ಮಾಸ್ಕೋ, ಮೇ 26, ಜಗತ್ತಿನಾದ್ಯಂತ ಕೊರೊನಾ ವೈರಸ್ ಸೋಂಕು ದೃಢಪಟ್ಟ ಪ್ರಕರಣಗಳ ಸಂಖ್ಯೆ 5.3 ದಶಲಕ್ಷ ಗಡಿ ದಾಟಿದ್ದು, ಕೋವಿಡ್ -19 ಸೋಂಕಿನಿಂದ ಮೃತಪಟ್ಟವರ ಸಂಖ್ಯೆ 3 ಲಕ್ಷದ 42 ಸಾವಿರಕ್ಕೂ ಮೀರಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.ಜಗತ್ತಿನೆಲ್ಲೆಡೆ 1 ಲಕ್ಷದ 2 ಸಾವಿರದ 790 ಹೊಸ ಸೋಂಕು ಪ್ರಕರಗಳು ವರದಿಯಾಗಿದ್ದು, ಇದರಿಂದ ಒಟ್ಟಾರೆ ಸೋಂಕು ಪೀಡಿತರ ಸಂಖ್ಯೆ 5,307,298ಕ್ಕೆ ಏರಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ. ಈ ಅವಧಿಯಲ್ಲಿ 4,383 ಮಂದಿ ಸಾವನ್ನಪ್ಪಿದ್ದು, ಒಟ್ಟು ಸಾವಿನ ಸಂಖ್ಯೆ 3 ಲಕ್ಷದ 42 ಸಾವಿರ 70ಕ್ಕೆ ಏರಿಕೆಯಾಗಿದೆ. ವಿಶ್ವ ಆರೋಗ್ಯ ಸಂಸ್ಥೆ ಮಾರ್ಚ್ 11ರಂದು ಕೋವಿಡ್ -19 ಸೋಂಕು ಹರಡುವಿಕೆಯನ್ನು ಸಾಂಕ್ರಾಮಿಕ ಎಂದು ಘೋಷಿಸಿತ್ತು.