ನೆರೆ-ಅತಿವೃಷ್ಠಿಯಿಂದ ರೂ.80 ಕೋಟಿಗೂ ಅಧಿಕ ಹಾನಿ ರಾಜ್ಯದ ನೆರೆ ಪರಿಹಾರಕ್ಕೆ ಕೇಂದ್ರ ಸಕರ್ಾರದಿಂದ ಎಲ್ಲ ಸಹಕಾರ: ಜೋಶಿ

ಹಾವೇರಿ: ಕೇಂದ್ರ ಸಕರ್ಾರ ರಾಜ್ಯದಲ್ಲಿ ಅತಿವೃಷ್ಠಿ ಹಾಗೂ ಪ್ರವಾಹ ಪರಿಹಾರ ಕಾರ್ಯಗಳಿಗೆ ರಾಜ್ಯ ಸಕರ್ಾರಕ್ಕೆ ಎಲ್ಲ ನೆರವನ್ನು ನೀಡಲಿದೆ  ಎಂದು ಕೇಂದ್ರ ಸಂಸದೀಯ ವ್ಯವಹಾರ, ಕಲ್ಲಿದ್ದಲು ಹಾಗೂ ಗಣಿ ಸಚಿವರಾದ  ಪ್ರಹ್ಲಾದ ಜೋಶಿ ಅವರು ತಿಳಿಸಿದರು.

ಜಿಲ್ಲೆಯ ಶಿಗ್ಗಾಂವ ತಾಲೂಕಿನ ನಾಗನೂರ ಕೆರೆ ಹಾನಿ ಪ್ರದೇಶ ಹಾಗೂ ವರದಾ ನದಿಯಿಂದ ಹಾನಿಯಾಗಿರುವ ಸವಣೂರ ತಾಲೂಕಿನ ಕುಣಿಮೆಳ್ಳಿಹಳ್ಳಿ ಗ್ರಾಮಕ್ಕೆ ಭೇಟಿ ನೀಡಿ  ಪರಿಹಾರ ಕೇಂದ್ರ ಹಾಗೂ ನದಿ ಪ್ರವಾಹದಿಂದ ಹಾಳಾಗಿರುವ ಸೇತುವೆ, ಬೆಳೆಹಾನಿ ಹಾಗೂ ಮನೆಗಳನ್ನು ವೀಕ್ಷಿಸಿ ಮಾಧ್ಯಮದವರೊಂದಿಗೆ ಮಾತನಾಡಿದರು.

  ಹಾವೇರಿ ಜಿಲ್ಲೆ ಸೇರಿದಂತೆ ರಾಜ್ಯದ 17 ಜಿಲ್ಲೆಗಳಲ್ಲಿ ನೆರೆ ಹಾಗೂ ಅತಿವೃಷ್ಠಿಯಿಂದ ಅಪಾರ ಹಾನಿಯಾಗಿದ್ದು ತುತರ್ು ಪರಿಹಾರಕ್ಕೆ ಪ್ರಥಮ ಕಂತಿನಲ್ಲಿ 10 ಸಾವಿರ ಕೋಟಿ ನೀಡಬೇಕು. ತತಕ್ಷಣ  ಮೂರು ಸಾವಿರ ಕೋಟಿ ರೂ. ಬಿಡುಗಡೆ ಮಾಡಬೇಕು ಎಂದು ರಾಜ್ಯ ಸಕರ್ಾರ ಕೇಂದ್ರಕ್ಕೆ ಕೋರಿದೆ.

      ಸಂತ್ರಸ್ಥರಾಗಿರುವ ಜನರ ಬದುಕು ಹಾಗೂ ಮೂಲಭೂತ ಸೌಕರ್ಯ ಒಳಗೊಂಡಂತೆ ಪರಿಹಾರ ಕಾರ್ಯಕ್ಕಾಗಿ ಅಗತ್ಯ ನೆರವು ಒದಗಿಸಲಾಗುವುದು ಎಂದು   ಹೇಳಿದರು.

       ಪ್ರವಾಹ ಕುರಿತಂತೆ ಕೇಂದ್ರದೊಂದಿಗೆ ಚಚರ್ಿಸಲು ರಾಜ್ಯದ ಮಾನ್ಯ ಮುಖ್ಯಮಂತ್ರಿಗಳು ಆಗಸ್ಟ್ 16 ರಂದು ದೆಹಲಿಗೆ ಆಗಮಿಸಲಿದ್ದಾರೆ. ಯಡಿಯೂರಪ್ಪನವರು ರಾಜ್ಯದ ಮುಖ್ಯಮಂತ್ರಿಗಳಾಗಿ ಒನ್ಮ್ಯಾನ್ ಆಮರ್ಿಯಾಗಿ ಪ್ರವಾಹ ಪರಿಹಾರ ಕಾರ್ಯಗಳಲ್ಲಿ ತೊಡಗಿಕೊಂಡಿದ್ದಾರೆ.  ನಮ್ಮ ಎಲ್ಲ ಶಾಸಕರೂ, ಸಂಸದರು ಸಹ ನೆರವು ಒದಗಿಸಿದ್ದಾರೆ. ಸಚಿವರಿಲ್ಲದ ಕಾರಣ ನೆರೆ ಪರಿಹಾರ ಕಾರ್ಯಕ್ಕೆ ಯಾವುದೇ ತೊಂದರೆಯಾಗಿಲ್ಲ. 

