಲ್ಲೆಯ ಅಥನಿ, ಚಿಕ್ಕೋಡಿ ಮತ್ತು ಗೋಕಾಕ್ ತಾಲೂಕುಗಳಲ್ಲಿ ಐದಕ್ಕೂ ಹೆಚ್ಚು ಸೇತುವೆ ಪ್ರವಾಹದ ನೀರಿನಲ್ಲಿ ಮುಳುಗಿದ್ದು, ಜನರು ಪ್ರವಾಹದ ಭೀತಿಯ ಭೀತಿಯಲ್ಲಿ ಬದುಕುತ್ತಿದ್ದಾರೆ.
ಅಲ್ಲದೆ, ಬೆಳಗಾವಿ ನಗರ ಮತ್ತು ಹೊರವಲಯ, ಖಾನಾಪುರ ತಾಲ್ಲೂಕು ಮತ್ತು ಜಿಲ್ಲೆಯ ಇತರ ಭಾಗಗಳಲ್ಲಿ ಭಾರೀ ಮಳೆಯಾಗುತ್ತಿದೆ. ಪ್ರಮುಖ ಜಲಾಶಯಗಳ ದಂಡೆಯಲ್ಲಿರುವ ಹಳ್ಳಿಗಳ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗುತ್ತಿದೆ.
ಎನ್ಡಿಎಫ್ಆರ್, ಎಸ್ಡಿಆರ್ಎಫ್, ಅಗ್ನಿಶಾಮಕ ದಳ, ಹೋಮ್ ಗಾರ್ಡ, ಪೊಲೀಸ್ ಮತ್ತು ವೈದ್ಯಕೀಯ ತಂಡಗಳನ್ನು ಸನ್ನದ್ಧ ಸ್ಥಿತಿಯಲ್ಲಿಡಲಾಗಿದೆ.