       ಅಧಿಕಾರಿಗಳು ಸಮರ್ಥವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಸಂತ್ರಸ್ಥರಿಗೆ ತತಕ್ಷಣ ಪರಿಹಾರ ಒದಗಿಸುವಂತೆ ಈಗಾಗಲೇ ರಾಜ್ಯ ಸಕರ್ಾರ ಅಧಿಕಾರಿಗಳಿಗೆ ಸೂಚನೆ ನೀಡಿದೆ ಎಂದು ತಿಳಿಸಿದರು.

ಪ್ರವಾಹದಿಂದ ನೊಂದ ಜನರಿಗೆ ಪ್ರಮುಖವಾಗಿ ತಾಡಪಲ್ ಹಾಗೂ ಸೊಳ್ಳೆ ಪರದೆಗಳನ್ನು ನೀಡುವುದು ಅಗತ್ಯವಾಗಿದೆ.  ಸ್ಥಳೀಯ ಶಾಸಕ ಬಸವರಾಜ ಬೊಮ್ಮಾಯಿ ಅವರ ಬೇಡಿಕೆಯಿಂತೆ ಐಓಎಸ್ ಕಂಪನಿಯ ತಾಡಪಲ್ಗಳನ್ನು ಪೂರೈಸಲಾಗುತ್ತಿದೆ. ಈಗಾಗಲೇ ಸ್ವಯಂ ಸಂಸ್ಥೆಗಳಿಗೆ ತಾಡಪಲ್ಗಳನ್ನು ನೀಡಲು ಸೂಚಿಸಲಾಗಿದೆ ಎಂದು ತಿಳಿಸಿದರು.

  ಸಂತ್ರಸ್ಥರಿಗೆ ಸಾಂತ್ವಾನ: ಸವಣೂರ ತಾಲೂಕಿನ ಕುಣಿಮೆಳ್ಳಿಹಳ್ಳಿಯ ವರದಾ ನದಿ ಪ್ರವಾಹ ಸಂತ್ರಸ್ಥರ ಪರಿಹಾರ ಕೇಂದ್ರಕ್ಕೆ ತೆರಳಿ ಜನರಿಗೆ ಹಣ್ಣು ವಿತರಿಸಿ ಸಾಂತ್ವಾನ ಹೇಳಿದರು. ಈ ಸಂದರ್ಭದಲ್ಲಿ ಸ್ಥಳಾಂತರಿಸಿ ಶಾಶ್ವತ ಮನೆ ಬೇಡಿಕೆ ಸಲ್ಲಿಸಿದ ಸಂತ್ರಸ್ಥರನ್ನು ಉದ್ದೇಶಿಸಿ ಮಾತನಾಡಿದ ಸಚಿವ ಪ್ರಹ್ಲಾದ ಜೋಶಿ ಅವರು ಈಗಾಗಲೇ ಗ್ರಾಮ ಸ್ಥಳಾಂತರಿಸಿ ಮನೆಗಳನ್ನು ಹಂಚಿಕೆ ಮಾಡಲಾಗಿದೆ. ತಾವು ಅಲ್ಲಿಗೆ ಸ್ಥಳಾಂತರಗೊಳ್ಳಬೇಕು.

  ನಿಮ್ಮ ಕುಟುಂಬ ವಿಭಾಗವಾಗಿ ಹೆಚ್ಚು ಕುಟುಂಬಗಳಲ್ಲಿ ಮತ್ತೊಮ್ಮೆ ಸವರ್ೇಮಾಡಿ ಪ್ರತಿಯೊಬ್ಬರಿಗೂ ಮನೆಗಳನ್ನು ನೀಡಲಾಗುವುದು. 

    ಎಲ್ಲರೂ ಸುರಕ್ಷಿತ ಸ್ಥಳಕ್ಕೆ ತೆರಬೇಕು. ಈಗಾಗಲೇ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇವೆ. ಜಿಪಿಎಸ್ ಮೂಲಕ ಮನೆ ವಿವರವನ್ನು ಸಂಗ್ರಹಿಸಿ ಅಗತ್ಯ ಕ್ರಮಕೈಗೊಳ್ಳಲಿದ್ದಾರೆ. ಮಾರ್ಗಸೂಚಿಯಂತೆ ಸಂತ್ರಸ್ಥರಿಗೆ ಪರಿಹಾರ ನೀಡಲಾಗುವುದು ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಕೃಷ್ಣ ಬಾಜಪೇಯಿ ಅವರು ಜಿಲ್ಲೆಯ ಅತಿವೃಷ್ಠಿ ಹಾಗೂ ನೆರೆಹಾನಿ ಕುರಿತಂತೆ ಕೇಂದ್ರ ಸಚಿವರಿಗೆ  ಮಾಹಿತಿ ನೀಡಿದರು.

  ಜಿ.ಪಂ.ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಲೀಲಾವತಿ, ಸವಣೂರ ಉಪ ವಿಭಾಗಾಧಿಕಾರಿ ಹರ್ಷಲ್ ನಾರಾಯಣ ಬೋಯಾರ್ ಇತರರು ಉಪಸ್ಥಿತರಿದ್ದರು.